ಸರ್ಕಾರಿ ಯೋಜನೆಗಳು

ಶಾಲೆಗೆ ಹೋಗ್ತಿರುವ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

By admin

March 01, 2018

ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.

ಪ್ರತಿಭಾವಂತ ಹಾಗೂ ಭಿನ್ನವಾಗಿ ಯೋಚನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಈ ಯೋಜನೆ ಶುರು ಮಾಡಿದೆ.ಇನ್ನೋವೇಶನ್ ಪ್ರಶಸ್ತಿಗಾಗಿ ಎಸ್ ಐ ಆರ್, ಮೂಲ ಪರಿಕಲ್ಪನೆಗಳನ್ನು ಅಥವಾ ತಾಂತ್ರಿಕ ವಿನ್ಯಾಸ ಪರಿಕಲ್ಪನೆಯನ್ನು ಮಕ್ಕಳಿಂದ ಆಹ್ವಾನಿಸಿದೆ. 2018, ಜನವರಿ 1 ಪ್ರಕಾರ 18 ವರ್ಷ ಕೆಳಗಿನ ಹಾಗೂ ಯಾವುದೇ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ.

ಮಕ್ಕಳ ಪರಿಕಲ್ಪನೆ ಹೊಸದಾಗಿರಬೇಕು. ಇತ್ತೀಚಿನ ಸಮಸ್ಯೆಗೆ ಪರಿಹಾರವಾಗಿದ್ದರೆ ಉತ್ತಮ. ಆಯ್ಕೆಯಾದ 50 ಮಕ್ಕಳಿಗೆ ತರಬೇತಿ ನೀಡಲಾಗುವುದು. ಜೊತೆಗೆ ತಮ್ಮ ಪರಿಕಲ್ಪನೆಯನ್ನು ಮಕ್ಕಳು ಎಸ್ ಐ ಆರ್ ಮುಂದಿಡಬೇಕಾಗುತ್ತದೆ. ಆಯ್ಕೆಯಾದ ಐದು ಮಕ್ಕಳಿಗೆ ಬಹುಮಾನ ಸಿಗಲಿದೆ. 1 ಲಕ್ಷ, 50 ಸಾವಿರ, 30 ಸಾವಿರ, 20 ಸಾವಿರ ಹಾಗೂ 10 ಸಾವಿರ ರೂಪಾಯಿ ನೀಡಲಾಗುವುದು.

ಶಾಲೆಯ ವಿದ್ಯಾರ್ಥಿಗಳ ಒಂದು ಗುಂಪು ಹೊಸದೊಂದು ಆವಿಷ್ಕಾರ ಮಾಡಿದ್ದರೂ ಒಬ್ಬ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ಮಾತ್ರ ಇದ್ರಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಹಿಂದಿ ಅಥವಾ ಇಂಗ್ಲೀಷ್ ನಲ್ಲಿ 5000 ಶಬ್ಧಕ್ಕಿಂತ ಹೆಚ್ಚಾಗದೆ ಪ್ರಸ್ತಾವನೆ ಕಳುಹಿಸಬೇಕು. ಇದ್ರ ಜೊತೆ ಶಾಲೆ ಹೆಸರು ಹಾಗೂ ಪ್ರಿನ್ಸಿಪಾಲರ ಪ್ರಮಾಣ ಪತ್ರವಿರಬೇಕು.

ಹೆಚ್ಚಿನ ಮಾಹಿತಿಗೆ  ಭೇಟಿ ನೀಡಿ:-www.csir.res.in ಅರ್ಜಿ ಸಲ್ಲಿಸಲು ಮಾರ್ಚ್ 31ರವರೆಗೆ ಅವಕಾಶವಿದೆ.