ಆಧ್ಯಾತ್ಮ, ದೇವರು-ಧರ್ಮ

ರಾಯರು ಇನ್ನೂ ಬದುಕಿದ್ದಾರೆ ಎನ್ನುವುದಕ್ಕೆ ಇಲ್ಲಿವೆ ಸಾಕ್ಷಿಗಳು ಮತ್ತು ರಾಯರ ಪವಾಡಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

9021

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ವ್ರತಾಯಚ !

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೆ !!

ಗುರುರಾಯರು ಪ್ರತಿಯೊಬ್ಬ ಭಕ್ತರ ಮನದಲ್ಲಿ ಇಂದಿಗೂ ಬದುಕಿದ್ದಾರೆ. ಪ್ರಹ್ಲಾದರಾಗಿ – ವ್ಯಾಸರಾಜರಾಗಿ ನಂತರ ರಾಘವೇಂದ್ರ ಯತಿರಾಜರಾದ ಕಲಿಯುಗದ ಕಾಮಧೇನು ಶ್ರೀಗುರುರಾಯರು…

ಗುರು ರಾಘವೇಂದ್ರರಾಯರ ಅವತಾರವಾಗಿದ್ದು ಹೇಗೆ..?

ಮಂತ್ರಾಲಯದ ಗುರು ರಾಘವೇಂದ್ರರಾಯರೇ ನರಸಿಂಹಾವತಾರಕ್ಕೆ ಸಹಕಾರಿಯಾದ ಪ್ರಹ್ಲಾದರು.ಪೂರ್ವದಲ್ಲಿ ಸೃಷ್ಟಿಕರ್ತ ಬ್ರಹ್ಮದೇವನ ದೇವಗಣಗಳಲ್ಲಿ ಶಂಕು ಕರ್ಣರಾಗಿದ್ದ ರಾಯರು ಬ್ರಹ್ಮದೇವನ ಶಾಪದಿಂದ ಭಕ್ತ ಪ್ರಹ್ಲಾದರಾಗಿ ಭೂಲೋಕದಲ್ಲಿ ಹುಟ್ಟಿ, ಲೋಕಕಲ್ಯಾಣದ ಬಳಿಕ ತಮ್ಮ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಜನಿಸಿದರು. ವ್ಯಾಸರ ಅವತಾರದ ಬಳಿಕ ಶ್ರೀ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸಿ, ತಮ್ಮ ಬಳಿಗೆ ಬರುವ ಭಕ್ತಕೋಟಿಯ ಸಂಕಷ್ಟ ಪರಿಹರಿಸುತಿಹರು. ಅದಕ್ಕೆ ಭಕ್ತರು ರಾಯರನ್ನು ಪ್ರಹ್ಲಾದ – ವ್ಯಾಸಮುನಿಯೇ – ರಾಘವೇಂದ್ರ ಯತಿಯೇ ಎಂದು ಆರಾಸುವುದು.

ಗುರು ರಾಘವೇಂದ್ರ ಸ್ವಾಮಿಗಳ ಜನನ

16 ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗೆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರ ತೀರ್ಥರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ, ವೀಣಾ ವೆಂಕಣ್ಣಭಟ್ಟ. ಎಲ್ಲರಂತೆ ವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರು. ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಖಾಂಡ ಪಾಂಡಿತ್ಯ ಗಳಿಸಿದರು.
ಶ್ರೀಸುಂದ್ರತೀರ್ಥರಿಂದ ಸರ್ವಜ್ಞ ಪೀಠವನ್ನು ಅಲಂಕರಿಸಿದ ಬಳಿಕ ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರು. ತಮ್ಮ ಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವ ಕಲಿಯುಗದ ಕಾಮಧೇನು ಶ್ರೀ ಗುರು ರಾಘವೇಂದ್ರರಾದರು.

ಗುರು ರಾಯರ ಕೃತಿಗಳು

ರಾಯರು ಕೇವಲ ಯತಿಗಳಷ್ಟೇ ಅಲ್ಲ. ಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರು. ಸಂಸ್ಕೃತದಲ್ಲಿ ‘ಪರಿಮಳ ’, ‘ನ್ಯಾಯಮುಕ್ತಾವಳಿ’ , ‘ತತ್ವಮಂಜಿರಿ’, ‘ಸೂತ್ರಭಾಷ್ಯ’, ‘ಭಾರದೀಪ’, ಬ್ರಹ್ಮಸೂತ್ರಭಾಷ್ಯ ತತ್ತ್ವ ಪ್ರಕಾಶಿಕಾ ಭಾವದೀಪ, ತತ್ತ್ವೋದ್ದೀಪಟೀಕಾ, ಪ್ರಮಾಣ ಪದ್ಧತಿ ಟಿಪ್ಪಣಿ, ತರ್ಕತಾಂಡವ ಟಿಪ್ಪಣಿ, ‘ತಾತ್ಪರ್ಯ ನಿರ್ಣಯ’ವೇ ಮುಂತಾದ ಅಮೂಲ್ಯ ಕೃತಿಗಳನ್ನು ಬರೆದಿರುವ ಗುರು ರಾಘವೇಂದ್ರ ತೀರ್ಥರು ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥ ವಿವರಣೆ ಹಾಗೂ ಭಾಷ್ಯಗಳನ್ನೂ ಬರೆದಿದ್ದಾರೆ. ಗುರುರಾಯರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.

ಇನ್ನೂ 37೦ ವರ್ಷಗಳ ಕಾಲ ಬೃಂದಾವನದಲ್ಲಿಯೇ ಇರುತ್ತಾರೆ ರಾಯರು.!

ರಾಯರು ಬೃಂದಾವನ ಪ್ರವೇಶಿಸುವ ಮೊದಲು ತಾವು ಒಟ್ಟು 700 ವರ್ಷಗಳ ಕಾಲ ಸಶರೀರದೊಂದಿಗೆ ಬೃಂದಾವನದಲ್ಲಿದ್ದು, ಭಕ್ತರ ಸಂಕಷ್ಟ ಪರಿಹರಿಸುವುದಾಗಿ ವಚನ ನೀಡಿದ್ದರು.ಗುರುರಾಯರು ಸಶರೀರದೊಂದಿಗೆ ಬೃಂದಾವನಸ್ಥರಾಗಿ 339 ವರ್ಷಗಳು ಉರುಳಿವೆ. ಆದರೆ, ಕಲಿಯುಗದ ಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇನ್ನೂ 37೦ ವರ್ಷಗಳ ಕಾಲ ಇದ್ದು, ಸರ್ವರನ್ನೂ ಸಲಹುತ್ತಾರೆ ಎಂಬ ನಂಬಿಕೆ ಭಕ್ತರದು.ಆದರಂತೆಯೇ ರಾಯರು ಭಕ್ತರನ್ನು ಕಾಪಾಡುತ್ತಿದ್ದಾರೆ.

ರಾಯರು ಇನ್ನೂ ಬೃಂದಾವನದಲ್ಲೇ ಇದ್ದಾರೆ ಎಂಬುದಕ್ಕೆ ಕೆಲವು ದುಷ್ಟಾಂತಗಳೂ ಇವೆ…

ರಾಯರು ಬೃಂದಾವನಸ್ಥರಾದ 200 ವರ್ಷಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಉದಾಹರಣೆ ಇದೆ. ಈಗ್ಗೆ ಒಂದೂವರೆ ದಶಕಗಳ ಬ್ರಿಟಿಷ್ ಚಕ್ರಾಪತ್ಯದ ಕಲೆಕ್ಟರಾಗಿದ್ದ, ಸರ್ ಥಾಮಸ್ ಮನ್ರೋ ಅವರಿಗೆ ರಾಯರು ದರ್ಶನ ನೀಡಿದ್ದರು ಎನ್ನುತ್ತದೆ ಇತಿಹಾಸ. ರಾಯರು ಇನ್ನೂ ಸಶರಿರೀಗಳಾಗಿ ಬೃಂದಾವನದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ.

#ಆರಾಧನೆ:

ಪ್ರತಿವರ್ಷ ಶ್ರಾವಣ ಮಾಸದಲ್ಲಿ ಗುರುರಾಯರ ಆರಾಧನೆ ನಡೆಯುತ್ತದೆ. ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ್ನು ಭಕ್ತರು, ಗುರುರಾಯರ ಆರಾಧನೆ ಎಂದು ಆಚರಿಸುತ್ತಾರೆ. ಈ ಆರಾಧನೆ ಮೂರು ದಿನಗಳ ಕಾಲ ನಡೆಯುತ್ತದೆ. ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಎಂದು ಆಚರಿಸಲಾಗುವ ಈ ಮೂರೂ ದಿನಗಳಂದು, ದೇಶಾದ್ಯಂತ ಇರುವ ಎಲ್ಲ ರಾಯರ ಮಠದಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗುರುರಾಘವೇಂದ್ರರ ವೈಭವ, ರಾಯರ ಚರಿತ್ರೆಯ ಪಠಣ, ರಾಯರ ಪವಾಡಗಳ ಪ್ರವಚನ ನಡೆಯುತ್ತದೆ.

ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟ. ತಾಯಿಯ ಹೆಸರು ಗೋಪಿಕಾಂಬ. ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆ ಯಲ್ಲಿ ಪಂಡಿತರು. ವಿಜಯನಗರದ ರಾಜನಾದ ಕೃಷ್ಣದೇವರಾಯನಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥನನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬ ಅವರ ಹೆಸರು. ವೆಂಕಟನಾಥನು ೧೫೯೫ರಲ್ಲಿ ಈಗಿನ ತಮಿಳುನಾಡುವಿನ ಭುವನಗಿರಿ ಎಂಬಲ್ಲಿ ಜನಿಸಿದರು.

ವೆಂಕಟನಾಥನು ಬಾಲ್ಯದಲ್ಲಿಯೇ ತುಂಬಾ ಬುದ್ಧಿವಂತ ಬಾಲಕನಾಗಿದ್ದನು. ಇವರ ತಂದೆ ಚಿಕ್ಕ ವಯಸ್ಸಿನಲ್ಲೆ ವಿಧಿವಶರಾಗಿದ್ದರಿಂದ ಸಂಸಾರದ ಜವಾಬ್ದಾರಿ ಎಲ್ಲ ಅಣ್ಣ ಗುರುರಾಜನ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಸೋದರಮಾವನಾದ ಮಧುರೈನ ಲಕ್ಶ್ಮಿ ನರಸಿಂಹಾಚಾರ್ಯರಲ್ಲಿ ಆಯಿತು.ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ನೆಯೊಡನೆ ಆಯಿತು.

ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡತೊಡಗಿದರು. ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲು ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತಿದ್ದರು. ಅವರ ಆರ್ಥಿಕ ಸ್ಥಿತಿ ಆಗ ಚೆನ್ನಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯು ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮಸ್ಮರಣೆ ಬಿಡಲಿಲ್ಲ.

ಹರಿದ ಬಟ್ಟೆ, ಒಡಕು ಪಾತ್ರೆ, ಕಿತ್ತುಹೋದ ನೆಲ, ಸೋರುವ ಛಾವಣಿ, ಮುರುಕು ಮನೆ, ಸಾಲದಕ್ಕೆ ಮನೆಯಲ್ಲಿದ್ದ ಅಲ್ಪಸ್ವಲ್ಪವನ್ನು ಕಳ್ಳರು ದೋಚಿಕೊಂಡು ಹೋದರು. ಎಲ್ಲರಿಗೆ ಪಕ್ಷಕೊಮ್ಮೆ ಬರುವ ಏಕಾದಶಿ ಇವರಿಗೆ ಐದಾರು ಬಾರಿ ಬರತೊಡಗಿತು. ಆದರೆ ಇವರು ಇನ್ನೊಬ್ಬರಿಗೆ ಕೈ ಚಾಚಲಿಲ್ಲ. ಮಾ ಗೃಧಃ ಕಸ್ಯಸಿದ್ಧನಂ’ ಎಂಬ ಮಾತು ಅವರ ಅವರ ನರನಾಡಿಯಲ್ಲಿ ಮಿಡಿಯುತ್ತಿತ್ತು. ‘ದೇವರು ಕೊಡುವ ಸಂಪತ್ತು ಬೇಕು, ದೇವರು ಕೊಡುವ ಬಡತನ ಏಕೆ ಬೇಡ’ ಎನ್ನುತ್ತಿದ್ದರು.

ಪ್ರಾರಬ್ಧಕರ್ಮವನ್ನು ಅನುಭವಿಸಿಯೇ ಕಳೆಯಬೇಕಲ್ಲವೇ? ಶ್ರೀಮದಾನಂದತೀರ್ಥರ ಶಾಸ್ತ್ರಾಮೃತದಲ್ಲಿ ಮುಳುಗಿದ್ದ ಅವರ ಹೃದಯಕ್ಕೆ ದಾರಿದ್ರ್ಯದ ಕಾವು ತಟ್ಟಲೇ ಇಲ್ಲ. ಸರಸ್ವತಿ ತಕ್ಕ ಪತ್ನಿಯಾಗಿದ್ದಳು. ಧರ್ಮಪತ್ನಿ ಎಂಬ ಪಟ್ಟ ಅನ್ವರ್ಥಕವಾಗಿತ್ತು. ತಾವು ಮನೆಯಲ್ಲಿ ಉಪವಾಸ ಇದ್ದುದು ಮಠದ ಜನರಿಗೆ ತಿಳಿಯಬಾರದೆಂದು ಗಂಧಾಕ್ಷತೆಗಳನ್ನು ಧರಿಸಿಯೇ ಮಠಕ್ಕೆ ಹೋಗುತ್ತಿದ್ದರಂತೆ.

ಒಮ್ಮೆ ವೆಂಕಟನಾಥರಿಗೆ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಆದರೆ ಆಹ್ವಾನವಿತ್ತವರು ಇವರಿಗೆ ಸರಿಯಾದ ಗೌರವ ನೀಡದೆ ಗಂಧ ಅರಿಯುವ ಕೆಲಸ ನೀಡಿದರು. ವೆಂಕಟನಾಥರು ಆದರೂ ಬೇಸರಿಸದೆ ಕೊಟ್ಟ ಗಂಧದ ಕೊರಡನ್ನು ಪದ್ಧತಿಯ ಪ್ರಕಾರ ಅಗ್ನಿ ಸೂಕ್ತ ಪಠಿಸುತ್ತ ತೇಯ್ದರು. ತೇಯ್ದ ಗಂಧವನ್ನು ಲೇಪಿಸಿಗೊಂಡ ವಿಪ್ರರಿಗೆ ವಿಪರೀತ ಉರಿ ಶುರುವಾಯಿತು. ಹೀಗಾಗಲು ಕಾರಣ ಹುಡುಕಿ ಹೊರಟ ಮುಖ್ಯಸ್ಥರು ವೆಂಕಟನಾಥನನ್ನು ಕಾರಣ ಕೇಳಿದರು. ವೆಂಕಟನಾಥರು ಅಗ್ನಿ ಸೂಕ್ತ ಉಚ್ಛರಿಸುತ್ತ ಗಂಧ ತೇಯ್ದಿರುವದಾಗಿ ಹೇಳಿ, ಅದರಿಂದಲೇ ಹೀಗಾಗಿರಬಹುದೆಂದು ಊಹಿಸಿದರು. ಮತ್ತು ವರುಣ ಮಂತ್ರ ವನ್ನು ಪಠಿಸಿದಾಗ ಸರ್ವರ ಉರಿಯು ಶಮನವಾಯಿತು. ಇದು ವೆಂಕಟನಾಥರ ಸ್ತೊತ್ರದ ಶಕ್ತಿ.

ಗುರು ರಾಯರ ಸನ್ಯಾಸಾಶ್ರಮ

ಶ್ರೀ ಸುಧೀಂದ್ರ ತೀರ್ಥರು ತಮ್ಮ ಪೀಠಕ್ಕೆ ಯೋಗ್ಯ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದರು. ವೆಂಕಟನಾಥನನ್ನು ಮೊದಲ ಬಾರಿ ಕಂಡಾಗ ಅವರಿಗೆ ತಮ್ಮ ಉತ್ತರಾಧಿಕಾರಿಯನ್ನು ಕಂಡ ಅನುಭವವಾಗಿತ್ತಂತೆ. ಈಗ ಅವರಿಗೆ ಸ್ವಪ್ನ ಸೂಚನೆಯೂ ಆಯಿತು. ಶಿಷ್ಯ ವೆಂಕಟನಾಥನನ್ನು ಕರೆದು ಹೇಳಿದರು. ‘ಶ್ರೀ ರಾಮದೇವರಿಗೆ ಇನ್ನು ಮೇಲೆ ನಿಮ್ಮಿಂದ ಪೂಜೆಯಾಗಬೇಕೆಂತೆ’. ಆಗ ಶಿಷ್ಯನಿಗೆ ದಿಗ್ಭ್ರಮೆ.

‘ನಾನೆಲ್ಲಿ ? ಸನ್ಯಾಸವೆಲ್ಲಿ ? ವೇದವಿದ್ಯಾ ಸಾಮ್ರಾಜ್ಯವೆಲ್ಲಿ ? ಸಂಸಾರಭಾರ ಹೊತ್ತವ ಇಂತಹ ಯತ್ನ ಮಾಡಲಾರ.’ ಗುರುಗಳು ಸರ್ವವಿಧದಿಂದ ಒಪ್ಪಿಸಲು ಪ್ರಯತ್ನಿಸಿದರೂ, ಆದರೆ ಶಿಷ್ಯ ಒಪ್ಪುತ್ತಿಲ್ಲ. ’ನನ್ನ ಪತ್ನಿಗೆ ಇನ್ನೂ ಚಿಕ್ಕ ವಯಸ್ಸು. ನನ್ನ ವಯಸ್ಸೂ ಚಿಕ್ಕದೇ. ಮಗ ಲಕ್ಷ್ಮೀ ನಾರಾಯಣನಿಗೆ ಇನ್ನೂ ಉಪನಯನವಾಗಿಲ್ಲ. ಸಂಸಾರ ಹೀಗಿರುವಾಗ ಸನ್ಯಾಸದ ಮಾತೆಲ್ಲಿ?’ ಗುರುಶಿಷ್ಯರ ಮಧ್ಯೆ ದೀರ್ಘ ಚರ್ಚೆ ನಡೆಯಿತು. ಕೊನೆಗೆ ಗುರುಗಳು ಹೇಳಿದರು. ‘ನಿನಗೆ ಪೀಠ ಬೇಡವಾಗಿರಬಹುದು. ಆದರೆ ಪೀಠಕ್ಕೆ ನೀವು ಬೇಕು’ ಎಂದು. ಮಗನ ಉಪನಯನ, ವಿದ್ಯಾಭ್ಯಾಸ ಮಠದಲ್ಲಿ ಆಗಬಹುದು. ಮನೆಗಿಂತ ಅವನಿಗೆ ಮಠವೇ ಶ್ರೇಷ್ಠವಾಗಬಹುದು. ಆದರೆ ಕೈ ಹಿಡಿದ ಪತ್ನಿಯ ಗತಿಯೇನು ? ಎಂಬ ಚಿಂತೆ ಅವರನ್ನು ಆವರಿಸಿತ್ತು. ಭಗವಂತ ನೀನೇ ದಾರಿತೋರಬೇಕು ಎಂದು ಚಿಂತಿಸುತ್ತ ನಿದ್ರೆಯಿಲ್ಲದೆ ಹಲವಾರು ರಾತ್ರಿ ಕಳೆದರು.

ಗುರು ರಾಯರಿಗೆ ಸರಸ್ವತೀ ದೇವಿಯಿಂದ ಆಗ್ನೆ

ಅದರೆ ಮನೆಯಲ್ಲಿ, ಸಾಕ್ಷಾತ್ ಸರಸ್ವತೀ ದೇವಿಯೇ ಸ್ವಪ್ನದಲ್ಲಿ ಕಂಡು ಸನ್ಯಾಸಾಶ್ರಮ ಸ್ವೀಕರಿಸಲು ಆಗ್ನೆಯಿತ್ತಳು. ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥನು ಫಾಲ್ಗುಣ ಶುದ್ಧ ಬಿದಿಗೆ ಯಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮ ವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತರಾದರು.

ಗುರು ರಾಯರ ಪತ್ನಿ ಆತ್ಮಹತ್ಯ

ಸನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಯು ಭಾವಿಯಲ್ಲಿ ಬಿದ್ದು ಆತ್ಮಹತ್ತೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀ ರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದಳು. ತಮ್ಮ ಪೂರ್ವಾಶ್ರಮದ ಪತ್ನಿಯನ್ನು ಈ ಅವತಾರದಲ್ಲಿ ನೋಡಿ ತೀರ್ಥವನ್ನು ಆಕೆಯ ಮೇಲೆ ಸಂಪ್ರೊಕ್ಷಿಸಿ ಆಕೆಗೆ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

ಶ್ರೀ ಯಾದವೇಂದ್ರ ಎಂಬ ಯತಿಗಳು ಶ್ರೀ ಸುಧೀಂದ್ರತೀರ್ಥರ ಶಿಷ್ಯರು. ಶ್ರೀ ರಾಘವೇಂದ್ರರಿಗಿಂತ ಮೊದಲು ಸನ್ಯಾಸ ಪಡೆದಿದ್ದರು. ತಮ್ಮ ಗುರುಗಳ ಆದೇಶದಂತೆ ದೂರದೇಶಗಳಲ್ಲಿ ತತ್ತ್ವಪ್ರಚಾರ ಮಾಡುತ್ತ ಸಂಚಾರದಲ್ಲಿದ್ದರು. ಗುರುಗಳು ವೃಂದಾವನಸ್ಥರಾಗಿರುವ ಸುದ್ದಿ ತಿಳಿದು ತಂಜಾವೂರಿಗೆ ಬಂದರು.ಶ್ರೀ ರಾಘವೇಂದ್ರರು ಮಠದ ದೇವರನ್ನು ಅವರಿಗೆ ಒಪ್ಪಿಸಿ ಪೂಜೆ ಮಾಡಲು ಹೇಳಿದರು. ಮಠದ ಅಧಿಕಾರವನ್ನು ಬಿಟ್ಟುಕೊಡಲು ಸಿದ್ಧರಾದರು. ‘ನಾವು ಯಾದವೇಂದ್ರರು; ನೀವು ರಾಘವೇಂದ್ರರು.

ಸಾಮ್ರಾಜ್ಯ ಪಾಲಿಸಿದ್ದು ರಾಘವೇಂದ್ರನಾದ ಶ್ರೀ ರಾಮಚಂದ್ರನೇ ಹೊರತು, ಯಾದವೇಂದ್ರನಾದ ಶ್ರೀ ಕೃಷ್ಣನಲ್ಲ. ನಮ್ಮ ಗುರುಗಳು ದಿವ್ಯಜ್ಞಾನಿಗಳು. ಸಂಸ್ಥಾನ ಪಾಲಿಸಬೇಕಾದವರು ನೀವೇ ಎಂಬುದನ್ನು ಸೂಚಿಸಲು ಶ್ರೀ ರಾಘವೇಂದ್ರ ಎಂದೇ ನಿಮಗೆ ನಾಮಕರಣ ಮಾಡಿರುವರು. ನಿಸ್ಸಂಕೋಚದಿಂದ ಇದನ್ನೇ ನೀವು ಪಾಲಿಸಬೇಕು. ಇದು ನಮ್ಮ ಆಗ್ರಹ.’ ಇದು ಶ್ರೀ ಯಾದವೇಂದ್ರ ಅವರ ಮಾತಾಗಿತ್ತು.

ಇದು ಇಬ್ಬರ ನಡುವಿನ ಪರಸ್ಪರ ಗೌರವಕ್ಕೆ ಸಂಕೇತವಾಗಿತ್ತು. ಪೀಠದ ಆಸೆ ಇಬ್ಬರಿಗೂ ಇರಲಿಲ್ಲ. ಅವರಿಗೆ ಬೇಕಿದ್ದುದು ಪೀಠದ ಪ್ರಗತಿ ಮತ್ತು ಅದರ ಸೇವೆ ಮಾತ್ರ. ಗುರುಗಳ ಮಾತಂತೂ ಇಬ್ಬರಿಗೂ ಪ್ರಿಯ. ಸನ್ಯಾಸ ತೆಗೆದುಕೊಳ್ಳುವಾಗಲೇ ಪೀಠದ ಬಯಕೆಯನ್ನು ಹೊಂದಿರದೇ ಇದ್ದ ಯಾದವೇಂದ್ರರು ಅದನ್ನು ಈಗಲೂ ಬಯಸಲಿಲ್ಲ.

#ಗುರು ರಾಯರ ಪವಾಡಗಳು:

ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು.

ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆ ಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು.

ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು.

ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಶ್ಟ ಶಕ್ತಿಯ ನಾಶವಾಯಿತು.

ಗುರುಸಾರ್ವಭೌಮರೆಂದೂ, ಕಲಿಯುಗದ ಕಲ್ಪತರು ಕಾಮಧೇನುಗಳೆಂದೂ ಆಸ್ತಿಕ ಭಕ್ತರಲ್ಲಿ ಮನೆ ಮಾತಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ ನೂರಾರು ಗ್ರಂಥಗಳಿವೆ. ನಿಜಕ್ಕೂ ನಾವು ದನ್ಯರು. ಮರೆಯದೇ ನಿಮ್ಮೆಲ್ಲಾ ಫೇಸಬುಕ್ ಗುಂಪುಗಳಿಗೆ ಶೇರ್ ಮಾಡಿ .

ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೈಕೋರ್ಟ್ ಮಹತ್ವದ ತೀರ್ಪು:LLR ಇದ್ದರೂ ಅಪಘಾತವಾದ ವೇಳೆ ಪರಿಹಾರ ನೀಡಬೇಕು…!

    ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…

  • ಸ್ಪೂರ್ತಿ

    ಹೆಣ್ಣಿಗಿರುವ ಛಲ ಬೇರೆ ಯಾರಿಗೂ ಇಲ್ಲ, ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಹುಡುಗಿ ಉದಾಹರಣೆ..!ತಿಳಿಯಲು ಇದನ್ನು ಓದಿ..

    ಹೆಣ್ಣು ಮನಸ್ಸು ಮಾಡಿದರೆ ಎಂತಹ ಕಷ್ವವನ್ನೂ ಮೀರಿ ನಿಂತು ಛಲದಂಕಮಲ್ಲಿಯಾಗುತ್ತಾಳೆ. ಅಂಗವೈಕಲ್ಯವನ್ನೂ ಮೀರಿ ನಿಲ್ಲುವ ಸಾಮರ್ಥ ಅವಳಿಗಿದೆ. ಸಾಧನೆ ಮಾಡುವ ಮನಸ್ಸಿದ್ದರೆ ಛಲವಿದ್ದರೆ ಯಾವುದೂ ಕಷ್ಟಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ ನಿಕಿತಾ ಶುಕ್ಲಾ ಎನ್ನುವ ಈ ಹುಡುಗಿ.

  • ಹಣ ಕಾಸು

    ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

    ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ

  • ಸುದ್ದಿ

    ಬಿಗ್ ಶಾಕಿಂಗ್!ತರಗತಿಯಲ್ಲೇ ಕುಡಿದು ರಂಪಾಟ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿನಿಯರು…

    ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ. ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್ ಬೆರೆಸಿಕೊಂಡು ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುವಾಗಲೇ ಸೇವಿಸಿದ್ದಾರೆ. ಮದ್ಯ ಸೇವನೆ ಬಳಿಕ ತರಗತಿಯಲ್ಲಿ ತೂರಾಡುತ್ತಾ ಏನೇನೋ ಮಾತನಾಡಲು…

  • ಸುದ್ದಿ

    ದಾಖಲೆಯ ಬೆಲೆಗೆ ಸೇಲಾಯ್ತು ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ವಿತರಣೆ ಹಕ್ಕು…!

    ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ತೆಲುಗು ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿಬಾಬು, ಅನುಷ್ಕಾ ಶೆಟ್ಟಿ, ನಯನ ತಾರಾ, ತಮನ್ನಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ರಾಮ್ ಚರಣ್ ತೇಜ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಸುಧೀಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಈಗಾಗಲೇ ‘ಸೈರಾ ನರಸಿಂಹ…