ಸಿನಿಮಾ

ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣನವರ ನಡುವೆ ಬ್ರೇಕ್ ಅಪ್‌ ಹಾಗೇ ಹೋಯ್ತಾ..!

990

ರಕ್ಷಿತ್ ಶೆಟ್ಟಿ ನಟಿಸಿದ್ದ ಕನ್ನಡದ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಒಂದು ಹೊಸ ಟ್ರೆಂಡ್ ನ್ನೇ ಉಟ್ಟು ಹಾಕಿತ್ತು. ಕೋಟಿ ಕೋಟಿ ಹಣವನ್ನು ಗಳಿಸಿತ್ತು. ಇದಲ್ಲದೆ ಪರಭಾಷೆಯ ಚಿತ್ರಗಳಿಗೆ ಸಹ ರಿಮೇಕ್ ಆಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ್ದ ಹಲವಾರು ನಟ ನಟಿಯರ ಬದುಕಿನ ದಾರಿಯನ್ನೇ ಬದಲಾಯಿಸಿದ ಚಿತ್ರ ಇದು.

ಈ ಚಿತ್ರದ ಯಶಸ್ಸಿನ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಷ್ಮಿಕಾ ಮಂದಣ್ಣ. ಈ ಚಿತ್ರದಲ್ಲಿನ ಇವರ ಅಭಿನಯವನ್ನು ಮೆಚ್ಚಿ ಪರಭಾಷೆ ಚಿತ್ರಗಳಿಂದ ಕಾಲ್ ಶೀಟ್ ಬಂದು ಅಲ್ಲಿಯೂ ಕೂಡ ರಷ್ಮಿಕಾರವರ ಹವಾ ಜೋರಾಗಿಯೇ ಇದೆ.

ಮಂದಣ್ಣ ನಟಿಸಿದ್ದ ತೆಲುಗಿನ ಗೀತಾ ಗೋವಿಂದಂ ಚಿತ್ರ ಭರ್ಜರಿಯಾಗಿ ಕೋಟಿ ಕೋಟಿ ಬಾಚುತ್ತಿದೆ. ಇದರ ಜೊತೆಗೆ ರಶ್ಮಿಕಾ ಅಭಿನಯದ ತೆಲುಗಿನ ಮೊದಲ ಸಿನಿಮಾ ‘ಛಲೋ’ ಅವರಿಗೆ ಸಾಕಷ್ಟು ಹೆಸರು ತಂದಿತು. ಆದರೆ ಇವರಿಗೆ ಸ್ಟಾರ್‌ ಪಟ್ಟ ತಂದುಕೊಟ್ಟಿದ್ದು ವಿಜಯ್‌ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಚಿತ್ರ.

ಈ ಚಿತ್ರದ ಟೀಸರ್ ನೋಡಿ ಅದರಲ್ಲಿನ ರಷ್ಮಿಕಾ ಕಿಸ್ಸಿಂಗ್ ವಿಡಿಯೋದಿಂದ ಹಿಡಿದು ಹಲವು ಸೀನ್ ಗಳ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗರಮ್ ಆಗಿದ್ದರು.

ಇದರ ನಡುವೆ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ವೃತ್ತಿ ಕಾರಣದಿಂದಾಗಿ ಇಬ್ಬರೂ ದೂರವಾಗಲು ನಿರ್ಧಾರ ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಈಗ ಕಾರಣಾಂತರಗಳಿಂದ ಕಿರಿಕ್‌ ಪಾರ್ಟಿಯ ಕರ್ಣ ಮತ್ತು ಸಾನ್ವಿ ಪರಸ್ಪರ ದೂರವಾಗುತ್ತಿದ್ದಾರೆ.

ವಿಜಯ್‌ ದೇವರಕೊಂಡ ಮತ್ತು ರಷ್ಮಿಕಾ ಅಭಿನಯದ  ‘ಗೀತ ಗೋವಿಂದಂ’ ಸಿನಿಮಾ ರಶ್ಮಿಕಾಗೆ ಸ್ಟಾರ್‌ ಪಟ್ಟ ತಂದುಕೊಟ್ಟಿತು. ಇದರ ಬೆನ್ನಲ್ಲೇ ರಶ್ಮಿಕಾ ಮತ್ತು ರಕ್ಷಿತ್‌ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಗುಸು-ಗುಸು ಆರಂಭವಾಗಿತ್ತು. ಇಬ್ಬರೂ ಬ್ರೇಕ್ ಆಪ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಇದು ಸುಳ್ಳು ಎಂದೇ ಇಬ್ಬರೂ ಹೇಳಿಕೊಂಡಿದ್ದರು. ಆದರೆ, ಈಗ ಅದುವೇ ನಿಜವಾಗಿದೆ. ಎರಡು ಕುಟುಂಬಗಳು ಕುಳಿತು ಮಾತನಾಡಿ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದ್ವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್.

    ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಬಾಲಕೃಷ್ಣ ಚೌಬೆ (55) ಎಂಬಾತ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು. ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.  ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ…

  • ಸುದ್ದಿ

    ರಾಜ್ಯ ಸರ್ಕಾರದಿಂದ ನೆರೆ ಸಂತ್ರಸ್ತರಿಗೊಂದು ಸಿಹಿ ಸುದ್ದಿ….!

    ನೆರೆ ಸಂತ್ರಸ್ತ ಕುಟುಂಬಗಳಿಗೆ ಒಂದೇ ಕಂತಿನಲ್ಲಿ ಮನೆ ಬಾಡಿಗೆ ಹಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. 5 ತಿಂಗಳ ಮನೆಯ ಬಾಡಿಗೆಯನ್ನು ಒಂದೇ ಕಂತಿನಲ್ಲಿ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ಥರಿಗಾಗಿ ಮನೆ ಬಾಡಿಗೆಗೆ ಮಾಸಿಕ 5000 ರೂ. ನೀಡಲಾಗಿದೆ. ಮಾಲೀಕರು ಮುಂಗಡ ಹಣ ಕೊಡುವಂತೆ ಕೇಳುವುದರಿಂದ 5 ತಿಂಗಳ ಬಾಡಿಗೆ 25 ಸಾವಿರ ರೂ.ಗಳನ್ನು ಒಂದೇ ಕಂತಿನಲ್ಲಿ ನೀಡಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಪ್ರವಾಹಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ…

  • ಸಿನಿಮಾ

    ಹೋಟೆಲ್ ನಿಂದ ಎಸ್ಕೇಪ್ ಹಾಗಿದ್ದೇಕೆ ನಟಿ ಪೂಜಾ ಗಾಂಧಿ!

    ಸ್ಯಾಂಡಲ್ ವುಡ್ ಸ್ಟಾರ್ ನಟಿಯ ವಿರುದ್ಧ ದೂರು ದಾಖಲಾಗಿದೆ. ಕನ್ನಡ ಸಿನಿರಸಿಕರನ್ನ ಮಳೆಯಲ್ಲಿ ಮಿಂದೇಳಿಸಿದ ನಟಿ ಹೋಟೆಲ್ ಬಿಲ್ ಕಟ್ಟದೆ ಕದ್ದು ಓಡಿ ಹೋಗಿರುವುದರಿಂದ ದೂರು ನೀಡಲಾಗಿದೆ. ಅಶೋಕ ಹೋಟೆಲ್ ಕಡೆಯಿಂದ ಪೂಜಾಗಾಂಧಿ ವಿರುದ್ಧ ನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.  ಪೂಜಾಗಾಂಧಿ ಒಟ್ಟು 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದರು. ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ….

  • ಆರೋಗ್ಯ

    ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾದ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ…? ತಿಳಿಯಲು ಈ ಲೇಕನ ಓದಿ…

    ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾದ ಬಗ್ಗೆ ಹಲವರಿಗೆ ತಿಳಿದಿಲ್ಲ, ಅದನ್ನ ಕೇವಲ ಅಡುಗೆಗೆ ಮಾತ್ರ ಬಳಸುತ್ತಾರೆ ಎಂದು ತಳಿದಿದ್ದಾರೆ. ಆದರೆ ಇದರಿಂದ ಅಡುಗೆಗೆ ಮಾತ್ರವಲ್ಲದೆ ಹಲವು ಅರೋಗ್ಯ ಸಮಸ್ಯೆಗಳಿಗೂ ಸಹ ಬಳಸ ಬಹುದು. ಅದು ಹೇಗೆ ಎಂಬುದು ಇಲ್ಲಿದೆ ನೋಡಿ.

  • ಸುದ್ದಿ

    ಮೈಸೂರಿನ ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ….!

    ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು‌, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…

  • ಸುದ್ದಿ

    ಕೇಂದ್ರ ಸಚಿವ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅಸ್ತಂಗತ…

    ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ನಾಯಕ ಹೆಚ್ ಎನ್ ಅನಂತ್ ಕುಮಾರ್ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅನಂತ್​ ಕುಮಾರ್​ ಅವರು ಪತ್ನಿ ತೇಜಸ್ವಿನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು…