ಆರೋಗ್ಯ

‘ಮೊಳಕೆ ಬಂದ ಗೋಧಿ’ಯನ್ನು ತಿಂದ್ರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?ತಿಳಿಯಲು ಈ ಲೇಖನ ಓದಿ ..

By admin

November 27, 2017

ಮೊಳಕೆ ಬಂದ ಕಾಳುಗಳು ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಾಗಿ ಡಯೆಟ್ ಮಾಡುವವರು ಮೊಳಕೆ ಬಂದ ಕಾಳುಗಳನ್ನು ತಿನ್ನುತ್ತಾರೆ. ಸಾಮಾನ್ಯವಾಗಿ ಹೆಸರು, ಕಡಲೆಯನ್ನು ಮೊಳಕೆ ಬರಿಸಿ ಸೇವಿಸುತ್ತಾರೆ. ಆದ್ರೆ ಗೋಧಿಯನ್ನು ಮೊಳಕೆ ಬರಿಸಿ ತಿನ್ನುತ್ತಾರೆ ಎನ್ನೋದು ನಿಮಗೆ ಗೊತ್ತಾ..?

ಗೋಧಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಗೋಧಿಯಲ್ಲಿ 10-15 ಶೇ. ಲಿಪಿಡ್, 19 ಶೇ ಪ್ರೋಟಿನ್, 17 ಶೇ ಶರ್ಕರ, 1.5-4.5 ಶೇ. ಫೈಬರ್ ಹಾಗೂ 4 ಶೇ ಖನಿಜ ಇರುತ್ತದೆ. ಇದು ಟ್ರೈಗಿಸ್ಲರೈಡ್ ಹಾಗೂ ಆಂಟಿಆಕ್ಸಿಡೆಂಟ್ಸ್‌ ಅಧಿಕ ಇರುತ್ತದೆ. ಅಷ್ಟೇ ಅಲ್ಲದೆ ಪ್ರೋಟೀನ್, ಪೊಟ್ಯಾಶಿಯಂ, ಮೆಗ್ನೇಷಿಯಂ, ಜಿಂಕ್ ಹಾಗೂ ಮ್ಯಾಂಗಜೀನ್‌ನಂತಹ ಖನಿಜಗಳು ಹೆಚ್ಚಿವೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಕಡಿಮೆ ಮಾಡುತ್ತೆ:-

ಸಕ್ಕರೆ ಕಾಯಿಲೆ ಇರುವವರು ಇದನ್ನು ತಿನ್ನುತ್ತಿದ್ದರೆ ಹೆದರುವ ಅಗತ್ಯವಿಲ್ಲ. ಗೋಧಿಯಲ್ಲಿ ಡಯೆಟರಿ ಫೈಬರ್‌ನ ಪ್ರಮಾಣ ಹೆಚ್ಚು ಇರುತ್ತದೆ.

ಇದು ರಕ್ತದಲ್ಲಿನ ಗ್ಲೂಕೋಸ್ ಅಂಶವನ್ನು ಕಡಿಮೆ ಮಾಡುತ್ತದೆ. ನೀವು ನಿಮ್ಮ ಆಹಾರದಲ್ಲಿ ಮೊಳಕೆ ಬಂದ ಗೋಧಿಯನ್ನು ಸೇವಿಸುವುದರಿಂದ ಟೈಪ್‌ 2 ಡಯಾಬಿಟೀಸ್‌ನಿಂದ ಪಾರಾಗಬಹುದು.

ಹೃದಯಕ್ಕೆ ಒಳ್ಳೆಯದು :-

 ಗೋಧಿ ಹೃದಯವನ್ನು ಆರೋಗ್ಯವಾಗಿಡುವಲ್ಲಿ ಸಹಕಾರಿಯಾಗಿದೆ. ವೈದ್ಯರು ಯಾವಾಗಲು ಹೃದಯ ಆರೋಗ್ಯವಾಗಿರಲು ಧಾನ್ಯಗಳನ್ನೇ ತಿನ್ನುವಂತೆ ಸಲಹೆ ನೀಡುತ್ತಾರೆ.

ಬೊಜ್ಜು ಕಡಿಮೆ ಮಾಡುತ್ತದೆ: ಫೈಬರ್‌ನಿಂದ ಕೂಡಿರುವ ಆಹಾರ ನಿಮ್ಮನ್ನು ಬೊಜ್ಜಿನಿಂದ ರಕ್ಷಿಸುತ್ತದೆ. ಮೊಳಕೆ ಬಂದ ಗೋಧಿ ಯಾವುದೇ ಧಾನ್ಯಗಳಿಗೂ ಕಡಿಮೆ ಇಲ್ಲ. ಕೊಬ್ಬು ಕಡಿಮೆಯಾಗುತ್ತದೆ.