ಸುದ್ದಿ

ಮೆಟ್ರೊದಲ್ಲಿ ಪ್ರಯಾಣಿಸುವಾಗ ಸ್ವಲ್ಪ ಹೆಚ್ಚರವಿರಲಿ, ಇಲ್ಲದಿದ್ದರೆ ಹೀಗೂ ಆಗಬಹುದು,..!!

27

ಮೆಟ್ರೋದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಹೆಚ್ಚಾದಷ್ಟು ಬಾಗಿಲಲ್ಲಿ  ಸಿಲುಕಿ ಪರದಾಡುವವರ ಸಂಖ್ಯೆಯೂ  ಸಹ ಹೆಚ್ಚಾಗುತ್ತಿದೆ . ಹಸಿರು ಮಾರ್ಗದ ರೈಲಿನಲ್ಲಿ ಬಾಗಿಲ ಬಳಿ ಕಾಲು ಸಿಕ್ಕಿಕೊಂಡು ಒದ್ದಾಡುತ್ತಿರುವ
ಎರಡು ದೃಶ್ಯ  ಇತ್ತೀಚೆಗೆ ನಡೆದಿವೆ. ಅ.14ರಂದು ಸಂಜೆ 6.20 ರ ಸುಮಾರಿಗೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಹೆಣ್ಣು ಮಗುವಿನ ಕಾಲು ಬಾಗಿಲಿನಲ್ಲಿ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಿಲ್ದಾಣದಲ್ಲಿ ದಂಪತಿ ಮಗುವಿನೊಂದಿಗೆ ರೈಲಿನ ಒಳಗೆ ಪ್ರವೇಶಿಸುತ್ತಿದ್ದರು, ದಟ್ಟಣೆ ಹೆಚ್ಚಿದ್ದರಿಂದ ದಂಪತಿ ಹಾಗೂ ಮಗು ಬಾಗಿಲಿನ ಬಳಿಯಲ್ಲೇ ನಿಲ್ಲಬೇಕಾಯಿತು.

ಈ ವೇಳೆ ಸ್ವಯಂಚಾಲಿತವಾಗಿ ಬಾಗಿಲು ಮುಚ್ಚಿಕೊಂಡಾಗ ಮಗುವಿನ ಕಾಲು ಬಾಗಿಲಿನ ನಡುವೆ ಸಿಕ್ಕಿಹಾಕಿಕೊಂಡಿತು. ರೈಲು ಹೊರಟಿದ್ದರಿಂದ ದಂಪತಿ ಹಾಗೂ ಸುತ್ತಮುತ್ತಲಿದ್ದ ಪ್ರಯಾಣಿಕರು ಆತಂಕಕ್ಕೊಳಗಾಗಿ ಸಹಾಯ ಮಾಡಲು  ಎಲ್ಲರು ಆಕೆಗೆ ನೆರೆವು ನೀಡಿದರು . ಅಷ್ಟರಲ್ಲೇ ದಂಪತಿ ಮಗುವಿನ ಕಾಲನ್ನು ಒಳಕ್ಕೆ ಎಳೆದುಕೊಂಡರು.ಆದರೆ, ಲೋಕೊ ಪೈಲಟ್‌ಗೆ ಮಾಹಿತಿ ತಿಳಿದು ರೈಲು ಸಂಚಾರ ಸ್ಥಗಿತಗೊಳಿಸಿದ್ದರಿಂದ ಸೇವೆಯಲ್ಲಿ ವ್ಯತ್ಯಾಸವಾಯಿತು.5-7 ನಿಮಿಷಗಳ ಕಾಲ ಸಂಚಾರದಲ್ಲಿ ವ್ಯತ್ಯಯವಾಗಿದೆ. ಎರಡು ಟ್ರಿಪ್‌ಗಳು ಕಡಿತವಾಗಿವೆ ಎಂದು ಮೂಲಗಳು ತಿಳಿಸಿವೆ.

‘‘ಮೆಜೆಸ್ಟಿಕ್‌ ನಿಲ್ದಾಣದಲ್ಲಿ ದಟ್ಟಣೆ ಅಧಿಕವಾಗಿತ್ತು. ರೈಲು ಬಂದು ನಿಂತಾಗ ಒಳಗೆ ಹೋಗುವಂತೆ ಸಿಬ್ಬಂದಿ ಸೂಚನೆ ನೀಡಿದರು. ಮೂರು ವರ್ಷದ ಮಗು ಅಪ್ಪ, ಅಮ್ಮನೊಂದಿಗೆ ಒಳಗೆ ಪ್ರವೇಶಿಸಿದಳು. ಸ್ವಯಂಚಾಲಿತವಾಗಿ ಮುಚ್ಚಿಕೊಂಡ ಬಾಗಿಲಲ್ಲಿ ಬಾಲಕಿಯ ಕಾಲು ಸಿಲುಕಿತು. ಅದನ್ನು ಎಳೆದುಕೊಳ್ಳುವಲ್ಲಿ ದಂಪತಿ ಯಶಸ್ವಿಯಾದರು,’’ಎಂದು ಪ್ರತ್ಯಕ್ಷದರ್ಶಿ ಮುಕ್ತಿಯಾರ್‌ ವಿವರಿಸಿದರು.

ಅ.19 ರಂದು ರಾತ್ರಿ 8.32 ಕ್ಕೆ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಪ್ಲಾಟ್‌‌ಫಾರಂ ಹಾಗೂ ರೈಲಿನ ನಡುವೆ ಸಿಕ್ಕಿ ಹಾಕಿಕೊಂಡಿದ್ದ ಘಟನೆ ನಡೆದಿದೆ. ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಅಂತರವಿದ್ದು, ಇದರಲ್ಲಿ ಮಹಿಳೆಯು  ಸಿಕ್ಕಿಹಾಕಿಕೊಂಡಿದ್ದು . ಲೋಕೊ ಪೈಲಟ್‌ ಕೂಡಲೇ ಇದನ್ನು ಗಮನಿಸಿದ್ದರಿಂದ ಮೆಟ್ರೋನ ಬಾಗಿಲು ಮುಚ್ಚಲಿಲ್ಲ. ನಂತರ ಸಹಾಯಕ್ಕೆ ಬಂದ ಸಿಬ್ಬಂದಿ ಹಾಗೂ ಪ್ರಯಾಣಿಕರು  ಆಕೆಗೆ ಸಹಾಯ ಮಾಡಿದರು . ಈ ವೇಳೆ ಸುರಕ್ಷತಾ ಕ್ರಮವಾಗಿ ಥರ್ಡ್‌ ರೇಲ್‌ನಲ್ಲಿ ಹರಿಯುವ ವಿದ್ಯುತ್‌ ಬಂದ್‌ ಮಾಡಲಾಗಿತ್ತು.8.36ಕ್ಕೆ ವಿದ್ಯುತ್‌ ಪೂರೈಕೆಯನ್ನು ಸರಿಪಡಿಸಿ ರೈಲು ಕಾರ್ಯಾಚರಣೆ ಗೊಳಿಸಲಾಯಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಹಾರ್ಟ್ ಅಟ್ಯಾಕ್ ಆಗೋ ಮುಂಚೆ ಏನಾಗುತ್ತೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ….

    ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ. ಹಾರ್ಟ್ ಅಟ್ಯಾಕ್ ಆಗುವುದೇ ಹಾಗೆ.

  • ಸಿನಿಮಾ

    ಶಾಕಿಂಗ್ ನ್ಯೂಸ್, ಪ್ರಥಮ್ ನಿಂದ ಲೈವ್ ಪ್ರೇಮ ಪತ್ರ ! ಯಾರಿಗೆ? ಏನಾಯಿತು?

    ಒಳ್ಳೆ ಹುಡುಗ ಪ್ರಥಮ್ ರವರು ಪ್ರೇಮ ಪತ್ರವನ್ನು ಬರೆದಿದ್ದಾರೆ. ಯಾರಿಗೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಪ್ರಥಮ್ ರವರು ಲೈವ್ ನಲ್ಲಿ ತಮ್ಮ ಬಿಗಬಾಸ್ ಗೆಳತಿ “ಸಂಜನವ”ರಿಗೆ ಪ್ರೇಮ ಪತ್ರವನ್ನು ಬರೆದಿದ್ದಾರೆ.

  • ವಿಸ್ಮಯ ಜಗತ್ತು

    ಈ ಬೆಕ್ಕು ಮಗುವನ್ನು ಪ್ರಾಣಪಾಯದಿಂದ ಕಾಪಾಡಿದೆ!ಹೇಗೆ ಅಂತೀರಾ?ಈ ಲೇಖನಿ ಓದಿ…

    ಸಾಕುಪ್ರಾಣಿಗಳು ತಮ್ಮ ಯಜಮಾನನ ಮತ್ತು ಅವರ ಮನೆಯವರನ್ನು ತಮ್ಮ ಪ್ರಾಣ ಒತ್ತೆ ಇಟ್ಟು ರಕ್ಷಣೆ ಮಾಡಿದ ಎಸ್ಟೋ ವಿಚಾರಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಯೇ ಇಲ್ಲೊಂದು ಬೆಕ್ಕು ಮಗುವನ್ನು ರಕ್ಷಣೆ ಮಾಡಿ ಗಮನಸೆಳೆದಿದೆ.

  • inspirational

    ಸಿ ಮ್ ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ- ಮಾಜಿ ಸಿಮ್ ಸಿದ್ದರಾಮಯ್ಯ ಸ್ಪಷ್ಟನೆ

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ. ಅವರು ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಎಐಸಿಸಿ ಕಚೇರಿಯಲ್ಲಿ ಸಿಡಬ್ಲೂಸಿ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಯಾವುದೇ ತೊಂದರೆ ಇಲ್ಲ. ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸಿಎಂ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಸಭೆಯಲ್ಲಿ ರಾಜ್ಯದ ಸೋಲಿನ ಬಗ್ಗೆ ಚರ್ಚೆ ಮಾಡಲಾಗುವುದು. ಪಾರ್ಟಿ ಫೋರಂನಲ್ಲಿ…

  • inspirational

    ಮೆದುಳಿನ ಕ್ಯಾನ್ಸರ್

    – MAYOON N  ಮೆದುಳಿನ ಕ್ಯಾನ್ಸರ್ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ…

  • inspirational

    ಯಾರದೋ ತಲೆ ಇನ್ನಾರದೋ ದೇಹ…!!!ಅಚ್ಚರಿಯ ಲೇಖನ ಓದಿ

    ದೇಹ ಒಬ್ಬನದ್ದು, ತಲೆ ಮತ್ತೂಬ್ಬನದ್ದು! ಈ ರೀತಿ ಸಿನಿಮಾದಲ್ಲಿ ನೀವು ನೋಡಿರುತ್ತಿರಿ ಅಲ್ಲವೇ…?ಎಲ್ಲ ಅಂದುಕೊಂಡಂತೆ ಆದರೆ,ಒಬ್ಬ ಮನುಷ್ಯನ ತಲೆಯನ್ನು ಇನ್ನೊಬ್ಬರ ದೇಹಕ್ಕೆ ಜೋಡಿಸಬಹುದಂತೆ.. ಆಶ್ಚರ್ಯವಾಯಿತೇ…?ಮುಂದೆ ಓದಿ.. ಇದೇ ಮೊದಲ ಬಾರಿಗೆ ಅಂತಹುದೊಂದು ಪ್ರಯತ್ನ ನಡೆಯಲಿದೆ. ಮಾನವನ ತಲೆಯನ್ನೇ ಕಸಿ ಮಾಡಿ, ಮತ್ತೂಬ್ಬನ ದೇಹಕ್ಕೆ ಕೂರಿಸಲು ಎಲ್ಲ ಸಿದ್ಧತೆಗಳು ಆರಂಭವಾಗಿವೆ. ಅದಕ್ಕೆ ಮುನ್ನುಡಿಯೆಂಬಂತೆ, ಒಂದು ಇಲಿಯ ದೇಹಕ್ಕೆ ಮತ್ತೂಂದು ಇಲಿಯ ತಲೆಯನ್ನು ಕಸಿ ಮಾಡಲಾಗಿದೆ. ಹೌದು. ಚೀನದ ವಿಜ್ಞಾನಿಗಳು ಇಂತಹ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ವರ್ಷಾಂತ್ಯದಲ್ಲಿ ಮಾನವನ ಮೇಲೆ ನಡೆಯುವ…