ಕರ್ನಾಟಕ

ಮೆಜೆಸ್ಟಿಕ್ ನಲ್ಲಿ ಬೇಬಿ ಸಿಟ್ಟಿಂಗ್ ವ್ಯವಸ್ಥೆಗೆ ಮೆಟ್ರೋ ನಿರ್ಧಾರ …!ಹೊಸ ಯೋಜನೆಯ ಬಗ್ಗೆ ತಿಳಿಯಲು ಈ ಲೇಖನ ಓದಿ….

By admin

October 26, 2017

ಬೆಂಗಳೂರಿನ ಹ್ರದಯ ಭಾಗವಗಿರುವ ಮೆಜೆಸ್ಟಿಕ್ ನಲ್ಲಿ ಉದ್ಯೋಗಸ್ಥರಿಗಾಗಿ ಮೆಟ್ರೋ ಅಧ್ಬುತವಾದ ನಿರ್ಧಾರವನ್ನು ತೆಗೆದುಕೊಂಡಿದೆ.

ಬೆಂಗಳೂರಿನ ಜನರಿಗೆ ದಿನದಿಂದ ದಿನಕ್ಕೆ ಆಪ್ತವಾಗುತ್ತಿರುವ ನಮ್ಮ ಮೆಟ್ರೋ ಇನ್ನು ಮುಂದೆ ಇನ್ನಷ್ಟು ಹತ್ತಿರವಾಗಲಿದೆ. ಡಿಸೆಂಬರ್ ವೇಳೆಗೆ ನಮ್ಮ ಮೆಟ್ರೋದಲ್ಲಿ ಮಹಿಳಾ‌ ಬೋಗಿ ಸಹ ಆರಂಭವಾಗಲಿದೆ‌.

ಕೆಲ ದಿನಗಳ‌ ಹಿಂದೆ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರಿ ನಾಗಲಕ್ಷ್ಮೀಬಾಯಿ ಪರಿಶೀಲನೆ ಬಳಿಕ ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಮಹಿಳಾ ಪ್ರಯಾಣಿಕರಿಗೆ ಅನಗತ್ಯವಾಗಿ ಆಗುವ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಮಹಿಳಾ ಬೋಗಿಯೊಂದನ್ನು ಆರಂಭಿಸುವಂತೆ ಸೂಚಿಸಿದ್ದರು.

ಅಲ್ಲದೇ ಮಹಿಳಾ ಉದ್ಯೋಗಿಗಳ ಅನುಕೂಲಕ್ಕಾಗಿ‌ ಶಿಶುಪಾಲನಾ ಕೇಂದ್ರ ಆರಂಭಿಸುವಂತೆ ಕೂಡಾ ಮಹಿಳಾ ಆಯೋಗದ ಅಧ್ಯಕ್ಷರು ಸೂಚಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಮೆಟ್ರೋ ಮಹಿಳಾ ಸಿಬ್ಬಂದಿಗಳ ನೆರವಿಗಾಗಿ ಬೇಬಿ ಸಿಟ್ಟಿಂಗನ್ನು ಆರಂಭಿಸಲಿದ್ದು, ಇದಕ್ಕಾಗಿ ಹೊಸ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಪೋಷಕರು ಆ್ಯಪ್ ಮೂಲಕ ತಮ್ಮ ಮಕ್ಕಳ ಚಲನವಲನವನ್ನು ಗಮನಿಸಬಹುದು.

 

ಕೆಲವೇ ದಿನಗಳಲ್ಲಿ ಈ ಬೇಬಿ ಸಿಟ್ಟಿಂಗ್ ಓಪನ್ ಆಗಲಿದೆ. ಈ ಬೇಬಿ ಸಿಟ್ಟಿಂಗ್ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ.ಬೈಯ್ಯಪ್ಪನಹಳ್ಳಿ ನಮ್ಮ ಮೆಟ್ರೋ ವಸತಿ‌ ಸಮುಚ್ಛಯದಲ್ಲಿ ಈಕೇಂದ್ರ ಸದ್ಯದಲ್ಲೇ ಆರಂಭವಾಗಲಿದೆ.ಈ ಬಗ್ಗೆ ನಮ್ಮ ಮೆಟ್ರೋ ನಿರ್ದೇಶಕರಾದ ಪ್ರದೀಪ ಸಿಂಗ್ ಖರೋಲಾ ಖುದ್ದು ಮಹಿಳಾ ಆಯೋಗಕ್ಕೆ ಪತ್ರ ಬರೆದು ಖಚಿತಪಡಿಸಿದ್ದಾರೆ.

ಒಟ್ಟಿನಲ್ಲಿ ನಮ್ಮ ಮೆಟ್ರೋ ಮಹಿಳಾ‌ ಪ್ರಯಾಣಿಕರ ಸುರಕ್ಷತೆ ಹಾಗೂ ಮಹಿಳಾ ‌ಉದ್ಯೋಗಿಗಳ ಸಹಾಯಕ್ಕೆ ಯೋಜನೆ ರೂಪಿಸಿದ್ದು, ಸಾರ್ವಜನಿಕ ವಲಯದ ಮೆಚ್ಚುಗೆಗೆ ಪಾತ್ರವಾಗಿದೆ.