ಸುದ್ದಿ

ಮುಂಬೈನಲ್ಲಿ ಮೆಟ್ರೋ ಸಂಚಾರಕ್ಕೆ ನದಿ ಕೆಳಗಡೆ ಹೊಸ ಸಂಚಾರ ಮಾರ್ಗ….!

18

ಮುಂಬೈನಲ್ಲಿ ನದಿ ಕೆಳಗೆ ಮೆಟ್ರೋ ಮಾರ್ಗ ನಿರ್ಮಿಸಲು ಮುಂಬೈ ಮೆಟ್ರೋ ನಿಗಮ ನಿರ್ಧರಿಸಿದೆ, ಕಾಮಗಾರಿಯೂ ಆರಂಭಗೊಂಡಿದೆ.


ಗ್ಯಾಲರಿ ಧಾರಾವಿ ಹಾಗೂ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಡುವೆ ಮೀಠಿ ನದಿ ಆಳದಲ್ಲಿ ಅಂದಾಜು 170 ಮೀಟರ್ ಉದ್ದದ ಮೆಟ್ರೋ ಸಾಗಲಿದೆ. ನಮ್ಮ ಮೆಟ್ರೋಗೆ ಅರ್ಧ ಎಕರೆ ಜಾಗ ಗುತ್ತಿಗೆ ನೀಡಲು ನಿರಾಕರಿಸಿದ ಆಲ್‌ ಸೇಂಟ್ಸ್ ಚರ್ಚ್ ಈ ಯೋಜನೆಗೆ ಸುಮಾರು 54 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ನದಿ ಕೆಳಗೆ ಸುರಂಗ ಕೊರೆಯುವ ಮೊದಲು ಸುರಕ್ಷಿತ ಪರದೆ ನಿರ್ಮಿಸಲಾಗುತ್ತದೆ.
ನದಿ ನೀರಿನ ಒತ್ತಡ ಒಂದು ಸವಾಲು ಅಷ್ಟೇ ಅಲ್ಲದೆ ಅಲ್ಲಿರುವ ಬಂಡೆಗಳು ದುರ್ಬಲವಾಗಿರುವುದರಿಂದ ನದಿ ನೀರಿನ ಪ್ರಮಾಣ ಹೆಚ್ಚಿದರೆ ಕೆಸರು ಮತ್ತು ನೀರು ಸುರಂಗದಲ್ಲಿ ಒಳನುಸುಳದಂತೆ ಮಾಡುವುದು ಮತ್ತೊಂದು ಸವಾಲಿನ ಕೆಲಸವಾಗಿದೆ.


ಮುಂಬೈ ಮೆಟ್ರೋದಲ್ಲಿ ಮೊದಲ ಬಾರಿಗೆ ಇಂಥ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ. ನದಿ ಕೆಳಗೆ 170 ಮೀಟರ್ ಉದ್ದದ ಸುರಂಗ ಮಾರ್ಗ ಕೊರೆಯುವುದು ಒಂದು ಸವಾಲಿನ ಕೆಲಸ, ಇದಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಅಗತ್ಯವಿದೆ. ಈಗ ನ್ಯೂ ಅಸ್ಟ್ರೇನ್ ಟೆಕ್ನಾಲಜಿ ಮೆಥೆಡ್ ಮೂಲಕ ಸುರಂಗ ಕಾಮಗಾರಿ ಆರಂಭಿಸಲಾಗಿದೆ ಎಂದು ಎಂಎಂಆರ್‌ಸಿ ಯೋಜನಾ ನಿರ್ದೇಶಕ ಎಸ್‌ಕೆ ಗುಪ್ತಾ ಮಾಹಿತಿ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಾಧನೆ

    ಸಿವಿಲ್ ಕೋರ್ಟ್‌ನ ನ್ಯಾಯಾಧೀಶೆಯಾಗಿ ಕೋಲಾರ ಗಾಯಿತ್ರಿ ಆಯ್ಕೆ

    ಕರ್ನಾಟಕ ಹೈ ಕೋರ್ಟ್‌ನ ಸಿವಿಲ್ ನ್ಯಾಯಾಧೀಶೆಯಾಗಿ ಬಂಗಾರಪೇಟೆಯ ಎನ್.ಗಾಯಿತ್ರಿ ರವರು ಆಯ್ಕೆಯಾಗಿ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದುಕೊಂಡಿರುವ ಗಾಯತ್ರಿರವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಕರ್ನಾಟಕ ಸಿವಿಲ್ ಕೋರ್ಟ್‌ನ  ನ್ಯಾಯಾಧೀಶರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯವು ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು.  ಇದೀಗ ಫಲಿತಾಂಶ ಪ್ರಕಟಗೊಂಡಿದ್ದು ಗಾಯತ್ರಿ ಅವರು ಆಯ್ಕೆಯಾಗಿದ್ದಾರೆ….

  • ಸಿನಿಮಾ

    ನಾಯಕ ನಟ ದುನಿಯಾ ವಿಜಿ ರವರಿಗೆ ಕೋಲಾರದಲ್ಲಿ ಭರ್ಜರಿ ಸ್ವಾಗತ

    ಕೋಲಾರ: ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಚಲನಚಿತ್ರದ ಪ್ರಚಾರಕ್ಕಾಗಿ ಭಾನುವಾರ ಕೋಲಾರ ನಗರಕ್ಕೆ ಆಗಮಿಸಿದ ದುನಿಯಾ ವಿಜಿ ಮತ್ತು ಚಿತ್ರದ ನಿರ್ದೇಶದ ಗೋಪಿಚಂದ್ ಮಲಿನೇನಿ ಅವರಿಗೆ ಎನ್‌ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ವೀರಸಿಂಹಾರೆಡ್ಡಿ ಚಿತ್ರದ ನಿರ್ದೇಶಕ ಗೋಪಿಚಂದ್ ಮಲಿನೇನಿ ಮತ್ತು ಜಗನ್ ಶನಿವಾರ ರಾತ್ರಿಯೇ ಕೋಲಾರಕ್ಕೆ ಆಗಮಿಸಿ ನಗರದ ಹೊರವಲಯದ ನಾಗಾರ್ಜುನ ಹೋಟೆಲ್‌ನಲ್ಲಿ ವಾಸ್ತವ್ಯಹೂಡಿದ್ದರು. ಭಾನುವಾರ ಬೆಳಿಗ್ಗೆ ಬೆಂಗಳೂರಿನಿಂದ ಆಗಮಿಸಿದ್ದ ದುನಿಯಾ ವಿಜಿ ಅವರನ್ನು ಸೇರಿಕೊಂಡರು. ಉಪಹಾರದ ನಂತರ ಇವರನ್ನು ಕೋಲಾರದ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಶಿಕ್ಷೆ

    ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕೆಜಿಎಫ್ ಟೌನ್, ರಾಬರ್ಟ್ಸನ್ ಪೇಟೆಯ ವಾಸಿ ಉಮೇಶ್ ಬಿನ್ ಪಿ.ರಾಜಾ ಎಂಬುವರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನ ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡಿರುವ ಅರೋಪದ ಮೇಲೆ ಬಂಗಾರಪೇಟೆ ಪೋಲಿಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ವೃತ್ತ ನಿರೀಕ್ಷಕರಾದ ಸುನೀಲ್ ಕುಮಾರ್ ರವರು ತನಿಖೆ ನೆಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಸದರಿ ಪ್ರಕರಣದ ಸಂಖ್ಯೆ : ಎಸ್.ಸಿ.11/2021ರ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನಿ ರವರು ಆರೋಪ ರುಜುವಾತಾದ ಹಿನ್ನಲೆ ಪೋಕ್ಸೊ…

  • ಸುದ್ದಿ

    11 ಶಿಪ್ ಕಂಟೇನರ್​ಗಳಲ್ಲಿ ನಿರ್ಮಾಣವಾಗಿರುವ 3 ಅಂತಸ್ತಿನ ಮನೆ ಹೇಗಿದೆ ಗೊತ್ತಾ,ನೋಡಿದರೆ ಅಚ್ಚರಿ ಪಡುವುದು ಗ್ಯಾರಂಟಿ,.!

    ಜೀವನದಲ್ಲಿ ಎಲ್ಲರೂ  ತಮಗೆ ಸ್ವಂತ  ಮನೆಯನ್ನು  ಕಟ್ಟಿಕೊಳ್ಳಬೇಕು ಎಂಬ ಆಸೆ ಎಲ್ಲರಲ್ಲಿಯೂ ಇದ್ದೆ ಇರುತ್ತೆ.  ಹಾಗಾಗಿ ಮನೆ ಹೀಗಿರಬೇಕು, ಪೀಠೋಪಕರಣಗಳು ಮಾದರಿ, ಮನೆಯ ವಿನ್ಯಾಸ ಸೇರಿದಂತೆ ಪ್ರತಿಯೊಂದರಲ್ಲಿ ಸೂಕ್ತವಾದದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಬಜೆಟ್ ಅನುಗುಣವಾಗಿ ಮನೆಯನ್ನು ಸುಂದರಗೊಳಿಸುವ ಖರೀದಿಸಲು ಬ್ಲೂಪ್ರಿಂಟ್ ಸಿದ್ಧಮಾಡಿಕೊಂಡಿರುತ್ತಾರೆ. ಆದರೆ ಅಮೆರಿಕದ ವಿಲ್ ಬ್ರೆಕ್ಸ್ ಎಂಬವರು 11 ಶಿಪ್ ಕಂಟೇನರ್ ಗಳಲ್ಲಿ ಮನೆ ಕಟ್ಟಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ವಿಲ್ ಬ್ರೆಕ್ಸ್ ಹಣದ ಅಡಚಣೆಯಿಂದಾಗಿ ಕಂಟೇನರ್ ಗಳ ಮೂಲಕ ಮನೆ ಕಟ್ಟಲು ನಿರ್ಧರಿಸದ್ದರು….

  • ಸುದ್ದಿ

    ಇಂದು ಮಧ್ಯಾಹ್ನ ಗುಜರಾತಿಗೆ ಅಪ್ಪಳಿಸಲಿದೆ ವಾಯು – 3 ಲಕ್ಷ ಜನ ಶಿಫ್ಟ್, 500 ಗ್ರಾಮಗಳ ತೆರವು

    ಗಾಂಧಿನಗರ: ಅರಬ್ಬಿ ಸಮುದ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಚಂಡಮಾರುತ ವಾಯು ಇದೀಗ ಗುಜರಾತ್‍ನತ್ತ ಪಯಣಿಸಿದೆ. ಹವಾಮಾನ ಇಲಾಖೆ ಪ್ರಕಾರ ಇಂದು ಮಧ್ಯಾಹ್ನದ ಹೊತ್ತಿಗೆ ದಕ್ಷಿಣ ಗುಜರಾತ್‍ನ ಕರಾವಳಿಗೆ ಅಪ್ಪಳಿಸಲಿದೆ. ಹವಾಮಾನ ಇಲಾಖೆ ಪ್ರಕಾರ, ವಾಯು ಚಂಡಮಾರುತ ವೆರಾವಲ್‍ನಿಂದ 180 ಕಿ.ಮೀ ಹಾಗೂ ಪೋರ್ ಬಂದರ್ ನಿಂದ 260 ಕಿ.ಮೀ ದೂರದಲ್ಲಿದೆ. ಪ್ರಸ್ತುತ ವಾಯು ಸೈಕ್ಲೋನ್ ತೀವ್ರ ಸ್ವರೂಪ ಪಡೆದಿದ್ದು, ಗಂಟೆಗೆ 170 ರಿಂದ 185 ಕಿ.ಮೀ. ವೇಗದಲ್ಲಿ ಪೋರ್ ಬಂದರ್ ನತ್ತ ಪಯಣಿಸುತ್ತಿದೆ. ಮುಂಬೈನಿಂದ ಮುಂದೆ ಸಾಗಿದ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ

    ಕೋಲಾರ: ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯ, ರಾಯಲ್ಪಾಡು ಹೋಬಳಿ, ಎ.ಕೊತ್ತೂರು ಗ್ರಾಮದ ನವೀನ್ ಕುಮಾರ್ ಬಿನ್ ರವಣಪ್ಪ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆ ನಿರೀಕ್ಷಕರಾದ ಸಿ.ರವಿಕುಮಾರ್ 6 ಮತ್ತು 16 ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನೆಡೆಸಿ ಆರೋಪಿತನ ವಿರುದ್ದ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆಸಿದ…