ಆಧ್ಯಾತ್ಮ

ಮಹಿಳೆಯರು ತೆಂಗಿನ ಕಾಯಿ ಒಡೆಯಬಾರದು ಏಕೆ ಗೊತ್ತಾ?ಇಲ್ಲಿದೆ ನೋಡಿ ಕಾರಣ…

By admin

February 20, 2019

ಹಿಂದೂ ಸಂಸ್ಕೃತಿಯಲ್ಲಿ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ಇದಕ್ಕೆ ಸಾಕಷ್ಟು ಬಾರಿ ವಿರೋಧವೂ ವ್ಯಕ್ತವಾಗುತ್ತದೆ. ತಲೆ-ಬುಡವಿಲ್ಲದೆ ಶಾಸ್ತ್ರಗಳನ್ನು ಮಾಡ್ತಾರೆಂದು ಕೆಲವರು ಆರೋಪ ಮಾಡ್ತಾರೆ. ಆದ್ರೆ ಹಿಂದೂ ಸಂಸ್ಕೃತಿಯಲ್ಲಿ ಅದಕ್ಕೆ ಸೂಕ್ತ ಕಾರಣಗಳನ್ನೂ ಹೇಳಲಾಗಿದೆ. ಮಹಿಳೆಯರು ಮಾಡಬಾರದ ಕೆಲಸಗಳಲ್ಲಿ ತೆಂಗಿನಕಾಯಿ ಒಡೆಯುವುದು ಒಂದು.

ಹೌದು, ಹಿಂದೂ ಸಂಸ್ಕೃತಿ ಪ್ರಕಾರ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದು. ಹಿಂದೂ ಧರ್ಮದ ಪ್ರಕಾರ ತೆಂಗಿನ ಕಾಯಿ ಪವಿತ್ರವೆಂದು ಪರಿಗಣಿಸಲಾಗಿದೆ. ಶುಭ ಸಮಾರಂಭಗಳಲ್ಲಿ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸುವಾಗ ತೆಂಗಿನ ಕಾಯಿಯನ್ನು ಒಡೆಯಲಾಗುತ್ತದೆ.

ತೆಂಗಿನ ಕಾಯಿಯಿಲ್ಲದೆ ಮಾಡುವ ಪೂಜೆ ಪೂಜೆಯೇ ಅಲ್ಲ. ಆದ್ರೆ ಪುರುಷರು ಮಾತ್ರ ಯಾಕೆ ತೆಂಗಿನಕಾಯಿ ಒಡೆಯಬೇಕೆಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇದಕ್ಕೆ ಉತ್ತರ ಪೌರಾಣಿಕ ಕಥೆಯಲ್ಲಡಗಿದೆ. ವಿಶ್ವವನ್ನು ಸೃಷ್ಟಿ ಮಾಡುವ ಮೊದಲು ಬ್ರಹ್ಮ ತೆಂಗಿನ ಕಾಯಿ ಸೃಷ್ಟಿ ಮಾಡಿದನಂತೆ. ತೆಂಗಿನ ಕಾಯಿಯಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರಿದ್ದಾರೆಂದು ನಂಬಲಾಗಿದೆ. ಹಾಗಾಗಿ ಮಹಿಳೆಯರನ್ನು ತೆಂಗಿನ ಕಾಯಿಯಿಂದ ದೂರವಿರಿಸಲಾಗಿದೆ.

ಇನ್ನೊಂದು ಕಾರಣವನ್ನೂ ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ತೆಂಗಿನ ಕಾಯಿಯನ್ನು ಬೀಜವೆಂದು ಪರಿಗಣಿಸಲಾಗಿದೆ. ಮಹಿಳೆ ಮಗುವಿಗೆ ಜನ್ಮ ನೀಡಿ ಕುಟುಂಬ ಬೆಳೆಸುತ್ತಾಳೆ. ಆಕೆಯೇ ಇನ್ನೊಂದು ಬೀಜವನ್ನು ಒಡೆಯೋದು ಎಷ್ಟು ಸರಿ. ಹಾಗಾಗಿ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದೆಂದು ಧರ್ಮದಲ್ಲಿ ಹೇಳಲಾಗಿದೆ.