ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾರೀ ಮಳೆಗೆ ರತ್ನಗಿರಿ ತಾವ್ರೆ ಆಣೆಕಟ್ಟು ಮುರಿದು ಬಿದ್ದಿದೆ. ಆಣೆಕಟ್ಟಿನ ಕೆಳಗಿರುವ 7 ಹಳ್ಳಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಈವರೆಗೆ 6 ಶವವನ್ನು ಹೊರ ತೆಗೆಯಲಾಗಿದೆ. 17 ಮಂದಿ ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್ ತಂಡ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ.
ಆಣೆಕಟ್ಟೆಯ ಪಕ್ಕದಲ್ಲಿಯೇ ಇದ್ದ 12 ಮನೆಗಳು ಸಂಪೂರ್ಣ ನೆಲಸಮಗೊಂಡಿವೆ. 12 ಮನೆಗಳಲ್ಲಿ ಎಷ್ಟು ಮಂದಿ ವಾಸವಾಗಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗ್ತಿಲ್ಲ.
ಘಟನೆ ಬಗ್ಗೆ ಮಾಹಿತಿ ಸಿಗ್ತಿದ್ದಂತೆ ಜಿಲ್ಲಾಡಳಿತ ರಕ್ಷಣಾ ಕಾರ್ಯ ಶುರು ಮಾಡಿತ್ತು. ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡವನ್ನು ಕಳುಹಿಸಿದೆ. ಸತತ ಮಳೆಯ ಕಾರಣ ಆಣೆಕಟ್ಟಿನ ಮೇಲೆ ನೀರು ಬರಲು ಶುರುವಾಗಿತ್ತು.
ಮಹಾರಾಷ್ಟ್ರದಲ್ಲಿ ಭಾನುವಾರದಿಂದ ನಿರಂತರ ಮಳೆಯಾಗ್ತಿದೆ. ಮುಂಬೈ ನಗರದಲ್ಲೂ ಭಾರೀ ಮಳೆಯಾಗ್ತಿದೆ. ಮುಂಬೈ ಜನಜೀವನ ಅಸ್ತವ್ಯಸ್ತಗೊಂಡಿದೆ.