ಆರೋಗ್ಯ

ಬಿಳಿಕೂದಲುನಿಂದ ತುಂಬಾ ಅವಮಾನಿತರಾಗಿದ್ದೀರಾ?ತಲೆಕೆಡಿಸ್ಕೊಬೇಡಿ!ಇಲ್ಲಿದೆ ಸುಲಭ ಮನೆಮದ್ದು…..

By admin

June 24, 2017

ಹಿಂದೆ ಕೇವಲ ವಯಸ್ಸಾದರವರಲ್ಲಿ ಬಿಳಿಕೂದಲು ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕಿನಿಂದಾಗಿ  ಬಿಳಿಕೂದಲು  ಸಣ್ಣ ವಯಸ್ಸಿನ ಮಕ್ಕಳಲ್ಲಿ ಕೂಡ  ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.

ದೇಹದಲ್ಲಿ ಬಣ್ಣ ತಯಾರಿಸುವಂತಹ ಕೋಶಗಳು ಅಗತ್ಯವಿರುವಷ್ಟು ಪ್ರಮಾಣದ ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಬರುತ್ತದೆ.

ಪ್ರತಿಯೊಂದು ಕೂದಲಿನ ಕೋಶಗಳ ವರ್ಣದ್ರವ್ಯ ಸಂಭಾವ್ಯತೆಯನ್ನು ನಿಮ್ಮ ಜೀನ್‌ಗಳು ನಿರ್ಧರಿಸುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಕೂದಲು ಬಿಳಿಯಾಗಲು  ಪ್ರಮುಖ ಕಾರಣವಾಗಿದೆ.

ನಿಮ್ಮ ಕೂದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ನಿಮಗೆ ವಯಸ್ಸಾಗುತ್ತಿರುವಂತೆ ಇದರ ಉತ್ಪಾದನೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ಬಿಳಿಯಾಗುತ್ತದೆ.

ಇದಕ್ಕೆ ಪರಿಹಾರ ನಿಮ್ಮ ಮನೆಯೆಲ್ಲಿಯೇ ಇದೆ.ಏನಂತೀರಾ ಮುಂದೆ ಓದಿ….

  1. ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ.
  2. ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ.
  3. ಒಣಗಿದ ಎಲೆಗಳನ್ನು ಸರಿಯಾಗಿ ಪುಡಿ ಮಾಡಿಕೊಳ್ಳಿ.
  4. ಪಾತ್ರೆಯಲ್ಲಿತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
  5. ಅದಕ್ಕೆ ನಾಲ್ಕು ಚಮಚ ಕರಿಬೇವಿನ ಪುಡಿಯನ್ನು ಹಾಕಿ.
  6. ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಯಲಿ.
  7. ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ನಂತರ ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ.
  8. ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ. ಇದನ್ನು ಒಂದು ವಾರ ಕಾಲ ಬಳಸಿದಾಗ ಕೂದಲು ಕಪ್ಪಗಾಗುತ್ತದೆ.