ಉಪಯುಕ್ತ ಮಾಹಿತಿ

ಬಿಪಿಎಲ್ ಕಾರ್ಡುದಾರರಿಗೆ ರಾಜ್ಯ ಮತ್ತು ಕೇಂದ್ರಸರ್ಕಾರದಿಂದ ಉಚಿತ ಗ್ಯಾಸ್ ಯೋಜನೆಗಳು..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಮತ್ತು ಮರೆಯದೇ ಶೇರ್ ಮಾಡಿ…

By admin

March 15, 2018

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜನರಿಗೆ ಉಪಯೋಗವಾಗಲೆಂದು ಅನೇಕ ಯೋಜನೆಗಳನ್ನು ಮಾಡುತ್ತಾ ಬಂದಿದೆ.. ಅದರಲ್ಲೂ ಬಿ ಪಿ ಎಲ್ ಕಾರ್ಡ್ ಹೊಂದಿರುವವರಿಗೆ ಯೋಜನೆಗಳಿಂದ ಅನೇಕ ಅನುಕೂಲಗಳಾಗಿವೆ..ಅದರಲ್ಲೊಂದು ಪ್ರಮುಖ ವಾದ ಯೋಜನೆ ಮೂಲಕ ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದಾಗಿದೆ..

ಹೌದು ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಕ್ಕೆ ಒಟ್ಟು ಎರಡು ಯೋಜನೆಗಳಿವೆ..

ಒಂದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ” 

ಇನ್ನೊಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ”

ಬಿ ಪಿ ಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಗಳ ಮೂಲಕ ಉಚಿತ ಗ್ಯಾಸ್ ಕನೆಕ್ಷನ್ ಪಡೆಯಬಹುದಾಗಿದೆ..

ಹಾಗಾದ್ರೆ ಪ್ರಧಾನಮಂತ್ರಿ ಉಜ್ವಲ ಮತ್ತು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗಳಿಂದ ಹೇಗೆ ಉಚಿತವಾಗಿ ಗ್ಯಾಸ್ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.. 

ಪ್ರಧಾನ ಮಂತ್ರಿ ಉಜ್ವಲ ಯೋಜನೆ…

ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಕ್ಕೆ 1,600 ಸಹಾಯಧನ ನೀಡಲಾಗುತ್ತದೆ. ಆದ್ದರಿಂದ ಎಲ್‌ಪಿಜಿ ಸಂಪರ್ಕ ಪಡೆಯಲು ಹಣ ನೀಡುವ ಅಗತ್ಯವಿಲ್ಲ. ಆದರೆ ಬಳಿಕ ಬಳಸುವ ಸಿಲಿಂಡರ್‌ಗಳಿಗೆ ಹಣ ನೀಡಬೇಕಾಗುತ್ತದೆ.ಹಾಗಾದ್ರೆ ಈ ಯೋಜನೆಯನ್ನು ಉಚಿತವಾಗಿ ಪಡೆದುಕೊಳ್ಳುವ ಬಗೆ ಹೇಗೆ ಮತ್ತು ಯಾರೆಲ್ಲಾ ಈ ಯೋಜನೆಗೆ ಅರ್ಹರು ತಿಳಿಯಲು ಮುಂದೆ ಓದಿ…

ಅರ್ಹತೆ ಮಾನದಂಡ ಏನು..?

ನೊಂದಾಯಿಸುವ ಸಮಯದಲ್ಲಿ ಈ ದಾಖಲಾತಿಗಳನ್ನು ಸಲ್ಲಿಸಬೇಕು…

ಇಲ್ಲಿ ಓದಿ:-ಪ್ರಧಾನ “ಮಂತ್ರಿ ಆವಾಸ್ ಯೋಜನೆ” ಅಡಿಯಲ್ಲಿ ಸ್ವಂತ ಮನೆ ಪಡೆಯೋದು ಹೇಗೆ…

ಉಚಿತ ಯೋಜನೆಯಲ್ಲಿ ಏನೆಲ್ಲಾ ಸಿಗುತ್ತೆ..?

ಪಡೆಯುವ ವಿಧಾನ ಹೇಗೆ…

ಹತ್ತಿರದ ಗ್ಯಾಸ್ ಏಜೆನ್ಸಿ ಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಕೊಡಬೇಕು.. 1 ತಿಂಗಳಲ್ಲಿ ಮನವಿ ಅಂಗೀಕಾರವಾಗಿ ಗ್ಯಾಸ್ ಏಜೆನ್ಸಿಯವರು 1600 ರೂಪಾಯಿ ಮೌಲ್ಯದ ಸಿಲಿಂಡರ್ ಹಾಗೂ ರೆಗ್ಯುಲೇಟರ್ ಅನ್ನು ಉಚಿತವಾಗಿ ನೀಡುತ್ತಾರೆ.. ಉಳಿದ ಗ್ಯಾಸ್ ಉಪಕರಣಗಳು ಬೇಕಿದ್ದರೆ ಹಣವನ್ನು ನೀಡಿ ಪಡೆದುಕೊಳ್ಳಬಹುದಾಗಿದೆ..

ಈಗ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಬಗ್ಗೆ ತಿಳಿಯೋಣ…

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್ ಹಾಗೂ ಸ್ಟೌ ನೀಡುವ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಇದೇ ವರ್ಷದ ಡಿಸೆಂಬರ್‌ 1 2017 ರಿಂದ  ರಾಜ್ಯದಲ್ಲಿ ಜಾರಿಯಲ್ಲಿದೆ.

ಮೊದಲಿಗೆ ಅನಿಲ ಭಾಗ್ಯ ಯೋಜನೆಯನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಿಲಿಂಡರ್ ಪಡೆದ ಫಲಾನುಭವಿಗಳಿಗೆ ಗ್ಯಾಸ್ ಸ್ಟೌವ್ ವಿತರಿಸುವುದು ಎಂದಾಗಿತ್ತು.. ಆದರೆ ಆನಂತರ ಹೆಚ್ಚಿನ ಮಂದಿಗೆ ಇದರ ಉಪಯೋಗವಾಗುವುದಿಲ್ಲ ಎಂದು ಯೋಚಿಸಿ.. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಮೂಲಕ 15 ಲಕ್ಷ ಕುಟುಂಬ ಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಕೊಡಲು ನಿರ್ಧರಿಸಿದ್ದಾರೆ..

ಅರ್ಜಿ ಸಲ್ಲಿಸುವುದು ಹೇಗೆ..?

ಬಿ ಪಿ ಎಲ್ ಕಾರ್ಡ್ ಹೊಂದಿರುವವರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹೋಗಿ ಅರ್ಜಿ ಸಲ್ಲಿಸಿ ಯೋಜನೆಯ ಫಲವನ್ನು ಪಡೆಯಬಹುದಾಗಿದೆ..

ಉಚಿತ ಅನಿಲ ಭಾಗ್ಯ ಯೋಜನೆಯಲ್ಲಿ ಏನೆಲ್ಲಾ ಸಿಗಲಿದೆ..?

‘ಉಜ್ವಲ ಯೋಜನೆ’ ಹೊದಿರುವವರು ಇದಕ್ಕೆ ಅರ್ಹರಲ್ಲ…

ಇದಕ್ಕೆ ಮೊದಲು ಕೇಂದ್ರ ಸರ್ಕಾರದ ‘ಉಜ್ವಲ ಯೋಜನೆ’ಯಲ್ಲಿ ಸಿಲಿಂಡರ್ ಮತ್ತು ಅನಿಲ ಸಂಪರ್ಕ ಪಡೆದವರಿಗೆ  ಉಚಿತವಾಗಿ ಒಲೆ ವಿತರಿಸಲು ನಿರ್ಧರಿಸಲಾಗಿತ್ತು. ಆದರೆ, ಉಜ್ವಲ ಯೋಜನೆಯ ಸೌಲಭ್ಯ ರಾಜ್ಯದ ಎಲ್ಲ ಬಿಪಿಎಲ್‌ ಕುಟುಂಬಗಳಿಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ‍ಪ್ರತ್ಯೇಕವಾಗಿಯೇ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಲಾಗಿದೆ.

ಈ ಯೋಜನೆಯಿಂದ ಸರ್ಕಾರ ಭಾರಿಸಲಿರುವ ವೆಚ್ಚ:-

ಈ ಯೋಜನೆಯಿಂದ ಸ್ಟೌವ್, ಕನೆಕ್ಟರ್ ಹಾಗೂ ಮೊದಲ ಎರಡು ಗ್ಯಾಸ್ ಸಿಲಿಂಡರ್ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಸರ್ಕಾರಕ್ಕೆ ಪ್ರತಿ ಸಂಪರ್ಕಕ್ಕೆ 4,040 ರೂ. ವೆಚ್ಚ ತಗಲಿದೆ ಎಂದು ಹೇಳಲಾಗಿದೆ.ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 300 ಕೋಟಿ ರೂ. ವ್ಯಯಿಸಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಈ ಯೋಜನೆಯ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.. ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಫಲವನ್ನು ಪಡೆಯಬಹುದು..