ಸುದ್ದಿ

ಪ್ರವಾಹ ಸಂಕಷ್ಟಕ್ಕೆ ಸಿಲುಕಿದ ಬಿಹಾರ: 31 ಮಂದಿ ಸಾವು, 40 ಲಕ್ಷ ಜನರ ಸ್ಥಳಾಂತರ….

21

ಮುಂಗಾರು ಆಗಮನಕ್ಕೂ ಮೊದಲು ಎಲ್ಲೂ ಮಳೆಯಾಗುತ್ತಿಲ್ಲವಲ್ಲ ಎನ್ನುವ ಆತಂಕ ಈಗ ಮುಂಗಾರು ಆರಂಭವಾದ ಬಳಿಕ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಯಾವಾಗ ಮಳೆ ನಿಲ್ಲುತ್ತೋ ಎನ್ನುವಂತಾಗಿದೆ. ಹೌದು ಬಿಹಾರದ ಜನತೆ ಪ್ರವಾಹದಿಂದ ತತ್ತರಿಸಿದೆ. ಈಗಾಗಲೇ 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ಕಳುಹಿಸಲಾಗಿದೆ.

ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್‌ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ, ಕಿಶನ್‌ಗಂಜ್‌ನಲ್ಲಿ ನಾಲ್ಕು ಮಂದಿ, ಮಧುಬನಿಯಲ್ಲಿ ಎರಡು ಮಂದಿ ಜೀವ ಕಳೆದುಕೊಂಡಿದ್ದಾರೆ.

ನದಿಗಳಲ್ಲಿ ನೀರಿನ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಅರಾರಿಯಾ, ಕಿಶನ್‌ಗಂಜ್, ದರ್ಬಾಂಗಾ, ಮಧುಬನಿ, ಮುಜಾಫರ್‌ಪುರ್‌ ಜಿಲ್ಲೆಗಳಿಗೆ ಅಪಾಯ ಉಂಟಾಗಿದೆ. ಸೀತಾಮರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಅರಾರಿಯಾದಲ್ಲಿ 11 ಮಂದಿ,

ಕಿಶನ್‌ಗಂಜ್‌ನಲ್ಲಿ ನಾಲ್ಕು ಮಂದಿ, ಮಧುಬನಿಯಲ್ಲಿ ಎರಡು ಮಂದಿ ಜೀವ ಕಳೆದುಕೊಂಡಿದ್ದಾರೆ.ಉತ್ತರ ಬಿಹಾರದ 12 ಜಿಲ್ಲೆಗಳು ಪ್ರವಾಹಕ್ಕೊಳಗಾಗಿದೆ. ಸಾಕಷ್ಟು ರಸ್ತೆಗಳು ಬಿರುಕುಬಿಟ್ಟಿವೆ, ಮರಗಳು ಧರೆಗುರುಳಿವೆ, ರಸ್ತೆಯೆಲ್ಲಾ ಚರಂಡಿಯಾಗಿ ಪರಿವರ್ತನೆಗೊಂಡಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ