ತಂತ್ರಜ್ಞಾನ

ಪರೀಕ್ಷಾರ್ಥ ಉಡಾವಣೆಯಲ್ಲಿ ಕೊನೆಗೂ ಯಶಸ್ವಿಯಾದ ನಿರ್ಭಯ್ ಕ್ಷಿಪಣಿ..!ತಿಳಿಯಲು ಇದನ್ನು ಓದಿ …

271

ಭಾರತದ ಹೆಮ್ಮೆಯ ಕ್ಷಿಪಣಿ ಬ್ರಹ್ಮೋಸ್ ಗೆ ಪರ್ಯಾಯ ಎಂದೇ ಕರೆಯಲಾಗುತ್ತಿದ್ದ ನಿರ್ಭಯ್ ಕ್ಷಿಪಣಿ ಸಿದ್ಧವಾಗಿ ದಶಕಗಳೇ ಕಳೆದರೂ ಈವರೆಗೆ ನಡೆದ ಎಲ್ಲ ಪರೀಕ್ಷಾರ್ಥ ಪ್ರಯೋಗಗಳಲ್ಲಿ ಅದು ವಿಫಲವಾಗಿತ್ತು. ಈ ಹಿಂದೆ ನಡೆದ ಒಟ್ಟು ನಾಲ್ಕು ಪರೀಕ್ಷೆಗಳಲ್ಲಿ ನಿರ್ಭಯ್ ವಿಫಲವಾಗುವ ಮೂಲಕ ವಿಜ್ಞಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತ್ತು. ಆದರೆ ಕ್ಷಿಪಣಿ ಪ್ರಯೋಗ ವಿಫಲದಿಂದ ದೃತಿಗೆಡದ ನಮ್ಮ ಡಿಆರ್ ಡಿಒ ವಿಜ್ಞಾನಿಗಳು ಮತ್ತೆ ಕ್ಷಿಪಣಿಯನ್ನು ಮತ್ತೆ ಪರೀಕ್ಷೆಗೆ ಸಿದ್ಧಪಡಿಸಿದ್ದರು. ಇದೀಗ ವಿಜ್ಞಾನಿಗಳ ವ?ಗಳ ಶ್ರಮ ಫಲಿಸಿದ್ದು, ಅಂತಿಮವಾಗಿ ನಿರ್ಭಯ್ ಕ್ಷಿಪಣಿ ಯಶಸ್ಸು ಸಾಧಿಸಿದೆ.

ಕೆಳಮಟ್ಟದಲ್ಲಿ ಹಾರುತ್ತಾ ನಿರಂತರ ನಿರ್ದೇಶನ ಪಡೆಯುವ ಕ್ಷಿಪಣಿ ನಿರ್ಭಯ್ ಕ್ಷಿಪಣಿಯು ಸುಮಾರು 750 ರಿಂದ 1000 ಕಿ.ಮೀ. ದೂರ ಚಲಿಸುವ ಸಾಮರ್ಥ್ಯ ಹೊಂದಿದೆ. ಕ್ಷಿಪಣಿ ಮಾದರಿಯನ್ನು ನೋಡಿದ್ದ ತಜ್ಞರು ಇದನ್ನು ಆರಂಭದಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಟೊಮ್ಹಾಕ್ ಕ್ಷಿಪಣಿಗೆ ಹೋಲಿಕೆ ಮಾಡಿದ್ದರು. ಎರಡು ಹಂತಗಳ ಈ ಕ್ಷಿಪಣಿ 6 ಮೀಟರ್ ಉದ್ದ, 0.52 ಮೀ. ಸುತ್ತಳತೆ, 2.7 ಮೀಟರ್ ರೆಕ್ಕೆಗಳ ವಿಸ್ತೀರ್ಣದೊಂದಿಗೆ ಒಟ್ಟು 1.500 ಕೆಜಿ ತೂಕ ಹೊಂದಿದೆ. ಈ ಕ್ಷಿಪಣಿಯನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಮೆಂಟ್ (ಎಡಿಇ) ವಿನ್ಯಾಸಗೊಳಿಸಿದ್ದು, ಬಳಿಕ ಈ ಕ್ಷಿಪಣಿಯನ್ನು ಡಿಆರ್‌ಡಿಒದ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಇನ್ನು ಕಳೆದ 2016 ರ ಡಿಸೆಂಬರ್ 20ರಂದು ನಡೆದಿದ್ದ ನಾಲ್ಕನೇ ಪರೀಕ್ಷೆಯಲ್ಲೂ ಕ್ಷಿಪಣಿ ವಿಫಲಾವಾಗಿತ್ತು. ಅಂದು ಉಡಾವಣೆಯಾದ ಎರಡೇ ನಿಮಿ?ದಲ್ಲಿ ಕ್ಷಿಪಣಿ ಗುರಿ ತಪ್ಪಿತ್ತು. ಹೀಗಾಗಿ ಕ್ಷಿಪಣಿಯನ್ನು ಮಾರ್ಗ ಮಧ್ಯೆಯೇ ನಾಶಪಡಿಸಿ ಅದು ಬಂಗಾಳಕೊಲ್ಲಿಯಲ್ಲಿ ಬೀಳುವಂತೆ ಮಾಡಲಾಯಿತು. ಇದೀಗ ಅಂತಿಮವಾಗಿ ನಿರ್ಭಯ್ ಕ್ಷಿಪಣಿ ತನ್ನ ಐದನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು, ಸಂಶೋಧಕ ತಂಡದಲ್ಲಿದ್ದ ವಿಜ್ಞಾನಿಗಳಲ್ಲಿ ಹ? ಮೂಡಿಸಿದೆ.

ನಿರ್ಭಯ್ : ಪರೀಕ್ಷಾರ್ಥ ಉಡಾವಣೆಯಲ್ಲಿ ಯಶಸ್ವಿಯಾದ ಕ್ಷಿಪಣಿ! ದೇಶೀಯವಾಗಿ ಅಭಿವೃದ್ಧಿಪಡಿಸಿದ ದೇಶದ ಪ್ರ ಥ ವು ಬ ಸೂಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ನಿರ್ಭಯ್ ಕೊನೆಗೂ ತನ್ನ ಸೋಲಿನ
ಸರಪಳಿಯನ್ನು ಕಳಚಿಕೊಂಡಿದ್ದು, ಮಂಗಳವಾರ ನಡೆದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಒಡಿಶಾದ ಬಾಲಸೋರ್ ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನ ಮೂರನೇ ಕಾಂಪ್ಲೆಕ್ಸ್ ನಲ್ಲಿ ಮೊಬೈಲ್ ಲಾಂಚರ್ವು  ಉಡಾವಣೆ ದಟ್ಟಹೊಗೆಯನ್ನು ಉಗುಳುತ್ತ ರಭಸವ ಗಿ ಗುರಿಯತ್ತ ನು ಗ್ಗಿದ ಕ್ಷಿಪಣಿ, ಪೂರ್ವ ನಿಯೋಜಿತ ಗುರಿಗೆ ಕರಾರುವಕ್ಕಾಗಿ ತಲುಪುವ ಮೂಲಕ ಯಶಸ್ವಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ