ಆರೋಗ್ಯ

ನೀವು ಈ 6 ಆಹಾರ ಪಥ್ಯಗಳನ್ನು ಪಾಲಿಸಿದರೆ ಸಿಗರೆಟ್ ಸೇದೋ ಚಟ ಬಿಡಬಹುದು…….

By admin

June 08, 2017

ಒಮ್ಮೆ ಸಿಗರೆಟ್ ಸೇದೋ ರುಚಿ ಕಂಡವರು ಇದನ್ನು ಬಿಡುವುದು ಕಷ್ಟ. ಒಂದು ವೇಳೆ ಇಂತಹ ಯಾವುದೋ ಕಾರಣಕ್ಕೆ ನೀವೂ ಧೂಮಪಾನಿಯಾಗಿದ್ದು ಇಂದು ಇದರಿಂದ ಹೊರಬರಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಆಹಾರ ಪಥ್ಯಗಳನ್ನು ಪಾಲಿಸಿ ನೋಡಿ…..

ವಾಸ್ತವವಾಗಿ ಧೂಮಪಾನದಿಂದ ಶ್ವಾಸಕೋಶ, ಗಂಟಲು,  ಬಾಯಿ ಮೊದಲಾದ ಅಂಗಗಳಿಗೆ ಕ್ಯಾನ್ಸರ್ ಆವರಿಸುವುದು ಪ್ರಮುಖವಾದರೆ ಉಳಿದಂತೆ ಸೈನಸ್, ಅಸ್ತಮಾ, ಸುಸ್ತು, ಕೆಳಹೊಟ್ಟೆಯಲ್ಲಿ ಭಾರೀ ತುರಿಕೆ ಮೊದಲಾದ ಸಮಸ್ಯೆಗಳೂ ಎದುರಾಗುತ್ತವೆ.

ಒಂದು ವೇಳೆ ನೀವು ಈ ದುರಭ್ಯಾಸದಿಂದ ಹೊರಬರಲು ಯತ್ನಿಸುತ್ತಿದ್ದರೆ ಕೆಲವು ಆಹಾರಗಳು ನಿಮ್ಮ ದೇಹದಲ್ಲಿ ಈಗಾಗಲೇ ಸಂಗ್ರಹವಾಗಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಸಮರ್ಥವಾಗಿದ್ದು ನಿಮ್ಮ ಪ್ರಯತ್ನಕ್ಕೆ ಹೆಚ್ಚಿನ ಬೆಂಬಲ ನೀಡುತ್ತವೆ.

ಕಿತ್ತಳೆ ಹಣ್ಣು

ಕಿತ್ತಳೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟುಗಳಿವೆ. ಇವು ರಕ್ತ ಮತ್ತು ಶ್ವಾಸಕೋಶಗಳಿಂದ ವಿಷಕಾರಿ ವಸ್ತುಗಳನ್ನು ನಿವಾರಿಸಿ ಹೊರದೂಡಲು ನೆರವಾಗುತ್ತವೆ. ಅಲ್ಲದೇ ರಕ್ತದಲ್ಲಿದ್ದ ನಿಕೋಟಿನ್ ಅಂಶವನ್ನು ನಿವಾರಿಸಲು ಹೆಚ್ಚು ಸಕ್ಷಮವಾಗಿದೆ.

ಕ್ಯಾರೆಟ್

ಕ್ಯಾರೆಟ್‌ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ, ಕೆ ಮತ್ತು ಸಿ ಇವೆ. ಇವೆಲ್ಲವೂ ಆರೋಗ್ಯಕ್ಕೆ ಪೂರಕವಾಗಿರುವ ಜೊತೆಗೇ ರಕ್ತ ಮತ್ತು ಶ್ವಾಸಕೋಶಗಳಲ್ಲಿ ಸಂಗ್ರಹವಾಗಿರುವ ಧೂಮಪಾನದ ಟಾರಿನ ಸಹಿತ ಹಲವು ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.

ಪಾಲಕ್ ಸೊಪ್ಪು

ಈ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಇತರ ವಿಟಮಿನ್ನುಗಳು ಶ್ವಾಸಕೋಶದಲ್ಲಿ ಸೇರಿರುವ ಟಾರು ಮತ್ತು ನಿಕೋಟಿನ್ ಅಂಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಅಲ್ಲದೇ ರಕ್ತದಲ್ಲಿರುವ ನಿಕೋಟಿನ್ ಅಂಶವನ್ನು ನಿವಾರಿಸಲು ಮತ್ತು ಇದಕ್ಕೆ ವ್ಯಸನರಾಗಿದ್ದ ನಿಮ್ಮನ್ನು ನಿಧಾನವಾಗಿ ಹೊರತರಲು ನೆರವಾಗುತ್ತದೆ.

ದಾಳಿಂಬೆ ಹಣ್ಣು

ರಕ್ತವನ್ನು ಶುದ್ಧೀರಿಸಲು ಅತ್ಯಂತ ಸಮರ್ಥವಾದ ಹಣ್ಣು ಎಂದರೆ ದಾಳಿಂಬೆ. ಧೂಮಪಾನಿಗಳಿಗೂ ಅಲ್ಲದವರಿಗೂ ಈ ಹಣ್ಣು ಅತ್ಯಂತ ಸೂಕ್ತವಾಗಿದ್ದು ರಕ್ತದಲ್ಲಿ ಸೇರಿದ್ದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.

ಬ್ರೋಕೋಲಿ

ನೋಡಲು ಹಸಿರು ಹೂಕೋಸಿನಂತೆ ಕಾಣುವ ಬ್ರೋಕೋಲಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ವಿಟಮಿನ್ ಬಿ5 ಇರುವ ಕಾರಣ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ.

 

 

 ಬೆರ್ರಿ ಹಣ್ಣುಗಳು

ವಿವಿಧ ಬೆರ್ರಿ ಹಣ್ಣುಗಳಾದ ಸ್ಟ್ರಾಬೆರಿ, ರಾಸ್ಪ್ ಬೆರಿ, ಬ್ಲೂಬೆರಿ ಮೊದಲಾದವುಗಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದ್ದು ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ.