ಗ್ಯಾಜೆಟ್

ನಿಮ್ಮ ಸ್ಮಾರ್ಟ್‌ಫೋನ್‌ ಹ್ಯಾಂಗ್‌ ಆಗದಿರಲು ಇಲ್ಲಿದೆ ಉಪಾಯ ..!ತಿಳಿಯಲು ಈ ಲೇಖನ ಓದಿ..

By admin

December 08, 2017

ಸ್ಮಾರ್ಟ್‌ಫೋನ್‌ ಹಳೆಯದಾದಷ್ಟು ಅದು ಹ್ಯಾಂಗ್‌ ಹಾಗೂ ಸ್ಲೋ ಆಗುವ ಚಾನ್ಸ್‌ ಹೆಚ್ಚಾಗಿರುತ್ತದೆ. ಅಂದರೆ ಬಳಕೆ ಮಾಡುವಾಗ ಲೇಟ್‌ ಆಗಿ ರೆಸ್ಪಾನ್ಸ್‌ ಮಾಡುತ್ತದೆ. ನಂತರ ಹ್ಯಾಂಗ್‌ ಆಗುತ್ತದೆ. ಹೀಗೆ ಆದರೆ ಫೋನ್‌ನ್ನು ಮತ್ತೆ ಮತ್ತೆ ರಿಸ್ಟಾರ್ಟ್‌ ಮಾಡಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಫೋನ್‌ ಹಳೆಯದಾಗುವುದರಿಂದ ಮಾತ್ರವಲ್ಲ, ಬದಲಾಗಿ ಇನ್ನೂ ಅನೇಕ ಕಾರಣಗಳಿಂದ ಉಂಟಾಗುತ್ತದೆ.

ಈ ಸ್ಮಾರ್ಟ್‌ಫೋನ್‌ಗಳ ಕತೆಯೇ ಇಷ್ಟು ಒಂದು ಫೋಟೊ ಜಾಸ್ತಿಯಾದರೂ ಸಾಕು, ಫೈಲ್‌ ಅಥವಾ ಸಾಂಗ್‌ ಡೌನ್‌ಲೋಡ್‌ ಮಾಡಿಕೊಂಡರೂ ಪದೇ ಪದೇ ಹ್ಯಾಂಗ್‌ ಆಗಿ ಬಿಡುತ್ತದೆ. ಯಾಕೆ ಈಗಾಗುತ್ತದೆ. ಇದಕ್ಕೆ ಪರಿಹಾರ ಏನು ಎಂದು ನೀವು ಸಹ ತಲೆಕೆಡಿಸಿಕೊಳ್ಳುತ್ತೀರಿ. ಅದಕ್ಕೆ ಇಲ್ಲಿದೆ ಪರಿಹಾರ.

ಮೊಬೈಲ್‌ ಹ್ಯಾಂಗ್‌ ಆಗೋದು ಹೇಗೆ ಮತ್ತು ಅದನ್ನು ಸರಿ ಪಡಿಸೋದು ಹೇಗೆ ನೋಡಿ…

1.ನಿಮ್ಮ ಫೋನ್ ಆಫ್ ಮಾಡಿ ಪವರ್ ಮೆನು ಕಾಣುವವರೆಗೆ ನಿಮ್ಮ ಫೋನ್‌ನಲ್ಲಿ ಪವರ್ ಬಟನ್ ಒತ್ತಿ ಹಿಡಿಯಿರಿ.

2.ನಿಮ್ಮ ಪವರ್ ಬಟನ್ ಅಥವಾ ಸ್ಕ್ರೀನ್ ಟ್ಯಾಪ್ಸ್‌ಗೆ ನಿಮ್ಮ ಫೋನ್ ಪ್ರಕ್ರಿಯಿಸುತ್ತಿಲ್ಲ ಎಂದಾದಲ್ಲಿ, ನೀವು ಹೆಚ್ಚು ಫೋರ್ಸ್ ಮಾಡಿ ಫೋನ್ ರೀಸ್ಟಾರ್ಟ್ ಮಾಡಿ.

3.ಮೊಬೈಲ್‌ ತುಂಬಾ ಹೀಟ್‌ ಆದಾಗ ಅದನ್ನು ಬಳಕೆ ಮಾಡಬೇಡಿ.

4.ನಿಮ್ಮ ಫೋನ್‌ಲ್ಲಿರುವ ಬೇಡದ ಅಪ್ಲಿಕೇಶನ್‌ಗಳು ಹ್ಯಾಂಗ್ ಆಗಲು ಕಾರಣವಾಗಿದೆ. ಅಂತಹ ಅಪ್ಲಿಕೇಶನ್‌ಗಳನ್ನು ಅಳಿಸುವುದು ಅತ್ಯವಶ್ಯಕವಾಗಿದೆ.

5.ಫೋನ್ ಹ್ಯಾಂಗ್ ಆದ ನಂತರ ಫೋನ್ ಆನ್ ಆಗುತ್ತಿಲ್ಲ ಎಂದಾದಲ್ಲಿ, ಫ್ಯಾಕ್ಟ್ರಿ ರೀಸೆಟ್ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸಬಹುದು.

6.ಟಾಸ್ಕ್‌ ಮ್ಯಾನೇಜರ್‌ ಬಳಕೆ ಮಾಡಿ. ಇದು ಬೇಡದ ಅಪ್ಲಿಕೇಶನ್‌ ಡಿಲಿಟ್‌ ಮಾಡಿ ಮೊಬೈಲ್‌ ಸ್ಪೀಡ್‌ ಆಗುವಂತೆ ಮಾಡುತ್ತದೆ.

7.ಯಾವುದೇ ಅಪ್ಲಿಕೇಶನ್‌ ಓಪನ್‌ ಮಾಡಿದ ನಂತರ ಅದನ್ನು ಸರಿಯಾಗಿ ಕ್ಲೋಸ್‌ ಮಾಡಿ, ಇಲ್ಲದಿದ್ದರೆ ಹ್ಯಾಂಗ್‌ ಆಗೋದು ಖಂಡಿತಾ.

8.ನಿಮ್ಮ ಇಂಟರ್‌ನಲ್‌ ಮೆಮೊರಿ ಯಾವಾಗಲೂ ಫ್ರಿಯಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಎಲ್ಲಾ ಡಾಟಾವನ್ನು ಎಕ್ಸ್‌ಟರ್‌ನಲ್‌ ಮೆಮೊರಿಗೆ ಬದಲಾಯಿಸಿ.

9.ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಲ್ಲಿ ಸ್ಟೋರ್‌ ಮಾಡುವುದಕ್ಕಿಂತ ಎಕ್ಸ್‌ಟರ್‌ನಲ್‌ ಮೆಮೊರಿ ಕಾರ್ಡ್‌ನಲ್ಲಿ ಸೇವ್‌ ಮಾಡಿ.

10.ಡಾಟಾ ಫ್ಯಾಕ್ಟರಿ ಸೆಟ್ಟಿಂಗ್‌ ರಿಸ್ಟೋರ್‌ ಮಾಡುತ್ತಿರಿ.