ಉಪಯುಕ್ತ ಮಾಹಿತಿ

ನಿಮ್ಮ ವೋಟರ್ ID ಯಲ್ಲಿ ಏನಾದ್ರೂ ತಪ್ಪಿದ್ದರೇ ಕೇವಲ ನಿಮಿಷಗಳಲ್ಲಿ ನಿಮ್ಮ ಮೊಬೈಲ್ ಮೂಲಕವೇ ಸರಿಪಡಿಸಿಕೊಳ್ಳಿ.. ಸಂಪೂರ್ಣ ಮಾಹಿತಿಗೆ ಮುಂದೆ ನೋಡಿ…

By admin

February 02, 2018

ಇನ್ನೇನು ಚುನಾವಣಾ ಹತ್ತಿರ ಸಮೀಪಿಸುತ್ತಿದೆ.ಈಗಂತೂ ಎಲ್ಲಿ ನೋಡಿದರೂ ಚುನಾವಣಾ ಬಗ್ಗೆಯೇ ಮಾತುಗಳು.ಯಾರು ಗೆಲ್ತಾರೆ,ಯಾರು ಸೋಲ್ತಾರೆ ಎಂಬುದೇ ಚರ್ಚೆ ಒಂದು ಕಡೆ ಆಗಿದ್ದರೆ, ಮತ್ತೊಂದು ಕಡೆ ವೋಟರ್ IDಗೆ ಸಂಬಂದಪಟ್ಟ ಕೆಲಸಗಳು ಭರದಿಂದಲೇ ನಡೆಯುತ್ತಿದೆ.

ಇದೆರೆಲ್ಲದರ  ನಾವು ನಮ್ಮಲ್ಲಿರುವ ವೋಟರ್ ID ಬಗ್ಗೆ ತುಂಬಾ ತಲೆಕೆಡಿಸಿಕೊಂಡಿರುತ್ತೇವೆ.ಯಾಕಂದ್ರೆ ಅದರಲ್ಲಿ ಹಲವಾರು ತಪ್ಪುಗಳು ಆಗಿರ್ತವೆ. ಈ ತಪ್ಪುಗಳನ್ನು ಹೇಗೆ ಸರಿಪಡಿಸೋದು ಅನ್ನೋದೇ ಒಂದು ದೊಡ್ಡ ಚಿಂತೆಯಾಗಿರ್ತದೆ.ಆದ್ರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯಿಲ್ಲ. ನೀವು ಏನೇ ತಪ್ಪಾಗಿದ್ರು, ನೀವು ನಿಮ್ಮ ಮೊಬೈಲ್ ನಲ್ಲೇ ಆನ್ಲೈನ್  ಮುಖಾಂತರವೇ ಸರಿಮಾಡ್ಕೊಬಹುದು.

ಈ ಕೆಳಗಿನ ಕ್ರಮಗಳನ್ನು ಅನುಸರಿಸಿ, ತಪ್ಪುಗಳನ್ನು ಸರಿಮಾಡಿಕೊಳ್ಳಿ…

ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್’ನಲ್ಲಿ National voters service portal ವೆಬ್ಸೈಟ್’ಅನ್ನು ಓಪನ್ ಮಾಡಿ..

ಹಂತ 1

ನಿಮ್ಮ ಗೂಗಲ್ ಬ್ರೌಸರ್’ನಲ್ಲಿ http://www.nvsp.in/ ಈ ಲಿಂಕ್’ನ್ನು ಓಪನ್ ಮಾಡಿ.

ಹಂತ 2

ಚಿತ್ರದಲ್ಲಿ ತೋರಿಸಿರುವ Correction of entries in electrol roll ಆಪ್ಷನ್ ಕ್ಲಿಕ್ ಮಾಡಿ.

ಹಂತ 3

 

 

ಪೇಜ್ ಓಪನ್ ಆದ ನಂತರ ಭಾಷೆಯನ್ನು ಕೇಳುತ್ತೆ, ಭಾಷೆ ಸೆಲೆಕ್ಟ್ ಮಾಡಿ,ಅಲ್ಲಿ Form 8 ಅಂತ ಒಂದು  ಅಪ್ಲಿಕೇಷನ್ ಕಾಣಿಸುತ್ತೆ.

ಹಂತ 4

ಚಿತ್ರದಲ್ಲಿರುವಂತೆ ನಿಮ್ಮ ರಾಜ್ಯ ಮತ್ತು ವಿಧಾನ ಸಭಾ ಕ್ಷೇತ್ರವನ್ನು ಸೆಲೆಕ್ಟ್ ಮಾಡಿಕೊಳ್ಳಿ..

ಹಂತ 5

ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಎಲ್ಲಾ ವಿವರಗಳನ್ನು ತುಂಬಿ, ನಿಮ್ಮ ಹೆಸರು, ವೋಟರ್ ID ನಂಬರ್….

ಹಂತ 6

ನಂತರ ನೀವು ಮೇಲೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವಂತೆ ಏನನ್ನು ಬದಲಾವಣೆ ಮಾಡಬೇಕು ಎಂದು ನಮೂದಿಸಿ..ಉದಾಹರಣೆಗೆ ನಿಮ್ಮ ಹೆಸರು  ಬದಲಾಯಿಸಬೇಕಿದ್ದರೆ ಈ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿರುವಂತೆ ಮಾಡಿ..

ಹಂತ 7

ಮತ್ತೊಮ್ಮೆ ಅಲ್ಲಿ ನಿಮ್ಮ ಸರಿಯಾದ ಹೆಸರನ್ನು ನಮೂದಿಸಿ..

ಹಂತ 8

ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ..(ನಿಮ್ಮ TC, DL, Adhar card etc)

ಹಂತ 9

ನಿಮ್ಮ ಮೊಬೈಲ್ ನಂಬರ್ ಕೊಡಿ, ಮತ್ತು ಈ ಮೇಲ್ ವಿಳಾಸ  ತುಂಬಿ. ಆನಂತರ Submit button ಅನ್ನು ಕ್ಲಿಕ್ ಮಾಡಿ..

ಹಂತ 10

ನಂತರ ನಿಮ್ಮ ಮೇಲ್ ಐ ಡಿ ಗೆ ನಿಮ್ಮ ವೋಟರ್ ಐ ಡಿ ಇನ್ಫಾರ್ಮೇಶನ್ ಬದಾಲಾಗಿರುವುದು ಕನ್ಫರ್ಮೇಷನ್ ಮೇಲ್ ಬರುತ್ತದೆ..

ಇಂತಹ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ “ಹಳ್ಳಿ ಹುಡುಗರು” ಪೇಜ್ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ… ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ..