ಜ್ಯೋತಿಷ್ಯ

ನಿಮ್ಮ ರಾಶಿ ಪ್ರಕಾರ ಈ ನಾಣ್ಯ ನಿಮ್ಮ ಪರ್ಸ್ ನಲ್ಲಿದ್ದರೆ ಏನಾಗುತ್ತೆ ಗೊತ್ತಾ?ನಿಮ್ಮ ರಾಶಿಗೆ ಯಾವ ನಾಣ್ಯ ನೋಡಿ…

By admin

March 02, 2019

ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ.

ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.

ವೃಷಭ : ಈ ರಾಶಿಯವರು ಸದಾ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಟ್ಟಿರಬೇಕು.

ಮಿಥುನ : ಮಿಥುನ ರಾಶಿಯವರು ಪರ್ಸ್ ನಲ್ಲಿ ಯಾವಾಗ್ಲೂ ಕಂಚಿನ ನಾಣ್ಯವನ್ನು ಇಟ್ಟುಕೊಳ್ಳುವುದು ಶುಭ.

ಕರ್ಕ : ಈ ರಾಶಿಯವರು ಬೆಳ್ಳಿ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಮಂಗಳಕರ.

ಸಿಂಹ : ಈ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ಅಥವಾ ಕಂಚಿನ ನಾಣ್ಯಗಳಲ್ಲಿ ಒಂದನ್ನು ಇಟ್ಟುಕೊಳ್ಳಬಹುದು.

ಕನ್ಯಾ : ಕನ್ಯಾ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಡಬೇಕು.

ತುಲಾ : ಈ ರಾಶಿಯವರು ಕೂಡ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನಿಟ್ಟುಕೊಂಡರೆ ಶುಭಕರ.

ವೃಶ್ಚಿಕ : ಇವ್ರು ಸದಾ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.

ಧನು : ಈ ರಾಶಿಯವರು ಪರ್ಸ್ ನಲ್ಲಿ ಕಂಚಿನ ನಾಣ್ಯವನ್ನು ಇಡಬೇಕು.

ಮಕರ : ಕಬ್ಬಿಣದ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಶುಭಕರ.

ಕುಂಭ : ಕಂಚಿನ ನಾಣ್ಯ ಪರ್ಸ್ ನಲ್ಲಿದ್ದರೆ ಮಂಗಳಕರ.

ಮೀನ : ಮೀನ ರಾಶಿಯವರ ಪರ್ಸ್ ನಲ್ಲಿ ಸದಾ ಚಿನ್ನದ ಅಥವಾ ಹಿತ್ತಾಳೆಯ ನಾಣ್ಯವಿರಬೇಕು.