ಉಪಯುಕ್ತ ಮಾಹಿತಿ

ನಿಮ್ಮ ಮೊಣಕೈ ಮತ್ತು ಮೊಣಕಾಲು ಕಪ್ಪಾಗಿದ್ದರೆ ಹೀಗೆ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

298

ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ ಹಾಗೂ ಒರಟಾಗಿರುತ್ತವೆ. ನೋಡಲು ಅಷ್ಟೇನು ಅಂದವಾಗಿರುವುದಿಲ್ಲ. ಡೆಡ್‌‌ಸ್ಕಿನ್‌ನ ಕಾರಣದಿಂದಾಗಿ ಆ ಭಾಗದ ಚರ್ಮ ಕಪ್ಪಾಗುತ್ತದೆ.

ಪ್ರತಿದಿನ ನಾವು ಬಳಕೆ ಮಾಡುವ ಸೋಪ್‌ನಿಂದ ಈ ಚರ್ಮದ ಬಣ್ಣವನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ಇನ್ನೂ ಕೆಲವೊಂದು ಟಿಪ್ಸ್‌‌ಗಳನ್ನು ಬಳಕೆ ಮಾಡಿಕೊಂಡು ನೀವು ಚರ್ಮದ ಬಣ್ಣವನ್ನ ಬದಲಾವಣೆ ಮಾಡಬಹುದು.

 

ಆದರೆ ನೀವು ಕೆಳಗಿನ ಈ ಕ್ರಮವನ್ನು ಒಂದು ಬಾರಿ ಬಳಸಿ ನೋಡಬಹುದು…

ಟೂಥ್‌ಪೇಸ್ಟ್ ಮತ್ತು ಬೇಕಿಂಗ್‌ ಸೋಡಾ

  • ಟೂಥ್‌ಪೇಸ್ಟ್ ಮತ್ತು ಬೇಕಿಂಗ್‌ ಸೋಡಾವನ್ನು ಮಿಕ್ಸ್‌ ಮಾಡಿ ನಿಮ್ಮ ಮೊಣಕೈ ಮತ್ತು ಮೊಣಕಾಲಿಗೆ ಹಾಕಿ. ಈಗ ಅದನ್ನು ಟೂಥ್‌‌ಬ್ರಶ್‌ ಸಹಾಯದಿಂದ 2 ನಿಮಿಷಗಳ ಕಾಲ ಚೆನ್ನಾಗಿ ತಿಕ್ಕಿ.
  • ನಂತರ ಐದು ನಿಮಿಷ ಬಿಟ್ಟು ಅದನ್ನು ಉಗುರು ಬಿಸಿ ನೀರಿನಿಂದ ತೊಳೆಯಿರಿ. ಇದಾದ ಬಳಿಕ ರೆಗ್ಯುಲರ್‌ ಮಾಯಿಶ್ಚರೈಸರ್‌ ಹಚ್ಚಿ. ಇದನ್ನು ಎರಡು ವಾರದಲ್ಲಿ ಒಂದು ಬಾರಿ ಮಾಡುತ್ತ ಬಂದರೆ ಮೊಣಕೈನ ಹಾಗೂ ಮೊಣಕಾಲಿನ ಭಾಗ ಬಿಳಿ ಬಣ್ಣಕ್ಕೆ ತಿರುಗುತ್ತದೆ.

ನಿಂಬೆಹಣ್ಣು

  • ಸ್ವಲ್ಪ ನಿಂಬೆ ರಸವನ್ನು ತೆಗೆದುಕೊಂಡು ಕಪ್ಪಾದ ಪ್ರದೇಶದಲ್ಲಿ ಹಚ್ಚಿ. ಆ ಬಳಿಕ
  • 15 ರಿಂದ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಹೀಗೆ ಮಾಡಿದರೆ ಚರ್ಮ ಸಹಜ ಸಿದ್ಧವಾದ ಹೊಳಪನ್ನು ಪಡೆಯುತ್ತದೆ.

ಸೌತೇಕಾಯಿ

  • ಸೌತೇಕಾಯಿ ಹೋಳುಗಳ ಜೊತೆಗೆ  ಸ್ವಲ್ಪ ನಿಂಬೆರಸ, ಅರಿಶಿಣ ಬೆರೆಸಿ ಮಿಕ್ಸಿಯಲ್ಲಿ ಹಾಕಿ ಮಿಕ್ಸ್ ಮಾಡಿ.
  • ಈ ಮಿಶ್ರಣವನ್ನು ಕಪ್ಪಾದ ಭಾಗಗಳಿಗೆ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.

ಕಡ್ಲೆಹಿಟ್ಟು

  • ಕಡ್ಲೆಹಿಟ್ಟಿನಲ್ಲಿ ಅರಿಶಿನ ಮಿಕ್ಸ್‌ ಮಾಡಿ ಮೊಣಕಾಲಿಗೆ ಹಚ್ಚಿ.
  • ಸ್ವಲ್ಪ ಸಮಯ ಒಣಗಿದ ಮೇಲೆ ತೊಳೆಯಿರಿ ಉತ್ತಮ ಫಲಿತಾಂಶ ಸಿಗುತ್ತದೆ.

ಆಲೂಗಡ್ಡೆ

  • ಆಲೂಗಡ್ಡೆಯನ್ನು ಪೇಸ್ಟ್‌ ಮಾಡಿ ಅದಕ್ಕೆ ಜೇನು ಮತ್ತು ಹಸಿ ಹಾಲು ಹಾಕಿ ಮಿಕ್ಸ್‌ ಮಾಡಿ ಮೊಣಕೈಗೆ ಹಚ್ಚಿ.
  • ಕೆಲವು ದಿನ ಹೀಗೆ ಮಾಡಿದ್ರೆ ಮೊಣಕೈ ಮೊಣಕಾಲು ಬೆಳ್ಳಗಾಗುತ್ತದೆ.

ಹಾಲು

ಹಾಲು, ಅದರ ಉತ್ಪನ್ನಗಳು ಚರ್ಮವನ್ನು ಸಂರಕ್ಷಿಸುವ ಗುಣಗಳು ಅಧಿಕವಾಗಿ ಇದ್ದರೂ. ಸ್ವಲ್ಪ ಹಾಲು, ಮೊಸರನ್ನು ತೆಗೆದುಕೊಂಡು ಮಿಶ್ರಣವನ್ನು ಬೆರೆಸಿ ಚರ್ಮಕ್ಕೆ ಹಚ್ಚಬೇಕು. ಇದರಿಂದ ನಿರೀಕ್ಷಿತ ಫಲಿತಾಂಶ ಸಿಗುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ