ಸಿನಿಮಾ

ನಿಮ್ಮ ಮನೆ ಮನೆಗೆ “ಕಿಲಾಡಿ ಕುಟುಂಬ” ಬರುತ್ತಿದೆ! ಏನು ಅಂತ ಗೊತ್ತಾಗಬೇಕಾದರೆ ಈ ಲೇಖನಿ ಓದಿ……

696

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್‌ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿಸಿದ್ದ 10 ಜನ ಫೈನಲಿಸ್ಟ್‌ ಗಳು ಮತ್ತೂಮ್ಮೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ.

ಅಂದ ಆಗೇ ಆ ಕಾರ್ಯಕ್ರಮದ ಹೆಸರು “ಕಿಲಾಡಿ ಕುಟುಂಬ” ವಿಶೇಷವಾಗಿ ನವರಸನಾಯಕ ಜಗ್ಗೇಶ್‌ ಅವರು ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿದ್ದ ಜಗ್ಗೇಶ್‌ ಅವರು ಇಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಅಲ್ಲದೆ, ಇವರೊಂದಿಗೆ ವಿಶೇಷವಾಗಿ ಡ್ರಾಮಾ ಜ್ಯೂನಿಯರ್, ಲಿಟ್ಲ ಚಾಂಪಿಯನ್ಸ್‌, ಸರಿಗಮಪ ಹಾಗೂ ಜೀ ಕುಟುಂಬದ ಬಹುತೇಕ ಸದಸ್ಯರು ಈ ಕಿಲಾಡಿ ಕುಟುಂಬದಲ್ಲಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇವರಿಗೆಲ್ಲ ಕ್ಯಾಪ್ಟನ್‌ ಬೇರಾರೂ ಅಲ್ಲ, ನಟ ಜಗ್ಗೇಶ್‌! ಜೂನ್‌ 12ರ ಸೋಮವಾರದಿಂದ ಆರಂಭವಾಗಲಿರುವ ಈ ರಿಯಾಲಿಟಿ ಶೋ ಈವರೆಗೆ ಪ್ರಸಾರಗೊಂಡ ಕಾಮಿಡಿ ಕಾರ್ಯಕ್ರಮಗಳೆಲ್ಲವುಗಳಿಗಿಂತ ವಿಭಿನ್ನವಾಗಿ ಮೂಡಿಬರಲಿದೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಂತೆ ಇದು ಕೂಡ ಪ್ರೇಕ್ಷಕರನ್ನು ರಂಜಿಸಲೆಂದೇ ನಿರೂಪಿಸುತ್ತಿರುವ ಶೋ ಆಗಿದೆ. ಆದರೆ, ಈ ಬಾರಿ ವಿಶೇಷವಾಗಿ ಕಾಮಿಡಿಯ ಜೊತೆಗೆ ಎಲ್ಲಾ ಬಗೆಯ ನವರಸಗಳನ್ನು ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಶೋನಿಂದ ನಡೆಯುತ್ತಿದೆ.

ಎಂದಿನಂತೆ ನಾಡಿನ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಎಲ್ಲಾ ತಯಾರಿಯೂ ನಡೆದಿದೆ. ಇದರ ಜೊತೆಗೆ, ದಿನದಿಂದ ದಿನಕ್ಕೆ ಮರೆಯಾಗುತ್ತಿರುವ ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಹುಡುಕಿ ಈ ಕಾರ್ಯಕ್ರಮದ ಮೂಲಕ ಬೆಳಕಿಗೆ ತರುವಂತಹ ಹೊಸ ಪ್ರಯತ್ನವನ್ನು ಜೀ ವಾಹಿನಿ ತಂಡ ಕೈಗೆತ್ತಿಕೊಂಡಿದೆ.

ವಿಶೇಷವೆಂದರೆ ನವರಸ ನಾಯಕ ಜಗ್ಗೇಶ್‌ ಅವರೊಂದಿಗೆ, ಕಾಮಿಡಿ ಕಿಲಾಡಿಗಳ ವಿಜೇತರಾದ ಶಿವರಾಜ್‌ ಕೆ.ಆರ್‌. ಪೇಟೆ ಹಾಗೂ ನಯನ ಕೂಡ ನಿರೂಪಣೆಯ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ. ಜೂ.12ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7 ರಿಂದ 7.30ರ ವರೆಗೆ ಕಿಲಾಡಿ ಕುಟುಂಬ ಪ್ರಸಾರವಾಗಲಿದೆ. ಈ ಕಿಲಾಡಿ ಕುಟುಂಬ ವಾರದ 5 ದಿನವೂ ಪ್ರಸಾರವಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ನಿಮ್ಮ ಮಕ್ಕಳಿಗೆ ಕಿವಿ ಚುಚ್ಚುವುದಕ್ಕೆ ಮುಂಚೆ ಏನು ಮಾಡಬೇಕು ಗೊತ್ತಾ? ಈ ಲೇಖನಿ ಓದಿ…

    ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ.

  • ಆಧ್ಯಾತ್ಮ

    ನಿಮ್ಮ ಸಂತೋಷ ನಿಮ್ಮ ಕೈಯಲ್ಲಿಯೇ ಇದೆ!ಹೇಗೆ ಗೊತ್ತಾ? ಈ ಲೇಖನಿ ಓದಿ…..

    ಈ ಜಗತ್ತಿನಲ್ಲಿ ಮನುಷ್ಯ ಜೀವನ ಪ್ರಾಣಿ–ಪಕ್ಷಿಗಳಿಗಿಂತ ಉನ್ನತ ಹಾಗೂ ಅರ್ಥಪೂರ್ಣವಾದುದ್ದು. ಒಮ್ಮೆ ಮನುಷ್ಯ ಜೀವ ತಳೆದ ಮೇಲೆ ಇನ್ನೊಂದು ಜನ್ಮದಲ್ಲಿ ಮತ್ತೆ ಮನುಷ್ಯನಾಗೇ ಹುಟ್ಟುತ್ತಾನೆ ಎಂದು ಹೇಳಲಾಗದು. ಇರುವ ಒಂದೇ ಜನ್ಮದಲ್ಲಿ ಸಕಲ ಸಂತೋಷವನ್ನು ಕಾಣಬೇಕು. ಮನುಷ್ಯ ಆಧ್ಯಾತ್ಮಿಕ ಮಾರ್ಗಗಳಲ್ಲಿ ಸಾಗುವ ಮೂಲಕ ತನ್ನೊಳಗೆ ತಾನು ಸಂತೋಷವನ್ನು ಕಂಡುಕೊಳ್ಳಬಹುದು.

  • Uncategorized

    ಮಾಲೂರಿನ ಯಶವಂತಪುರ ರಾಜ್ಯದ ಮೊದಲ ಡಿಜಿಟಲ್ ಹಳ್ಳಿ

    ಮಾಲೂರಿನ ‘ಯಶವಂತಪುರ’ ಗ್ರಾಮ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ರೂಪಿಸಿರುವ ರಾಜ್ಯದ ಮೊದಲ ಡಿಜಿಟಲ್ ವಿಲೇಜ್’ ಇದನ್ನು ಮಾಲೂರಿನ ಶಾಸಕ ಎಸ್.ಮಂಜುನಾಥ್ ಗೌಡ ಉದ್ಘಾಟನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.

  • ಸುದ್ದಿ

    ಹೋಟೆಲ್‍ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್.

    ಹೋಟೆಲ್‍ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಹೋಟೆಲ್‍ನ್ನು ಸೀಲ್‍ಡೌನ್ ಮಾಡಿದ್ದಾರೆ. ನಗರದ ಹೋಟೆಲ್ ಒಂದರಲ್ಲಿ ಹೋಟೆಲ್ ಮಾಲೀಕನ ಮಗ ಗ್ರಾಹಕರಿಗೆ ನೀಡುವ ಆಹಾರವನ್ನು ಎಂಜಲು ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹೋಟೆಲ್ ಬಾಗಿಲು ಹಾಕಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ. ಓರ್ವ ವ್ಯಕ್ತಿ…

  • ಸ್ಪೂರ್ತಿ

    ಹೊಟ್ಟೆ ಪಾಡಿಗಾಗಿ ರುಬ್ಬುವ ಕಲ್ಲನ್ನು ಮಾರುತ್ತಿದ್ದ, ಈ ಮಹಿಳೆ ಪೋಲಿಸ್ ಆಫೀಸರ್ ಹಾಗಿದ್ದು ಹೇಗೆ ಗೊತ್ತಾ.?ಎಲ್ಲರಿಗೂ ಸ್ಪೂರ್ತಿ ಈ ಸ್ಟೋರಿ, ಓದಿ ಶೇರ್ ಮಾಡಿ…

    ಮನಸ್ಸಿನಲ್ಲಿ ದೃಢವಾದ ನಿರ್ಣಯವು ಇದ್ದಲ್ಲಿ ಯಾವುದೇ ಕೆಲಸ ಕಷ್ಟವಲ್ಲ .ನಿಮ್ಮಲ್ಲಿ ಪ್ರತಿಭೆ ಇದ್ದು,ಗುರಿ ಅನ್ನುವ ಛಲ ಹೊಂದಿದ್ದರೆ ನಿಮ್ಮನ್ನು ಜಗತ್ತಿನ ಯಾವುದೇ ಶಕ್ತಿಯು ತಡೆಯಲಾರದು ಎಂಬ ಮಾತಿದೆ. ಆದ್ರೆ ಎಷ್ಟೇ ತೊಂದರೆಗಳು ಬರ್ರ್ಲಿ ಯಾವುತ್ತು ನಮ್ಮ ಧೈರ್ಯವನ್ನು ನಾವು ಬಿಡಬಾರದು ಎಂಬ ಮಾತಿದೆ. ಈ ಮಾತಿಗೆ ಉದಾಹರಣೆ ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ‘ಪದ್ಮಶಿಲಾ ತಿರುಪಡೆ’. ಇವರು ತಮ್ಮ ಕಷ್ಟದ ದಿನಗಳಲ್ಲೂ, ಸೋಲನ್ನು ಒಪ್ಪಿಕೊಳ್ಳದೆ,ದೇಶದ ಎಲ್ಲಾ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ. ಯಾರು ಈ ಮಹಿಳೆ… ಸಾಧನೆ ಅನ್ನುವುದು ಸಾಮಾನ್ಯವಾದ ಕೆಲಸವಲ್ಲ,…

  • ಸುದ್ದಿ

    ಪಂಜಾಬ್‍ನಲ್ಲಿ ಮತ್ತೆರಡು ಪಾಕ್ ಡ್ರೋಣ್‍ಗಳ ಹಾರಾಟ..! ಇಷ್ಟಕ್ಕೂ ಏನಿದು ಗೊತ್ತಾ,.!!

    ಚಂಡೀಗಢ, ಅ.9-ಚೀನಾ ಡ್ರೋಣ್‍ಗಳ ಮೂಲಕ ಪಾಕಿಸ್ತಾನದ ಉಗ್ರಗಾಮಿಗಳು ಪಂಜಾಬ್ ಮತ್ತು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕಾಗಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಗಡಿ ಭಾಗದಲ್ಲಿ ಎಸೆದ ಘಟನೆ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಪ್ರಕರಣ ವರದಿಯಾಗಿದೆ. ಪಂಜಾಬ್‍ನಲ್ಲಿ ಮತ್ತೆ ಪಾಕಿಸ್ತಾನ ಮೂಲದ ಎರಡು ಡ್ರೋಣ್‍ಗಳು ಹಾರಾಟ ನಡೆಸಿವೆ.ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಹುಸೇನಿವಾಲಾ ಗಡಿಯ ಮೂಲಕ ಡ್ರೋಣ್ ಭಾರತ ಪ್ರವೇಶಿಸುತ್ತಿರುವುದನ್ನು ಪತ್ತೆ ಮಾಡಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಫೀರೋಜïಪುರ ಹುಸೇನಿವಾಲಾ ಪೋಸ್ಟ್ ನಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಪಾಕಿಸ್ತಾನದ ಕಡೆಯಿಂದ…