ಜೀವನಶೈಲಿ

ನಿಮ್ಮ ಮಕ್ಕಳಿಗೆ ಕಿವಿ ಚುಚ್ಚುವುದಕ್ಕೆ ಮುಂಚೆ ಏನು ಮಾಡಬೇಕು ಗೊತ್ತಾ? ಈ ಲೇಖನಿ ಓದಿ…

By admin

August 01, 2017

ಮಗುವಿಗೆ ಕಿವಿ ಚುಚ್ಚಿಸುವಾಗ ಯಾವುದೇ ರೀತಿಯ ಅನಸ್ಥೆಸಿಯಾ ಬಳಸುವುದಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ತುಂಬಾನೇ ನೋವುಂಟಾಗಬಹುದು. ಕೆಲವು ಪೋಷಕರು ಮಗು ತುಂಬಾ ಚಿಕ್ಕದಿದ್ದಾಗಲೇ ಈ ನೋವು ಮುಗಿದು ಬಿಡಲಿ ಎಂದು ಯೋಚಿಸುತ್ತಾರೆ. ಇನ್ನು ಕೆಲವರು ಕಿವಿ ಚುಚ್ಚಿಸಲು ಮಗು ಸ್ವಲ್ಪ ದೊಡ್ದದಾಗುವವರೆಗು ಕಾಯುತ್ತಾರೆ. ಮಗುವಿಗೆ ಕಿವಿ ಚುಚ್ಚಿಸುವುದು ನಿಮಗೆ ಬಿಟ್ಟ ನಿರ್ಧಾರವಾಗಿರುವ ಕಾರಣಕ್ಕೆ, ನಿಮ್ಮ ಮಗುವಿನ ಒಳಿತನ್ನು ನೋಡಿ ನೀವು ನಿರ್ಧಾರ ತೆಗೆದುಕೊಳ್ಳುವಿರಿ.

ಅದೇನೇ ಇರಲಿ, ನಿಮ್ಮ ಮಗುವಿಗೆ ಕಿವಿ ಚುಚ್ಚಿಸುವ ಮುನ್ನ ನಿಮ್ಮ ವೈದ್ಯರಿಗೆ ಇದನ್ನು ತಿಳಿಸಿರಿ. ನಾವು ನೀಡುವ ಸಲಹೆ ಏನು ಅಂದರೆ, ನಿಮ್ಮ ಮಗುವು ಸ್ವಲ್ಪ ದೊಡ್ಡದಾಗುವವರೆಗು ಕಿವಿ ಚುಚ್ಚಿಸುವುದಕ್ಕೆ ಕಾಯಿರಿ. ಇದಕ್ಕೆ ಒಂದು ಸರಳ ಕಾರಣ ಅಂದರೆ, ಮಕ್ಕಳು ಚಡಪಡಿಸುವುದು ಜಾಸ್ತಿ.

ನಿಮ್ಮ ಮಗುವು ಆಟಾಡುವಾಗ ತನ್ನ ಬಾಯಿಂದ ಕಿವಿಗೆ ಕೈಗಳ ಮೂಲಕ ಕೀಟಾಣುಗಳನ್ನು ವರ್ಗಾಯಿಸಿಕೊಳ್ಳಬಹುದು. ಇದರಿಂದ ಅವರ ಕಿವಿಯಲ್ಲಿ ಸೋಂಕು ಉಂಟಾಗಬಹುದು. ಸೋಂಕು ತಾಗಿದ ಕಿವಿಯು ನೀಡುವ ನೋವು, ಮಗುವು ಸ್ವಲ್ಪ ದೊಡ್ಡದಾದ ಮೇಲೆ ಕಿವಿ ಚುಚ್ಚಿಸಿದಾಗ ಆಗುವ ನೋವಿಗಿಂತ ಜಾಸ್ತಿ ಇರುತ್ತದೆ! ಸಣ್ಣ ಮಕ್ಕಳ ಚುಚ್ಚಿಸಿದ ಕಿವಿಯನ್ನು ಕಾಪಾಡಿಕೊಳ್ಳುವುದು ಕಷ್ಟಕರ.

ಕಿವಿ ಚುಚ್ಚಲಿಕ್ಕೆ ಉಪಯೋಗಿಸುವ ಸಾಧನಗಳ ನೈರ್ಮಲ್ಯತೆಯ ಬಗ್ಗೆ ನೀವು ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಚಿಕ್ಕ ಮಕ್ಕಳು ಮೊದಲೇ ಸೋಂಕಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು ಇರುತ್ತೆ, ಅಂತದರಲ್ಲಿ ಈ ಹೆಚ್ಚುವರಿ ಅಪಾಯವನ್ನು ನೀವು ನಿಮ್ಮ ಎಳೆದುಕೊಳ್ಳುವಿರ ಎಂದು ವಿಚಾರಿಸಿ. ನೀವು ಮಗು ತುಂಬಾ ಚಿಕ್ಕದಿದ್ದಾಗಲೇ ಕಿವಿ ಚುಚ್ಚಿಸಬೇಕೆಂದಿದ್ದರೆ, ಮಗುವಿಗೆ ಜ್ವರ ಅಥವಾ ದದ್ದುಗಳು(rashes) ಉಂಟಾಗಬಹುದು. ಮಕ್ಕಳು ತಮ್ಮ ದೇಹದಲ್ಲಿನ ಬದಲಾವಣೆಗಳಿಗೆ ಹೀಗೆ ಪ್ರತಿಕ್ರಿಯಿಸುವುದು ಸಹಜ. ಹಾಗಾಗಿ ನೀವು ಏನು ಮಾಡುವ ಮುಂಚೆಯೇ ಮಕ್ಕಳ ತಜ್ಞರ ಬಳಿ ಹೇಳಿರಿ.

ನೀವು ಮಗುವಿಗೆ ಕಿವಿ ಚುಚ್ಚಿಸಬೇಕೆಂದು ನಿರ್ಧಾರ ಮಾಡಿದರೆ, 24 ಕಾರಟ್ ಚಿನ್ನವನ್ನೇ ಬಳಸಿ. ಇದು ಸೋಂಕು ತಗಲುವ ಸಾಧ್ಯತೆಗಳನ್ನು ಕಮ್ಮಿ ಮಾಡಿಸುತ್ತದೆ. ಬೇರೇ ರೀತಿಯ ಆಭರಣಗಳು ನಿಮ್ಮ ಮಗುವಿನ ಚರ್ಮಕ್ಕೆ ಆಗದೆ ಇರಬಹುದು. ನಿಮ್ಮ ಮಗುವಿನ ದೇಹ ಹಾಗು ಚರ್ಮ ಹುಟ್ಟಿದ ಸ್ವಲ್ಪ ದಿನಗಳವರೆಗೂ ತುಂಬಾ ಸೂಕ್ಷ್ಮವಾಗಿ ಇರುವ ಕಾರಣ, ನೀವು ಕಿವಿ ಚುಚ್ಚಿಸುವ ಮುನ್ನ ಎಲ್ಲಾ ಮುನ್ನಚ್ಚೆರಿಕೆ ಕ್ರಮಗಳನ್ನು ಪಾಲಿಸಿ.

ಮಗುವಿಗೆ ಒಮ್ಮೆ ಕಿವಿ ಚುಚ್ಚಿಸಿದ ನಂತರ ಯಾವುದೇ ಕಾರಣಕ್ಕೂ 6 ತಿಂಗಳುಗಳವರೆಗೆ ಅವುಗಳನ್ನು ತೆಗೆಯಬೇಡಿ. ಗಾಯದ ಮೇಲೆ ಗಮನವಿಡಿ ಹಾಗು ಅದರೊಂದಿಗೆ ಸೋಂಕು, ಕಡಿತ ಹಾಗು ಮೈನೂರತೆ ಪ್ರತಿಕ್ರಿಯೆಗಳ ಮೇಲೆ ಹದ್ದಿನ ಕಣ್ಣು ಇಡಿ. ದಿನಕ್ಕೆ ಒಂದು ಬಾರಿ ತುಂಬಾನೇ ನಾಜೂಕಾಗಿ ಓಲೆಯನ್ನು ತಿರುವಿ. ಇದು ಓಲೆಯನ್ನು ಗಾಯ ಮಾಸಲು ಬೆಳೆಯುತ್ತಿರುವ ಚರ್ಮದೊಂದಿಗೆ ಕೂಡಿಕೊಳ್ಳಬಾರದು ಎಂದು. ಉರಿತ, ರಕ್ತ ಚಿಮ್ಮುವುದು ಅಥವ ಹೊರಸೂಸುವುದು, ಇವುಗಳೆಲ್ಲ ಸೋಂಕು ತಗಲಿರುವ ಸೂಚನೆಗಳು. ಹೀಗಾಗಿ ನೀವು ಕೂಡಲೇ ಮಕ್ಕಳ ತಜ್ಞರನ್ನು ಭೇಟಿ ಮಾಡಿ ನಿಮ್ಮ ಮಗುವಿಗೆ ಸತ್ಕಾರ ಮಾಡಿ.

ತಕ್ಷಣದ ಪರಿಹಾರ:-

ಸೋಂಕಿಗೆ ತಕ್ಷಣದ ಮನೆ ಪರಿಹಾರ ಎಂದರೆ, ಸೋಂಕು ತಗುಲಿದ ಜಾಗಕ್ಕೆ ಆಲ್ಕೋಹಾಲ್ ಉಜ್ಜಿ. ಮಗುವಿಗೆ ಕಿವಿ ಚುಚ್ಚಿಸುವ ಬಗ್ಗೆ ಎಲ್ಲಾ ಪೋಷಕರು ಗೊಂದಲದಲ್ಲಿ ಇರುತ್ತಾರೆ. ಅದಕ್ಕಾಗಿಯೇ ನೀವು ನಿಮ್ಮ ಹಿರಿಯರನ್ನು ಹಾಗು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು.

ಮೂಲ :