inspirational

ನಿಕಿಲ್ ಹಾಗು ಸುಮಲತಾ ಹಾವು ಹೆಣಿ ಆಟ:ಊಹೆಗೂ ಮೀರಿದ ಮಂಡ್ಯ ಪಲಿತಾಂಶ….!

By admin

May 23, 2019

ಮಂಡ್ಯ ಫಲಿತಾಂಶ ಪ್ರತಿ ಕ್ಷಣವೂ ಕುತೂಹಲ ಮೂಡಿಸುತ್ತಿದೆ. ಬಹುತೇಕ ಕ್ಷೇತ್ರಗಳಲ್ಲಿ ಮತಗಳ ಅಂತರ ನೋಡಿ ಯಾರು ಗೆಲ್ಲಬಹುದು ಎಂಬ ನಿರ್ಧಾರಕ್ಕೆ ಈಗಾಗಲೇ ಬಂದಾಗಿದೆ. ಆದ್ರೆ, ಮಂಡ್ಯದಲ್ಲಿ ಮಾತ್ರ ಯಾರೂ ಗೆಲ್ಲಬಹುದು ಎಂಬುದರ ಬಗ್ಗೆ ಸುಳಿವು ಕೂಡ ಸಿಕ್ತಿಲ್ಲ. ಒಂದು ಹಂತದಲ್ಲಿ ಸುಮಲತಾ ಮುನ್ನಡೆ ಸಾಧಿಸಿದರೇ, ಮತ್ತೊಂದು ಹಂತದಲ್ಲಿ ನಿಖಿಲ್ ಕುಮಾರ್ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಾರೆ. ಈ ಕಡೆ ಮತಗಳ ಅಂತರವೂ ಅಧಿಕವಾಗುತ್ತಿಲ್ಲ. ಕೇವಲ ನೂರು, ಇನ್ನೂರು, ಮುನ್ನೂರು ಹೀಗೆ ಕೆಲವೇ ಮತಗಳ ಅಂತರ ಮಾತ್ರ ಇಲ್ಲಿ ಕಂಡು ಬರುತ್ತಿದೆ.

ಸದ್ಯ ಮಂಡ್ಯದ ಸ್ಥಿತಿ ನೋಡುತ್ತಿದ್ದರೇ ಇದು ಯಾವ ಸಿನಿಮಾಗಿಂತ ಕಮ್ಮಿ ಇಲ್ಲ ಅನಿಸುತ್ತಿದೆ. ಅಂತಿಮ ಹಂತದವರೆಗೂ ಸ್ಪಷ್ಟವಾದ ಫಲಿತಾಂಶ ಸಿಗುವುದು ಕಷ್ಟವಾಗಬಹುದು. ಹಾಗಿದ್ರೆ, ಮಂಡ್ಯದಲ್ಲಿ ಬೆಳಿಗ್ಗೆಯಿಂದ ಮತ ಎಣಿಕೆ ಹೇಗಿತ್ತು? ಸುಮಲತಾಗೆ ಎಷ್ಟು ಮತ ಸಿಕ್ಕಿವೆ? ನಿಖಿಲ್ ಕುಮಾರ್ ಗೆ ಎಷ್ಟು ಮತಗಳು ಸಿಕ್ಕಿವೆ ಎಂಬ ವಿವರ ಮುಂದೆ ಓದಿ…..

ಅಂಚೆ ಮತಗಳಲ್ಲಿ ಸುಮಲತಾ ಮುನ್ನಡೆ :ಮಂಡ್ಯದಲ್ಲಿ ಮತ ಎಣಿಕೆ ಆರಂಭವಾದಾಗ ಮೊದಲು ಅಂಚೆ ಮತಗಳನ್ನ ಪರಿಗಣನೆಗೆ ತೆಗೆದುಕೊಳ್ಳಲಾಯಿತು. ಈ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದರು. ಹೀಗೆ ಆರಂಭಿಕ ಮುನ್ನಡೆ ಸಾಧಿಸಿದ ಸುಮಲತಾಗೆ ಇದು ಆತ್ಮವಿಶ್ವಾಸ ಹೆಚ್ಚಿಸಿತ್ತು. ಆದ್ರೆ, ಈ ಆತ್ಮ ವಿಶ್ವಾಸ ಹೆಚ್ಚು ಸಮಯ ಉಳಿಯಲಿಲ್ಲ.

ಮೊದಲ ಸುತ್ತಿನಲ್ಲಿ ನಿಖಿಲ್ ಮುನ್ನಡೆ :ಸುಮಲತಾ ಅವರಿಗೆ ಅಂಚೆ ಮತಗಳಲ್ಲಿ ಮುನ್ನಡೆ ಸಿಕ್ಕ ಖುಷಿ ಹೆಚ್ಚು ಸಮಯ ಇರಲಿಲ್ಲ. ಯಾಕಂದ್ರೆ ಮೊದಲ ಸುತ್ತ ಮುಗಿಯುಷ್ಟರಲ್ಲಿ ನಿಖಿಲ್ ಕುಮಾರ್ ಸ್ವಾಮಿ ಮುನ್ನಡೆ ಸಾಧಿಸಿದರು. ಮೊದಲು 12 ಮತಗಳ ಅಂತರ ಸಾಧಿಸಿದರು. ನಂತರ 50 ಮತಗಳ ಅಂತರ ಸಾಧಿಸಿದರು. ಆಮೇಲೆ 1050 ಮತಗಳವರೆಗೂ ಅಂತರ ಕಾಯ್ದುಕೊಂಡರು.

ಹಾವು-ಏಣಿ ಆಟ ಆರಂಭ ನಿಖಿಲ್ :1900ಕ್ಕೂ ಹೆಚ್ಚು ಮತಗಳು ಅಂತರ ಕಾಯ್ದುಕೊಂಡಿದ್ದರು ಎಂದು ಖುಷಿ ಪಡುವಷ್ಟರಲ್ಲಿ ಮತ್ತೆ ಸುಮಲತಾ ಮುನ್ನಡೆ ಸಾಧಿಸಿದರು. 130 ಮತಗಳ ಮುನ್ನಡೆ ಸಾಧಿಸಿ ಮತ್ತೆ ಸಿಎಂ ಪುತ್ರನಿಗೆ ಪೈಪೋಟಿ ನೀಡಿದರು. ಹೀಗೆ ಬೆಳಿಗ್ಗೆ 10.50ರ ವರೆಗೂ ಹಿನ್ನಡೆ-ಮುನ್ನಡೆ ಎಂದೇ ಹಾವು ಏಣಿ ಆಟ ನಡೆಯುತ್ತಿದೆ. ಸದ್ಯಕ್ಕೆ ಸುಮಲತಾ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.