ಸಂಬಂಧ

ನಾಗಿಣಿ ಡ್ಯಾನ್ಸ್ ಮಾಡಿದ್ರಿಂದ, ಆಗಬೇಕಿದ್ದ ಮದುವೇನೇ ನಿಂತುಹೋಯಿತು!ಶಾಕ್ ಆಗ್ಬೇಡಿ,ಈ ಲೇಖನಿ ಓದಿ..

1468

ಈಗಿನ ಮದುವೆಗಳ ಟ್ರೆಂಡೇ ಬದಲಾಗಿದೆ.ಮದುವೆ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ,ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ.ಆದ್ರೆ ಇಲ್ಲೊಂದು ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದರಿಂದ, ವಧು  ಮದುವೆಯನ್ನೇ ತಿರಸ್ಕರಿಸಿದ ಘಟನೆ ನಡೆದಿದೆ.

ಹೌದು.ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದ ಒಂದು ಮದುವೆಯಲ್ಲಿ, ವರ ನಾಗಿಣಿ ಡ್ಯಾನ್ಸ್ ಮಾಡಿದ್ದರಿಂದ ವಧು ಮದುವೆಯನ್ನೇ ತಿರಸ್ಕರಿಸಿದ್ದಾಳೆ.

ಉತ್ತರಪ್ರದೇಶದ ಶಹಜಹಾನ್‍ಪುರದ ಪ್ರಿಯಾಂಕಾ ತ್ರಿಪಾಠಿ ಮತ್ತು ಅನುಭವ್ ಮಿಶ್ರಾ ಅವರ ಮದುವೆಯನ್ನು ಕುಟುಂಬಸ್ಥರು ನಿಗದಿ ಮಾಡಿದ್ದರು. ಎಲ್ಲಾ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನು ಕುಡಿದ ಸ್ಥಿತಿಯಲ್ಲಿ, ನಾಗಿಣಿ ಡ್ಯಾನ್ಸ್ ಮಾಡಿ ದೊಡ್ಡ ಯಡವಟ್ಟು ಮಾಡಿಕೊಂಡಿದ್ದಾನೆ.

ವರ ಅನುಭವ್ ಮಿಶ್ರಾ ಮಾಡಿದ ನಾಗಿಣಿ ಡ್ಯಾನ್ಸ್ ನಿಂದ ಮುಜುಗರವಾದ ಕಾರಣ, ಇನ್ನೇನು ಮದುವೆಯ ಶಾಸ್ತ್ರಗಳು ಆರಂಭವಾಗಬೇಕಿದ್ದ ಕೆಲವೇ ಸಮಯದ ಮುಂಚೆ ವಧು ಮದುವೆ ನಿರಾಕರಿಸಿದ್ದಾಳೆ.

ವರನ ಸಂಬಂಧಿಕರು ಹಾಗೂ ಸ್ನೇಹಿತರು ವಧು ಪ್ರಿಯಾಂಕಾಳ ಮನವೊಲಿಸಲು ಪ್ರಯತ್ನಿಸಿದರಾದ್ರೂ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ವಧುವಿನ ತಂದೆಯೂ ಕೂಡ ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರ ಮಾಡಿದ ಕೆಲಸದಿಂದ ನಿಜಕ್ಕೂ ಮುಜುಗರ ಅನುಭವಿಸಬೇಕಾಯ್ತು. ಆದ್ದರಿಂದ ನಾನು ನನ್ನ ಮಗಳ ಪರ ನಿಲ್ಲಬೇಕಾಯ್ತು ಎಂದು ಅವರು ಹೇಳಿದ್ದಾರೆ.

 

ಕೊನೆಗೆ ಪ್ರಿಯಾಂಕಾ ಮರುದಿನವೇ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ದೊಡ್ಮನೆ ಅಮ್ಮ “ಪಾರ್ವತಮ್ಮ ರಾಜ್ ಕುಮಾರ್” ವಿಧಿವಶ

    ವರನಟ ಡಾ. ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ (77)ಅವರು ಬುಧವಾರ ಬೆಳಗ್ಗೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

  • ಸುದ್ದಿ

    ಹಳ್ಳಿ ಹುಡುಗನ ಮೇಲೆ ವಿದೇಶಿ ಹುಡುಗಿಯ ಪ್ರಪೋಸ್. ಪ್ರೇಮ ಕುರುಡೋ? ಪ್ರೇಮಿ ಕುರುಡೋ? ದೇವರೇ ಬಲ್ಲ..

    ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳೆದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ.. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ…

  • ಸುದ್ದಿ

    ಕೇವಲ 13 ವಯಸ್ಸಿನಲ್ಲೆ 135 ಪುಸ್ತಕ ಬರೆದು 4 ವಿಶ್ವದಾಖಲೆ ನಿರ್ಮಿಸಿದ ಪೋರ…..!

    ಉತ್ತರ ಪ್ರದೇಶದ 13 ವರ್ಷದ ಬಾಲಕನೊಬ್ಬ ಧರ್ಮ ಹಾಗೂ ಗಣ್ಯರ ಜೀವನಚರಿತ್ರೆ ಕುರಿತು ಸುಮಾರು 135 ಪುಸ್ತಕಗಳನ್ನು ಬರೆದು, 4 ವಿಶ್ವದಾಖಲೆಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲೇ ಅದ್ವಿತೀಯ ಸಾಧನೆಗೈದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಈ ಅಪರೂಪದ ಸಾಧನೆಗೈದ ಬಾಲಕನ ಹೆಸರು ಮೃಗೇಂದ್ರ ರಾಜ್. ಈತ ತನ್ನ 6ನೇ ವಯಸ್ಸಿನಲ್ಲೇ ಪುಸ್ತಕ ಬರೆಯುವ ಹವ್ಯಾಸ ಆರಂಭಿಸಿದ್ದ ಈತ ಮೊದಲು ಕವನ ಸಂಕಲನವನ್ನು ಬರೆದಿದ್ದನು. ಆ ನಂತರ ಕಾಲ ಕಳೆಯುತ್ತಿದ್ದಂತೆ ಬಾಲಕನ ಜೊತೆ ಆತನ ಪುಸ್ತಕ ಬರೆಯುವ ಆಸಕ್ತಿ ಕೂಡ…

  • ಸುದ್ದಿ

    11 ಕಿಮೀ‌ ಪ್ರಯಾಣ ಮಾಡಿ, ಹೆಲ್ಮೆಟ್ ತೆಗೆದು ನೋಡಿ ಶಾಕ್ ಆದ ಶಿಕ್ಷಕ. ಹೆಲ್ಮೆಟ್ ನಲ್ಲಿ ಏನಿತ್ತು.

    ನಮ್ಮ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಬಳಸೋದು ಕಾಮನ್.. ಆದರೆ ಇಲ್ಲೊಬ್ಬ ಶಿಕ್ಷಕ ಹೆಲ್ಮೆಟ್ ನಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ.. ಹೌದು ಕೇರಳದ ಶಿಕ್ಷಕರೊಬ್ಬರು 11 ಕಿಮೀ ಹೆಲ್ಮೆಟ್ ಧರಿಸಿಕೊಂಡು ಪ್ರಯಾಣ ಮಾಡಿ ಆನಂತರ ಅದನ್ನು ತೆರೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ಸೇರಿದ್ದಾರೆ.. ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಎಂಬುವವರು ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯಿಂದ 5 ಕಿಮೀ ದೂರದಲ್ಲಿನ ಶಾಲೆಯೊಂದಕ್ಕೆ ಪಾಠ ಮಾಡಲು ತೆರಳಿದ್ದಾರೆ.. ಅಲ್ಲಿ ಪಾಠ ಮುಗಿಸಿ ನಂತರ ಮತ್ತೊಂದು ಶಾಲೆಗೆ 11.30 ಕ್ಕೆ ಪಾಠ…

  • ಸುದ್ದಿ

    ತೂಕ ಇಳಿಸಿಕೊಳ್ಳಬೇಕೇ ಹಾಗಾದ್ರೆ ದೋಸೆ ತಿನ್ನಿ ಸ್ಲಿಮ್ ಆಗಿರಿ…!

    ದೇಹದ ಫಿಟ್ ನೆಸ್ ಕಾಪಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಈ ವೇಗದ ಜಗತ್ತಿನಲ್ಲಿ ದೇಹದ ಸದೃಢತೆ ಕಾಪಾಡಲು ಗಂಟೆಗಳ ಕಾಲ ವ್ಯಾಯಾಮ ಮಾಡುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಹಾಗೂ ವ್ಯಾಯಾಮ ಮಾಡಿ ದೇಹ ಕರಗಿಸುವ ಪ್ರಯತ್ನ ಮಾಡಿದರೂ ವ್ಯಾಯಾಮದ ನಂತರ ಅಗತ್ಯ ಪ್ರಮಾಣದ ಪೋಷಕಾಂಶಗಳ ಆಹಾರಗಳನ್ನೇ ಸೇವಿಸುವುದು, ಇದನ್ನೇ ನಿತ್ಯ ಪಾಲಿಸುವುದು ಇನ್ನಷ್ಟು ತ್ರಾಸದಾಯಕ. ಅದರಲ್ಲೂ ಬಾಯಿಯ ರುಚಿ ಕಟ್ಟಿಹಾಕಿ ಡಯಟ್ ಮಾಡುವ ನಮ್ಮ ಯೋಜನೆ ರುಚಿಕರ ಆಹಾರ ನೋಡುತ್ತಿದ್ದಂತೆ ಮುರಿದಿರುತ್ತದೆ. ಆದರೆ ನಾವು…

  • ದಿನಕ್ಕೊಂದು ನೀತಿ ಕಥೆ

    ಭೂಮಿ ತಲೆಕೆಳಗಾದರೆ …? ಓದಿ ದಿನಕ್ಕೊಂದು ನೀತಿ ಕಥೆ….

    ಹಿಂದೆ ಬ್ರಹ್ಮದತ್ತ ಕಾಶಿಯಲ್ಲಿ ಆಳುತಿದ್ದಾಗ ಬೋದಿಸತ್ವ ಒಂದು ಸಿಂಹದ ಹೊಟ್ಟೆಯಲ್ಲಿ ಹುಟ್ಟಿ ಕಾಡಿನಲ್ಲಿದ್ದ. ಆ ಕಾಡಿನ ಅಂಚಿನ ಸಮುದ್ರತೀರದಲ್ಲಿ ಒಂದು ಬೇಲದ ಮತ್ತು ತಾಳೆಯ ಮರಗಳ ತೋಪಿತ್ತು. ಒಂದು ತಾಳೆಯ ಮರ ಮತ್ತು ಬೇಲದಮರದ ಅಕ್ಕಪಕ್ಕದಲ್ಲಿ ಕಡೆ ಮೊಲವೊಂದು ವಾಸಮಾಡುತ್ತಿತ್ತು.