ಸುದ್ದಿ

ನಮ್ಮ ಮನೆಗಳು ಬಾಂಬ್ ದಾಳಿಯಿಂದ ಚಿಂದಿಯಾಗಿವೆ, ಆಟವಿಲ್ಲ, ಊಟವಿಲ್ಲ, ಪಾಠವಿಲ್ಲ. ಕೊನೆಗೂ ನಿದ್ರೆಯೂ ಇಲ್ಲ, ಎಲ್ಲವನ್ನೂ ಕಂಡು ಕಾಣದಂತಿರುವ ದೇಶಗಳೇ ಎಚ್ಚೆತ್ತುಕೊಳ್ಳಿ..ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

By admin

March 15, 2018

ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್‌ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ.

 

ಏಕೆ ಈ ಯುದ್ದ..?

ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು ಸಹಿಸದ ಬಹುಸಂಖ್ಯಾತ ಸುನ್ನಿ ಸಮುದಾಯಗಳು, ಸರ್ಕಾರದ ವಿರುದ್ಧವೇ ಸಮರ ಸಾರಿವೆ..

ಮಕ್ಕಳು ಮತ್ತು ಅಮಾಯಕ ಪ್ರಜೆಗಳ ಸಾವಿನ ಸಂಖ್ಯೆ…

ನೆರೆ ದೇಶಗಳ ಬೆಂಬಲದಿಂದಾಗಿ ಎರಡೂ ಬಣಗಳ ನಡುವೆ ರಕ್ತದ ಒಕಳಿಯೇ ಹರಿಯುತ್ತದೆ.ಅಕ್ಷರಶಃ ಸಿರಿಯಾ ರಕ್ತಪಾತ ದೇಶವಾಗಿದೆ. 22 ತಿಂಗಳಲ್ಲಿ ಸರಕಾರಿ ಪಡೆಗಳು ಮತ್ತು ಬಂಡುಕೋರರ ಸೆಣಸಾಟಕ್ಕೆ ಅಮಾಯಕ ಪ್ರಜೆಗಳು ಮತ್ತು ಮಕ್ಕಳ ಸಾವಿನ ಸಂಖ್ಯೆ 60 ಸಾವಿರ  ದಾಟಿದ್ದು ಸುಮಾರು 4 ಲಕ್ಷಕ್ಕಿಂತ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ.

ಪ್ರಾಣದ ಭಯದಿಂದಾಗಿ ಸಾವಿರಾರು ಮಂದಿ ದೇಶ ಬಿಟ್ಟು ಗಡಿ ಭಾಗದ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.ಸುಮಾರು ಎರಡುವರೆ ಲಕ್ಷಕ್ಕಿಂತ ಹೆಚ್ಚು ಜನ ದೇಶ ಬಿಟ್ಟು ಈಗಾಗಲೇ ಪಕ್ಕದ ದೇಶಗಳಾದ ಟರ್ಕಿ, ಲೆಬೆನಾನ್, ಜೋರ್ಡಾನ್, ಇರಾನ್‌ದೇಶಗಳಿಗೆ ನುಗ್ಗಿದ್ದಾರೆ.

ಸಾತ್ ಕೊಡ್ತಿರೋ ದೇಶಗಳು..

ಅಧ್ಯಕ್ಷ ಬಷರ್ ಅಲ್

ಸಿರಿಯಾ ಬಂಡುಕೋರರು

ಸಿರಿಯಾದ ಅಧ್ಯಕ್ಷ ‘ಬಷರ್ ಅಲ್ ಅಸ್ಸಾದ್’ ಹಾಗೂ ಇವರ ಆಡಳಿತವನ್ನು ವಿರೋಧಿಸುವ ಕ್ರಾಂತಿಕಾರಿ ಸಂಘಟನೆಗಳ ನಡುವೆ ಭೀಕರ ಕದನ ನಡೆಯುತ್ತಿದೆ. ಇವರಿಬ್ಬರ ಹೊಡೆದಾಟಕ್ಕೆ ಅಮಾಯಕ ಪ್ರಜೆಗಳು ಬಲಿಯಾಗುತ್ತಿದ್ದಾರೆ. ಹೀಗೆ ಪ್ರಾಬಲ್ಯ ದೇಶಗಳ ಬೆಂಬಲದಿಂದಾಗಿ ಸಿರಿಯಾ ದೇಶವು ರಕ್ತಸಿಕ್ತಗೊಂಡಿದ್ದು ಬಾಂಬ್, ರಾಕೆಟ್ ದಾಳಿಯಿಂದ ದೊಡ್ಡ ದೊಡ್ಡ ನಗರಗಳು ಭೂಕಂಪ ಪೀಡಿತ ಪ್ರದೇಶಗಳಂತೆ ಕಾಣುತ್ತಿವೆ.

ಇದೆರೆಲ್ಲದರ ಪರಿಣಾಮ ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರಾಣ ತೆತ್ತಿದ್ದಾರೆ.ಸಿರಿಯಾದಲ್ಲಿನ ಮಕ್ಕಳ ಕಣ್ಣೀರು ಆಕ್ರಂದನ ಕೆಳುವವರಿಲ್ಲವಂತಾಗಿದೆ. ದಾಳಿಯಲ್ಲಿ ಗಾಯಗೊಂಡ ಪುಟ್ಟ ಪುಟ್ಟ ಕಂದಮ್ಮಗಳ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ಸುದ್ದಿ ಮಾಡಿದೆ.

ವಿಶ್ವ ಸಂಸ್ಥೆ ಮಾತಿಗೆ ಜಗ್ಗದ ಸಿರಿಯಾ ಸರ್ಕಾರ ಮತ್ತು ಬಂಡುಕೋರರು

ಕದನ ವಿರಾಮ ಘೋಷಿಸಿ, ಅಧಿಕಾರವನ್ನು ಬಿಟ್ಟುಕೊಟ್ಟು, ದೇಶದಲ್ಲಿ ಶಾಂತಿ ನೆಲೆಸಲು ಸಹಕರಿಸಿ ಎಂಬ ವಿಶ್ವ ಸಂಸ್ಥೆಯ ಕೋರಿಕೆಗೆ ಅಧ್ಯಕ್ಷ ‘ಬಷರ್ ಅಲ್ ಅಸ್ಸಾದ್’ ಒಪ್ಪಿಗೆ ಸೂಚಿಸಿಲ್ಲ.ತಮ್ಮ ಅಧಿಕಾರಕ್ಕಾಗಿ ಸಾವಿರಾರು ಜನರ ಮಾರಣ ಹೋಮ ನಡೆಯುತ್ತಿದ್ದರೂ ಈ ಅಧ್ಯಕ್ಷ ತಮ್ಮ ಅಧಿಕಾರದಿಂದ ಕೆಳಗಿಳಿಯಲು ಒಪ್ಪುತ್ತಿಲ್ಲ.

ಅತ್ತ ಕಡೆ ಸಿರಿಯಾ ಬಂಡುಕೋರರು ‘ಬಷರ್ ಅಲ್ ಅಸ್ಸಾದ್ ಅಧಿಕಾರದಿಂದ ಕೆಳಗಿಳಿಯುವವರೆಗೂ ಯುದ್ದ ನಿಲ್ಲಿಸುವ ಮಾತೇ ಇಲ್ಲ ಎಂದು ವಿಶ್ವಸಂಸ್ತೆಯ ಕೋರಿಕೆಯನ್ನು ತಿರಸ್ಕರಿಸಿದ್ದಾರೆ.ಇದೆರೆಲ್ಲದರ ನಡುವೆ ಅಲ್ಲಿನ ರಕ್ತಪಾತದಿಂದಾಗಿ ನರುಳುತ್ತಿರುವವರು ಸಿರಿಯಾದ ಜನ ಮತ್ತು ಸಿರಿಯಾ ದೇಶದ ಮುಂದಿನ ಪ್ರಜೆಗಲಾಗಬೇಕಾಗಿರುವ ಮುಗ್ದ ಕಂದಮ್ಮಗಳು ಮಾತ್ರ.

ಜಗತ್ತಿಗೆ ಕಾಣುತ್ತಿಲ್ಲವೇ  ಮುಗ್ದ ಕಂದಮ್ಮಗಳ ಮಾರಣಹೋಮ…

ನಮ್ಮ ಮನೆಗಳು ಬಾಂಬ್ ದಾಳಿಯಿಂದ ಚಿಂದಿಯಾಗಿವೆ, ಆಟವಿಲ್ಲ, ಊಟವಿಲ್ಲ, ಪಾಠವಿಲ್ಲ. ಕೊನೆಗೂ ನಿದ್ರೆಯೂ ಇಲ್ಲ, ಎಲ್ಲವನ್ನೂ ಕಂಡು ಕಾಣದಂತಿರುವ ದೇಶಗಳೇ ಎಚ್ಚೆತ್ತುಕೊಳ್ಳಿ ಇದು ಸಿರಿಯಾದ ಹುಡುಗನೊಬ್ಬ  ಫೇಸ್‌ಬುಕ್‌ನಲ್ಲಿ ಇಡೀ ಪ್ರಪಂಚಕ್ಕೆ ಕೂಗಿ ಹೇಳಿರುವ ನುಡಿ.

ಮುಗ್ದ ಕಂದಮ್ಮಗಳ ಮಾರಣ ಹೋಮವನ್ನು ಜಗತ್ತಿನ ದೇಶಗಳು ನೋಡಿಯೂ ನೋಡದಂತೆ ಇವೆ.ಅಲ್ಲಿನ ಮುಗ್ದ ರಕ್ತಸಿಕ್ತ ಮಕ್ಕಳ ಚಿತ್ರಗಳನ್ನು ನೋಡಿದ್ರೆ ಕಲ್ಲು ಹೃದಯ ಇದ್ರೂ ಸಹ ಕಣ್ಣೀರು ಬರಿಸುವಂತಿದೆ.ಅಮೇರಿಕಾ ರಷ್ಯಾ ಸೇರಿದಂತೆ ಕೆಲವು ದೇಶಗಳು, ಏಕೆ ಹೀಗೆ ಮಕ್ಕಳ ಮತ್ತು ಅಲ್ಲಿನ ಜನರ ಜೀವನದಲ್ಲಿ ಆಟವಾಡುತ್ತಿವೆ ಗೊತ್ತಿಲ್ಲ.ಒಂದಂತೂ ಸತ್ಯ ಅಧಿಕಾರದ ಮೋಹದಿಂದ ಜಗತ್ತಿನ ಜನ ಏನೆಲ್ಲಾ ಮಾಡ್ತಾರೆ ಎನ್ನುವುದಕ್ಕೆ ಇದೊಂದು ಕಣ್ಣಿಗೆ ಕಾಣುವ ನಿದರ್ಶನ.

ಸಿರಿಯಾದ ಮತ್ತಷ್ಟು ಭಯಾನಕ ಚಿತ್ರಗಳು…