ವಿಸ್ಮಯ ಜಗತ್ತು

ನಂಬಿದ್ರೆ ನಂಬಿ,ಈ ಹಳ್ಳಿಯಲ್ಲಿ ರಾವಣನಿಗೆ ಪೂಜೆ ಮಾಡ್ತಾರೆ!ಶಾಕ್ ಆಗ್ಬೇಡಿ…ಈ ಲೇಖನ ಓದಿ ಶೇರ್ ಮಾಡಿ..

877

ರಾಮಾಯಣ ಗೊತ್ತಿದ್ದ ಮೇಲೆ ರಾವಣ ಗೊತ್ತಿರುತ್ತಾನೆ.ರಾವಣ ರಾಕ್ಷಸನಾದರೂ ಮಹಾನ್ ಶಿವ ಭಕ್ತ, ಮತ್ತು ಮಹಾನ್ ವಿಧ್ವಾಂಸ ಕೂಡ.ಏನೇ  ಆದ್ರೂ ರಾವಣ ರಾಕ್ಷಸನಾಗಿದ್ದರಿಂದ ರಾವಣನನ್ನು ಎಲ್ಲೂ ಪೂಜಿಸವುದಿಲ್ಲ.ಆದ್ರೆ ನೀವೂ ನಂಬಿದ್ರೆ ನಂಬಿ, ಇಲ್ಲಂದ್ರೆ ಬಿಡಿ ಈ ಹಳ್ಳಿಯಲ್ಲಿ ರಾವಣನನ್ನು ಸಹ ಪೂಜಿಸುತ್ತಾರೆ. ಆ ಹಳ್ಳಿ ಯಾವುದು ಗೊತ್ತಾ? ಮುಂದೆ ಓದಿ…

ಈ ಹಳ್ಳಿ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಚಿಖಾಲಿ. ಈ ಚಿಖಾಲಿ ಹಳ್ಳಿಯಲ್ಲಿ ಈ ವಿಚಿತ್ರ ಆಚರಣೆಯ ಮಾಡುತ್ತಾರೆ. ಇಲ್ಲಿನ ಜನರ ನಂಬಿಕೆಯಂತೆ ರಾವಣನಿಗೆ ಅವಮಾನ ಮಾಡುವುದೆಂದರೆ ಅದು ಇಡೀ ಹಳ್ಳಿಗೇ ಅಶುಭ ಶಕುನವಂತೆ.

ಚೈತ್ರ ನವರಾತ್ರಿಯ ಸಂಪ್ರದಾಯದ ಪ್ರಕಾರ, 10ನೇ ದಿನವಾದ ದಶಮಿಯಂದು ಹಳ್ಳಿಗರು ಇಲ್ಲಿ ಪೂಜಿಸುವುದು ರಾವಣನನ್ನು. ಇದೇ ಅವಧಿಯಲ್ಲಿ ರಾವಣನ ಗೌರವಾರ್ಥ ಜಾತ್ರೆಯೊಂದೂ ನಡೆಯುತ್ತದೆ. ಆ ದಿನ ಜನರು ರಾಮ-ರಾವಣ ಯುದ್ಧದ ಪ್ರಹಸನವನ್ನೂ ಮಾಡುತ್ತಾರೆ. ಈ ಸಂದರ್ಭ ಭಾರೀ ಸಂಖ್ಯೆಯಲ್ಲಿ ಜನರು ನೆರೆಯುತ್ತಾರೆ ಇಲ್ಲಿ.

ಇಲ್ಲಿರುವ ಮಂದಿರದ ಅರ್ಚಕ ಬಾಬು ಭಾಯಿ ರಾವಣ್. ಯಾವಾಗ ಅವರು ಈ ದೇವಸ್ಥಾನದ ಪೂಜೆಗೆ ಶುರುವಿಟ್ಟುಕೊಂಡರೋ ಅಂದಿನಿಂದ ಅವರ ಹೆಸರಿನೊಂದಿಗೆ ‘ರಾವಣ’ ಎಂಬ ಅಡ್ಡನಾಮವೂ ಸೇರಿಕೊಂಡು ಜನಜನಿತವಾಯಿತು.ಇಲ್ಲಿ ಓದಿ:-24 ಗಂಟೆಯಲ್ಲಿ 36 ಮೊಟ್ಟೆ ಇಟ್ಟ ಕೋಳಿ!!!

ಹಳ್ಳಿಗೆ ಯಾವುದೇ ಸಮಸ್ಯೆ ಎದುರಾದಾಗ, ಜನರು ಆತನ ಬಳಿ ಬರುತ್ತಾರೆ. ಅವರು ಬೇಡಿಕೆ ಈಡೇರುವವರೆಗೂ ರಾವಣನ ವಿಗ್ರಹದೆದುರು ಉಪವಾಸ ವ್ರತ ಮಾಡುತ್ತಾರೆ. ಈ ಗ್ರಾಮ ಮತ್ತು ಸಮೀಪದ ಹಳ್ಳಿಗಳು ನೀರಿನ ತೀವ್ರ ಕ್ಷಾಮ ಎದುರಿಸಿದ ಸಂದರ್ಭವೊಂದರಲ್ಲಿ, ಅವರು ರಾವಣ ವಿಗ್ರಹದೆದುರು ಕುಳಿತ ಅವರು ತಮ್ಮ ಪ್ರಾರ್ಥನೆ ಪ್ರಾರಂಭಿಸಿದರು. ಪವಾಡಸದೃಶವೋ ಎಂಬಂತೆ ಮೂರೇ ದಿನಗಳಲ್ಲಿ ಆ ಪ್ರದೇಶದಲ್ಲಿ ಭರ್ಜರಿ ಮಳೆ ಸುರಿಯಿತು.

ಈ ಪ್ರದೇಶದಲ್ಲಿ ರಾವಣನನ್ನು ಮಾತ್ರ ಪೂಜಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಸಂಪ್ರದಾಯ ಚಾಲ್ತಿಯಲ್ಲಿದೆ ಎನ್ನುತ್ತಾರೆ ಕೈಲಾಸ ನಾರಾಯಣ ವ್ಯಾಸ. ಅದೊಮ್ಮೆ ಅದ್ಯಾವುದೋ ಕಾರಣಕ್ಕೆ ಚೈತ್ರ ದಶಮಿಯಂದು ರಾವಣನ ಉತ್ಸವವನ್ನು ನಡೆಸಲಾಗಲಿಲ್ಲ. ಆ ಸಂದರ್ಭದಲ್ಲಿ ಇಡೀ ಹಳ್ಳಿಗೇ ಬೆಂಕಿ ಬಿದ್ದು, ಆ ಗ್ರಾಮದ ಒಂದು ಭಾಗವನ್ನಷ್ಟೇ ಉಳಿಸಿಕೊಳ್ಳಲು ಗ್ರಾಮಸ್ಥರಿಗೆ ಸಾಧ್ಯವಾಯಿತಂತೆ.

ಸ್ಥಳೀಯರಾದ ಪದ್ಮಾ ಜೈನ್ ಕೂಡಾ ಈ ನಂಬಿಕೆಯನ್ನು ಬೆಂಬಲಿಸುತ್ತಾರೆ. ನವರಾತ್ರಿ ಕಳೆದ ದಶಮಿ ದಿನದಂದು ರಾವಣನನ್ನು ಪೂಜಿಸದೇ ಇದ್ದ ಕಾರಣ ಹಳ್ಳಿಗೆ ಒಂದಲ್ಲ, ಎರಡು ಬಾರಿ ಬೆಂಕಿ ಹತ್ತಿಕೊಂಡಿತಂತೆ. ಹಳ್ಳಿಗೆ ಬೆಂಕಿ ಹತ್ತಿಕೊಂಡಿದ್ದನ್ನು ವೀಡಿಯೋದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಲಾಗಿತ್ತಾದರೂ, ಭಾರೀ ಬಿರುಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲವಂತೆ.

ಭಾರತದಲ್ಲಿ ಮತ್ತು ನೆರೆಯ ಶ್ರೀಲಂಕಾದಲ್ಲಿ ರಾವಣನನ್ನು ಪೂಜಿಸುವುದು ಹೊಸತೇನಲ್ಲ. ರಾವಣೇಶ್ವರನಿಗೆ ಸಾಕಷ್ಟು ಮಂದಿರಗಳೂ ಇವೆ. ಆದರೆ ರಾವಣನ ಪೂಜೆ ಮಾಡದಿರುವುದಕ್ಕಾಗಿ ಇಡೀ ಹಳ್ಳಿಗೆ ಹಳ್ಳಿಗೇ ಭಸ್ಮವಾಗುವುದು ಮಾತ್ರ ತೀರಾ ಅಪರೂಪ ಮತ್ತು ಚರ್ಚೆ ಮಾಡಬೇಕಾದ ಸಂಗತಿ.

ಇದರ ಬಗ್ಗೆ ನಿಮ್ಮ ಅಭಿಪ್ರಾಯ ಬರೆದು ತಿಳಿಸಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಅಮೇರಿಕಾವನ್ನು ಧ್ವಂಸ ಮಾಡುವುದಾಗಿ, ಬಹಿರಂಗವಾಗಿ ಸವಾಲು ಹಾಕಿದ ಈ ಸರ್ವಾಧಿಕಾರಿ!

    ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ ICBM (ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು, ಇದೆ ಸಮಯದಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಸದ್ಯ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  • ಜ್ಯೋತಿಷ್ಯ

    ನಿತ್ಯ ಭವಿಷ್ಯ ಸೋಮವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 7 ಜನವರಿ, 2019 ಸಂಗಾತಿ ಧೂಮಪಾನ ಬಿಡುವಂತೆ ನಿಮ್ಮನ್ನು ಉತ್ತೇಜಿಸುತ್ತಾರೆ. ಇತರ ಕೆಟ್ಟಪರಿಣಾಮಗಳನ್ನು ತೊಡೆದುಹಾಕಲೂ ಇದು…

  • ಸುದ್ದಿ

    ಮನೆಯಲ್ಲಿ ಶನಿದೇವನ ಸ್ಥಾಪನೆ ಯಾವ ಕಾರಣಕ್ಕೆ ಮಾಡಬಾರದು ಗೊತ್ತ..!

    ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಿಯಮಿತ ಪೂಜೆಗೆ ವಿಶೇಷ ಮಹತ್ವವಿದೆ. ದೇವರನ್ನು ಆರಾಧಿಸುವ ಮೂಲಕ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಉದ್ಭವಿಸುತ್ತವೆ. ಹಾಗಾಗಿ ಜನರು ಬೆಳಿಗ್ಗೆ ಮತ್ತು ಸಂಜೆ ದೇವರ ಪೂಜೆ, ಮಂತ್ರ ಪಠಣ ಮಾಡುತ್ತಾರೆ. ಪ್ರತಿಯೊಬ್ಬರ ದೇವರ ಮನೆಯಲ್ಲೂ ಅನೇಕ ದೇವರುಗಳ ಫೋಟೋಗಳನ್ನು ಇಡಲಾಗುತ್ತದೆ. ಆದ್ರೆ ಕೆಲ ದೇವರ ಫೋಟೋಗಳನ್ನು ಮನೆಯಲ್ಲಿ ಇಡುವಂತಿಲ್ಲ. ಶನಿ ದೇವರ ಫೋಟೋವನ್ನು ಕೂಡ ಮನೆಗೆ ತರಬಾರದು. ಹಿಂದೂ ಧರ್ಮದ ಪ್ರಕಾರ ಶನಿದೇವರ ಫೋಟೋ, ವಿಗ್ರಹವನ್ನು ಮನೆಯಲ್ಲಿ ಇಡಬಾರದು….

  • ಸುದ್ದಿ

    ತನ್ನ 73 ಕೋಟಿ ರೂಪಾಯಿ ಆಸ್ತಿಯನ್ನ ಕೆಜಿಎಫ್ ನಟನ ಹೆಸರಿಗೆ ಬರೆದು ಜೀವ ಕಳೆದುಕೊಂಡ ಅಭಿಮಾನಿ, ಕಾರಣ ಮಾತ್ರ ಶಾಕಿಂಗ್.!

    ಮುಂಬೈ ಆ ಮಲಬಾರ್ ಹಿಲ್ ನಲ್ಲಿ ವಾಸವಿರುವ ನಿಷಿಯ ಹರಿಶ್ಚಂತ್ರ ತ್ರಿಪಾಠಿ ತನ್ನ ಮನೆ ಮತ್ತು ಹತ್ತಾರು ಕೋಟಿ ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನ ತನ್ನ ನೆಚ್ಚಿನ ನಟನ ಹೆಸರಿಗೆ ವಿಲ್ ಬರೆದು ಸಾವನ್ನಪ್ಪಿದ್ದಾಳೆ. ಇನ್ನು ನಿಷಿಯ ಸಾವನ್ನಪ್ಪಿದ ಕೆಲವು ಸಮಯದ ನಂತರ ಆಸ್ತಿಯನ್ನ ವರ್ಗಾವಣೆ ಮಾಡಲು ನೋಡಿದ ನಿಷಿಯ ಕುಟುಂಬದವರಿಗೆ ಇದನ್ನ ನೋಡಿ ದೊಡ್ಡ ಶಾಕ್ ಆಗಿತ್ತು. ಇನ್ನು ಈ ಅಭಿಮಾನಿ ತಾನು ಸಾಯುವ ಮುನ್ನ ತನ್ನ ಮನೆ, ಬ್ಯಾಂಕ್ ಅಕೌಂಟ್ ಮತ್ತು ಬರೋದದಲ್ಲಿ ಇರುವ…

  • ಆರೋಗ್ಯ

    ಪಿರಿಯಡ್ಸ್ ಸಮಯದಲ್ಲಿ ಆಗುವ ನೋವುಗಳಿಗೆ ಇಲ್ಲಿದೆ ಪರಿಹಾರ…ತಿಳಿಯಲು ಈ ಲೇಖನ ಓದಿ…

    ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು.

  • ಸುದ್ದಿ

    132 ಕೋಟಿಮೌಲ್ಯ ಬೆಲೆ ಬಾಳುವ ಈ ನಂಬರ್ ಪ್ಲೇಟನ್ನು ಮಾರಟಕ್ಕೆ ಇಟ್ಟಿದ್ದಾರೆ, ಇಷ್ಟಕ್ಕೂ ಇದರ ವಿಶೇಷತೆಯಾದರು ಏನು?

    ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು…