ಸಿನಿಮಾ

ತೆಲುಗಿನ ಅಕ್ಕಿನೇನಿಗೆ ಜೋಡಿಯಾಗಿ ಕಿರಿಕ್ ಬೆಡಗಿ..!ತಿಳಿಯಲು ಈ ಲೇಖನ ಓದಿ..

220

ಅದೃಷ್ಟ ಅನ್ನೋದು ಯಾರಿಗೆ, ಹೇಗೆ, ಎಲ್ಲಿ ಒಲಿಯುತ್ತೆ ಅಂತ ಹೇಳೋದು ಕಷ್ಟ. ಈ ಮಾತು ಸಿನಿ ರಂಗಕ್ಕೂ ಸರಿಯಾಗಿ ಹೊಂದುತ್ತದೆ. ಇಲ್ಲಿ ಯಶಸ್ಸು ಅನ್ನೋದು ಕೆಲವೊಬ್ಬರಿಗೆ ಮಾತ್ರ ಸಿಗುತ್ತದೆ. ಕಲರ್‍ಫುಲ್ ದುನಿಯಾಗೆ ಎಂಟ್ರಿಯಾಗಿ ಅದೆಷ್ಟೊ ವರ್ಷಗಳಾದ ಮೇಲೆ ಅದೃಷ್ಟ ಒಲಿದರೆ, ಇನ್ನು ಕೆಲವರಿಗೆ ರಾತ್ರೋ ರಾತ್ರಿ ಸ್ಟಾರ್ ಕಿರೀಟ ದಕ್ಕುತ್ತದೆ. ಹಾಗೇ ಬೇರೆ ಬೇರೆ ಭಾಷೆಗಳಲ್ಲಿ ಕಮಾಲ್ ಕೂಡ ಮಾಡ್ತಾರೆ.

ಕಿರಿಕ್ ಪಾರ್ಟಿ’ ಭರ್ಜರಿ ಯಶಸ್ಸಿನ ಬಳಿಕ, ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ‘ಚಮಕ್’ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ‘ಅಂಜನಿಪುತ್ರ’ ಚಿತ್ರದಲ್ಲಿ ರಶ್ಮಿಕಾ ಅಭಿನಯಿಸಿದ್ದರು.

‘ಚಲೋ’ ಚಿತ್ರದ ಮೂಲಕ ತೆಲುಗಿನಲ್ಲಿ ಖಾತೆ ಓಪನ್ ಮಾಡಿರುವ ರಶ್ಮಿಕಾ, ತಮ್ಮ ತೆಲುಗಿನ 2 ನೇ ಚಿತ್ರದಲ್ಲಿ ನಾಗಾರ್ಜುನ ಅವರೊಂದಿಗೆ ಅಭಿನಯಿಸಲಿದ್ದಾರೆ.

ನಾಗಾರ್ಜುನ ಹಾಗೂ ‘ಈಗ’ ಖ್ಯಾತಿಯ ನಾನಿ ಅವರೊಂದಿಗೆ ರಶ್ಮಿಕಾ ಮಂದಣ್ಣ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಅದ್ಧೂರಿ ವೆಚ್ಚದಲ್ಲಿ ಬಹುತಾರಾಗಣದಲ್ಲಿ ನಾಗಾರ್ಜುನ ಹೊಸ ಚಿತ್ರ ಮೂಡಿಬರಲಿದ್ದು, ರಶ್ಮಿಕಾ ಅವರು ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಅದೇನೆ ಇದ್ದರೂ, ಈ ಹಿಂದೆ ನಾಗಾರ್ಜುನ ಜೊತೆ ತೆರೆ ಹಂಚಿಕೊಂಡ ಬಹುತೇಕ ನಾಯಕಿಯರು ಯಶಸ್ಸಿನ ಹಾದಿ ಹಿಡಿದಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಕೂಡ ನಾಗಾರ್ಜುನ್ ಜೊತೆ ತೆರೆ ಹಂಚಿಕೊಳುತ್ತಾ ಇರೋದರಿಂದ ಅದೇ ರೀತಿಯ ದೊಡ್ಡ ನಿರೀಕ್ಷೆ ರಶ್ಮಿಕಾ ಅಭಿಮಾನಿಗಳಲ್ಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ‘ಸಿಹಿ ಸುದ್ದಿ’…ಇದನ್ನೊಮ್ಮೆ ಓದಿ…!

    ಬಲು ದುಬಾರಿಯಾಗಿದ್ದ ಅಂಗಾಂಗ ಕಸಿ ಚಿಕಿತ್ಸೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ. ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಅಂಗಾಂಗ ಕಸಿ ಚಿಕಿತ್ಸೆಯ ಸಂಪೂರ್ಣ ವೆಚ್ಚ ಮತ್ತು ಔಷಧ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದವರು ಸುಲಭವಾಗಿ ಹೃದಯ, ಕಿಡ್ನಿ, ಲಿವರ್ ಕಸಿ ಮಾಡಿಸಿಕೊಳ್ಳಬಹುದು. ಈ ಯೋಜನೆ ಅಡಿ ಕಿಡ್ನಿ ಕಸಿಗೆ 3 ಲಕ್ಷ ರೂ., ಹೃದಯ ಕಸಿಗೆ 11 ಲಕ್ಷ ರೂ., ಲಿವರ್ ಕಸಿಗೆ 12 ಲಕ್ಷ ರೂ. ನೆರವು ನೀಡಲಾಗುವುದು. ಕಳೆದ…

  • ಸುದ್ದಿ

    ಗುಂಡೇಟಿಗೆ ಬಲಿಯಾದ ಟಿಕ್ ಟಾಕ್ ಖ್ಯಾತಿಯ ಮೋಹಿತ್…..!

    ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್ ನೆಸ್ ಗೆ ಸಂಬಂಧಿಸಿದಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ…

  • ಸುದ್ದಿ

    62 ಅಡಿ ಉದ್ದದ ಹನುಮನ ವಿಗ್ರಹ ಬಂದದ್ದು ಎಲ್ಲಿಂದ?ಶಿಲೆ ಸಿಕ್ಕಿದ್ದು ಹೇಗೆ?ಕೆತ್ತಿದ್ದು ಯಾರು?ಇಲ್ಲಿದೆ ಸಂಪೂರ್ಣ ಮಾಹಿತಿ ಓದಿ ಶೇರ್ ಮಾಡಿ…

    ಭಾರತದ ಅತೀ ದೊಡ್ಡ ಹನುಮಂತನಿಗೆ ಭರ್ಜರಿ ಸ್ವಾಗತ ಮಾಡಿ, ಬೀಳ್ಕೊಟ್ಟ ಸೂಲಿಬೆಲೆ ಗ್ರಾಮಸ್ತರು. ಹೌದು, ಭಾರತದ ಅತೀ ಎತ್ತರದ, 62 ಅಡೀ ಇರುವ ಹನುಮನ ಏಕಶಿಲಾವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಹನುಮನಿಗೆ ಅಭೂತಪೂರ್ವ ಸ್ವಾಗತ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ. ಮಾರ್ಗ ಮಧ್ಯ ತೊಂದರೆಯಾದರೂ, ಆ…

  • ಕಾನೂನು

    ಪೋಕ್ಸೊ ಕಾಯಿದೆ ಅಡಿ 4 ಆರೋಪಿಗೆ ಜೀವಿತಾವಧಿವರೆಗೂ ಸಜೆ

    ಕೋಲಾರ ಜಿಲ್ಲೆಯ ಕಾಮಸಮುದ್ರಂ ಪೊಲೀಸ್ ಠಾಣೆ, ಬಂಗಾರಪೇಟೆ ತಾಲ್ಲೂಕು, ಕೆ.ಜಿ.ಎಫ್. ಉಪ-ವಿಭಾಗದ ಸರಹದ್ದಿನ ಬಂಗಾರಪೇಟೆ ತಾಲ್ಲೂಕು, ಹೊಸಕೋಟೆ ಗ್ರಾಮದ ವಾಸಿ ಆನಂದ್ ಬಿನ್ ಮುನಿವೆಂಕಟಪ್ಪ ಮತ್ತು ಕೆ.ಜಿ.ಎಫ್. ತಾಲ್ಲೂಕು, ಕ್ಯಾಸಂಬಳ್ಳಿ ಹೋಬಳಿ, ತಿಮ್ಮಾಪುರ ಗ್ರಾಮದ ವಾಸಿ ಕಾಂತ್‌ರಾಜ್ ಬಿನ್ ವೆಂಕಟೇಶಪ್ಪ ಮತ್ತು ಎ.ಕೆ. ಕಾಲೋನಿ, ಕಾಮಸಮದ್ರಂ, ಬಂಗಾರಪೇಟೆ ತಾಲ್ಲೂಕಿನ ವಾಸಿ ಪ್ರವೀಣ್ ಕೆ. ಬಿನ್ ಕೋದಂಡಪ್ಪ, ಮತ್ತು ಬೆಂಗನೂರು ಗ್ರಾಮ, ಬಂಗಾರಪೇಟೆ ತಾಲ್ಲೂಕಿನ ವಾಸಿ ವೇಣು ಬಿನ್ ಗೋವಿಂದಪ್ಪರವರುಗಳು ದಿನಾಂಕ 18-02-2022 ರಂದು ಆಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು…

  • ಜೀವನಶೈಲಿ

    ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಏನ್ ಗೊತ್ತಾ?ಮುಂದೆ ಓದಿ…

    ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ

  • ಉಪಯುಕ್ತ ಮಾಹಿತಿ

    ಪದೇ ಪದೇ ಫೋನ್ ಹ್ಯಾಂಗ್ ಆಗುತ್ತಿದ್ದರೆ ಈ ಒಂದು ಕೆಲಸ ಮಾಡಿ ಸಾಕು.!

    ಹೆಚ್ಚಿನ ಜನರು ಫೋನ್ ಹ್ಯಾಂಗ್‌ಗಳ ಸಮಸ್ಯೆಯಿಂದ ಅಥವಾ ನಿಧಾನವಾಗಿರುವುದರಿಂದ ತೊಂದರೆಗೀಡಾಗುತ್ತಾರೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಸಹ ಈ ರೀತಿಯ ತೊಂದರೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡಲು ಐದು ಕ್ರಮಗಳನ್ನು ಅನುಸರಿಸಿ. ಈ ಕ್ರಮಗಳೊಂದಿಗೆ ನಿಮ್ಮ ಫೋನ್ ಸ್ಥಗಿತಗೊಳ್ಳುವುದನ್ನು ಅಥವಾ ನಿಧಾನಗೊಳಿಸುವುದನ್ನು ಸಹ ನೀವು ನಿಲ್ಲಿಸಬಹುದು. ಕೆಲವೊಮ್ಮೆ ಫೋನ್‌ನ ಮೆಮೊರಿ ತುಂಬಿರುತ್ತದೆ. ಆದ್ದರಿಂದ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಫೋನ್‌ನ ಆಂತರಿಕ ಸ್ಥಳದ ಹೊರತಾಗಿ, ಫೋನ್ ನಿಧಾನವಾಗಲು ಫೋನ್‌ನ RAM ಸಹ ಕಾರಣವಾಗಿದೆ. ನಿಮ್ಮ ಫೋನ್…