ವ್ಯಕ್ತಿ ವಿಶೇಷಣ

ತಮ್ಮ ಜೀವನದಲ್ಲಿ ಜಾಸ್ತಿ ಓದದೇ ಇದ್ರೂ ಯಶಸ್ಸು ಕಂಡ ಭಾರತೀಯರ ಬಗ್ಗೆ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

By admin

December 15, 2017

ಓದು ಜೀವನಕ್ಕೆ ತುಂಬಾನೇ ಮುಖ್ಯ., ವಿದ್ಯೆ ಮುಖ್ಯ ಆದ್ರೆ ವಿನಯ ಅತ್ಯಗತ್ಯ. ವಿನಯಾನ ಯಾವ ಶಾಲೇಲೂ ಹೇಳಿಕೊಡಲ್ಲ. ಯೋಗ ಎಲ್ಲರಿಗೂ ಬರಬಹುದು, ಆದ್ರೆ ಯೋಗ್ಯತೆ ಕೆಲವರಿಗೆ ಮಾತ್ರ ಇರತ್ತೆ.. ” ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಅಂತಾರೆ ದೊಡ್ಡವರು. ಹಾಗೆ ಎಲ್ಲಾ ಜ್ಞಾನಾನೂ ಪುಸ್ತಕದಿಂದಾನೆ ಸಿಗಲ್ಲ, ಅನುಭಾವಾನೂ ಅಷ್ಟೇ ಮುಖ್ಯ.

1. ಅಕ್ಷಯ್ ಕುಮಾರ್:-

ಮಾರ್ಷಲ್ ಆರ್ಟ್ಸ್ ಮುಂದುವರಿಸಬೇಕು ಅಂತ ಕಾಲೇಜನ್ನ ಬಿಟ್ರು. ಇವ್ರೊಂಥರ ಮಲ್ಟಿ ಟ್ಯಾಲೆಂಟೆಡ್. ನಟನೆ ಮಾಡ್ತಾರೆ, ಅಡಿಗೆ ಮಾಡ್ತಾರೆ, ಫೈಟ್ ಮಾಡ್ತಾರೆ.ಸಮಾಜ ಸೇವೇನೂ ಮಾಡ್ತಾರೆ.

ಇವರ ಬಗ್ಗೆ ನಿಮಗೆ ಗೊತ್ತೇ ಇರತ್ತೆ ಬಿಡಿ. ಇವರಿಗೆ  ಯಾವತ್ತೂ ಓದಿನ ಬಗ್ಗೆ ಜಾಸ್ತಿ ಒಲವಿರಲಿಲ್ಲ ಅಂತ ಇವ್ರೇ ಆಗಾಗ ಹೇಳ್ಕೊತಾರೆ.

2. ದೀಪಿಕಾ ಪಡುಕೋಣೆ:-

ಅದ್ಬುತ ನಟಿ, ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆದ್ರೆ ಇವಳು ಓದಿರೋದು ಬರಿ ಪಿಯುಸಿ ತಂಕ ಮಾತ್ರ! ಚಿಕ್ಕ ವಯಸ್ಸಿಂದಾನೇ ದುಡಿಯಕ್ಕೆ ಶುರು ಮಾಡಿದ್ರಿಂದಾ ಕಾಲೇಜಿಗೆ ಹೋಗಕ್ಕಾಗ್ಲಿಲ್ಲ.

ಮೊದಮೊದ್ಲು ಅವರ ಅಪ್ಪಾ ಅಮ್ಮಂಗೆ ಇದರ ಬಗ್ಗೆ ಅಸಮಾಧಾನ ಇದ್ರೂ ಮಗಳಿಗೆ ಈ ಕ್ಷೇತ್ರ ಎಷ್ಟ್ ಇಷ್ಟ ಅಂತ ಗೊತ್ತಾಗಿ ಅವಳ ಈ ಕನಸಿಗೆ ಸಾಥ್ ಕೊಟ್ರಂತೆ.

3. ಅಮಿರ್ ಖಾನ್:-

ಇವರ ನಟನೆ ಬಗ್ಗೆ ನಿಮಗೇ ಗೊತ್ತೆ ಇದೆ. ಇವ್ರು ಕಾಲೇಜಿನ ಮೆಟ್ಟಲನ್ನ ಹತ್ತಲೇ ಇಲ್ಲ. ಬಾಲಿವುಡ್ ಆಳುತ್ತಿರುವ ಖಾನ್ಗಳಲ್ಲಿ ಇವ್ರೂ ಕೂಡ  ಒಬ್ರು.

ತಮಗೆ ಓದಿಗಿಂತಾ ಚಿತ್ರಗಳಲ್ಲೇ ಆಸಕ್ತಿ ಜಾಸ್ತಿ ಅಂತ ಗೊತ್ತಾದ್ಮೇಲೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಕ್ಕೆ ಶುರುಮಾಡಿದ್ರು.  ಈಗ ಸೂಪರ್ ಸ್ಟಾರ್ ಆಗಿದ್ದಾರೆ .

4. ಐಶ್ವರ್ಯ ರೈ:-

ವಿಶ್ವಸುಂದರಿ ಐಶ್ವರ್ಯ ರೈ ಕಾಲೇಜನ್ನ ಅರ್ಧಕ್ಕೆ ಕೈ ಬಿಟ್ಟು ಮಾಡೆಲ್ಲಿಂಗ್ ಮಾಡಿ, ಅದ್ಬುತ ನಟಿಯಾಗಿದ್ದಾರೆ. ಹಲವು ವೇದಿಕೆಗಳಲ್ಲಿ ನಮ್ಮ ದೇಶಾನ ಪ್ರತಿನಿಧಿಸಿದ್ದಾರೆ.

ಈಗ ಅಷ್ಟೊಂದು ನಟಿಸ್ತಿಲ್ಲ… ಆದ್ರೂ ಇವರ ಫ್ಯಾನ್ಗಳಿಗೇನೂ ಕಮ್ಮಿ ಇಲ್ಲ.ಇವರು ಬಿಗ್ ಬೀ ಅಮಿತ ಬಚನ್ ಅವರ ಸೊಸೆ ಸಹ ಆಗಿದ್ದಾರೆ.

5. ಕಪಿಲ್ ದೇವ್:-

ಕಾಲೇಜ್ ಅರ್ಧಕ್ಕೆ ಬಿಟ್ಟ ಪುಂಡ ಅಂತ ಅಂದಿದ್ರಂತೆ ಇವ್ರನ್ನ, 1983 ರಲ್ಲಿ ಇಡೀ ದೇಶಾನೇ ಹೆಮ್ಮೆ ಪಡೋ ಹಾಗೆ ಮಾಡಿದ್ರು.

ಡಿಗ್ರಿ ಇಲ್ದೆ ಇದ್ರೆ ಏನ್ ಸ್ವಾಮೀ? ಸಾಧನೆ ಮಾಡಕ್ಕೆ ಛಲ ಬೇಕು. ಡಿಗ್ರಿ ಇಟ್ಕೊಂಡಿರೋ ಎಷ್ಟ್ ಜನ ಕಪಿಲ್ ದೇವ್ ಆಗಿದ್ದಾರೆ  ಹೇಳಿ? ಭಾರತಕ್ಕೆ ವಿಶ್ವ ಕಪ್ ತಂದು ಕೊಟ್ಟವರು.

6. ಸಚಿನ್ ತೆಂಡೂಲ್ಕರ್:-

ಹತ್ತನೇ ಕ್ಲಾಸ್ ಆದ್ಮೇಲೆ ಓದಲೇ ಇಲ್ಲ ಇವ್ರು. ಕ್ರಿಕೆಟ್..ಕ್ರಿಕೆಟ್..ಕ್ರಿಕೆಟ್! ಯಾವಾಗ್ಲೂ ಕ್ರಿಕೆಟ್ ಜಪ ಮಾಡಿ ಈಗ ಕ್ರಿಕೆಟ್ ದೇವರಾಗಿದ್ದಾರೆ.ಎಲ್ಲರಿಗೂ ಗೊತ್ತೇ ಇದೆ.

7. ಗೌತಮ್ ಅದಾನಿ:-

ಇವ್ರು ಪ್ರತಿಷ್ಟಿತ ಎಂ ಎನ್ ಸಿ ಅದಾನಿ ಗ್ರೂಪಿನ ಮಾಲೀಕರು. ಈ ಕಾಲೇಜು, ಕ್ಲಾಸು, ಡಿಗ್ರಿ, ಕಾಮರ್ಸು ಇವೆಲ್ಲ ಬೇಡಪ್ಪ ಅಂತ ಕೋಟ್ಯಾಂತರ ರುಪಾಯಿ ಬೆಲೆಬಾಳೋ ತನ್ನದೇ ಕಂಪನಿ ಶುರು ಮಾಡಿದ ಮಹಾನ್ ವ್ಯಕ್ತಿ ಇವರು.

8. ಮೇರಿ ಕಾಮ್:-

ಸ್ಕೂಲನ್ನ ಅರ್ಧಕ್ಕೆ ಬಿಟ್ಟು ಬಾಕ್ಸಿಂಗ್ ಮಾಡಕ್ಕೆ ಹೊರಟ ಇವರು 2012 ರಲ್ಲಿ ಒಲಂಪಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದ ನಮ್ಮ ದೇಶದ ಏಕೈಕ ಮಹಿಳೆ.