ಸ್ಪೂರ್ತಿ

ತನ್ನ ಸಾಧನೆಯಿಂದಾಗಿ ಇಡೀ ದೇಶದ ಗಮನ ಸೆಳೆದ ಕೇವಲ ಎರಡೇ ವರ್ಷದ ಮೈಸೂರಿನ ಪುಟ್ಟ ಪೋರಿ..!

By admin

November 14, 2018

ಬುದ್ದಿಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇನ್ನೂ ಕೇವಲ ಎರಡು ವರ್ಷದ ಮಗುವೆ ಸಾಕ್ಷಿ. ಈ ಮಗುವಿನ ಬುದ್ದಿವಂತಿಕೆ ಅವಳ ವಯಸ್ಸಿಗೆ ಮೀರಿದ್ದು.ಕರ್ನಾಟಕದ ಸಾಂಸ್ಕೃತಿಕ ನಗರ ಎಂದೇ ಕರೆಯುವ ಮೈಸೂರಿನ ಪುಟ್ಟಪೋರಿ ಈಡೀ ದೇಹವೇ ಮೆಚ್ಚವಂತ ಸಾಧನೆ ಮಾಡಿದ್ದಾಳೆ.

ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿರುವ ಮೈಸೂರಿನ ಹಳ್ಳದಕೇರಿ ನಿವಾಸಿಯಾಗಿರುವ ಗಣೇಶ್ ಹಾಗೂ ನಯನ ದಂಪತಿಯ ಸುಪುತ್ರಿ ದ್ಯುತಿ ಎರಡೇ ವರ್ಷಕ್ಕೆ ಇಡೀ ಜಗತ್ತನ್ನು ಗೆದ್ದು ಬಿಗಿದ್ದಾಳೆ. ತನ್ನ ಬುದ್ಧಿ ಸಾಮಾರ್ಥ್ಯದಿಂದಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರಿ ಇಡೀ ಭಾರತದ ಗಮನ ಸೆಳೆದಿದ್ದಾಳೆ.

ದ್ಯುತಿ ಮಾಡಿರುವ ಸಾಧನೆ ನೋಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಈ ವರ್ಷದ `ಯೆಂಗೆಸ್ಟ್ ಟ್ಯಾಲೆಂಟೆಡ್ ಗರ್ಲ್’ ವಿಭಾಗದ ಪ್ರಶಸ್ತಿ ನೀಡಿ ಗೌರವಿಸಿದೆ. ದ್ಯುತಿ ಯಾವ ಕಾರು? ಯಾವ ಟ್ರೈ ಆಂಗಲ್? ಯಾವ ಪ್ರಾಣಿ? ಯಾವ ದೇಶ? ಹೀಗೆ ಯಾವುದೇ ಪ್ರಶ್ನೆಗಳಿಗೆ ಥಟ್ ಅಂತ ಉತ್ತರಿಸುತ್ತಾಳೆ. ಎರಡು ವರ್ಷದೊಳಗಿನ ಮಕ್ಕಳ ಬುದ್ಧಿ ಶಕ್ತಿಗಿಂತ ದ್ಯುತಿಯಲ್ಲಿನ ಬುದ್ಧಿ ಶಕ್ತಿ ಹೆಚ್ಚಿದೆ. ದ್ಯುತಿ ಎಲ್ಲ ಪ್ರಾಣಿಗಳ ಹೆಸರು, ವಾಹನಗಳ ಹೆಸರು, ದೇಶದ ಹೆಸರು ಹಾಗೂ ಪದ್ಯಗಳನ್ನು ಸರಾಗವಾಗಿ ಹೇಳುತ್ತಾಳೆ.

ತಮ್ಮ ಮಗಳ ಪ್ರತಿಭೆಯನ್ನು ನೋಡಿದ್ದ ಗಣೇಶ್ ಹಾಗೂ ನಯನ, ತಮ್ಮ ಮಗಳ ಪ್ರತಿಭೆ ಹೊರ ಜಗತ್ತಿಗೂ ತಿಳಿಯಬೇಕೆಂಬ ಬಯಕೆಯಿಂದ ತಮ್ಮ ಮಗಳ ವಿಡಿಯೋಗಳನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್‍ಗೆ ಕಳುಹಿಸಿದ್ದರು.

ಇವರ ಪ್ರಯತ್ನಕ್ಕೆ ಸರಿಯಾದ ಫಲವೇ ದೊರಕಿತು.ವಿಡಿಯೋ ನೋಡಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ತಜ್ಞರಿಂದ ಮಗುವಿನ ಬುದ್ಧಿ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿ ದೃಢಿಕರಿಸಿಕೊಂಡಿತು.

ನಂತರ ಈ ವರ್ಷದ ಬಂದಿದ್ದ ಟ್ಯಾಲೆಂಟೆಡ್ ಮಕ್ಕಳ ಪೈಕಿ ದ್ಯುತಿ ಅತಿ ಹೆಚ್ಚು ಬುದ್ಧಿವಂತೆ ಹಾಗೂ ಯೆಂಗೆಸ್ಟ್ ಟ್ಯಾಲೆಂಟ್ ಗರ್ಲ್ ಎಂದು ನಿರ್ಧಿರಿಸಿ ಮೈಸೂರಿಗೆ ಆಗಮಿಸಿ ಪ್ರಶಸ್ತಿ ನೀಡಿದ್ದಾರೆ.ಇನ್ನೇನು ಬೇಕು ತಂದೆ ತಾಯಿಗಳಿಗೆ. ಈ ಪುಟ್ಟ ಮಗು ತಮ್ಮ ತಂದೆ ತಾಯಿಗಳಿಗೆ ಮಾತ್ರವಲ್ಲದೆ ದೇಶಕ್ಕೂ ಕೂಡ ಹಸರು ತಂದು ಕೊಟ್ಟಿದೆ.