ಸುದ್ದಿ

ಟೀ ಪ್ರಿಯರಿಗೋಂದು ಸಿಹಿ ಸುದ್ದಿ, ಬೆಂಗಳೂರಿಗೆ ಬಂತು ಬಬಲ್ ಟೀ..!

26

ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್‌ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ . ಈ ಟೀ ಮೂಲತಃ ಥೈವಾನ್‌ ಟೀಯಿಂದ ಹುಟ್ಟಿಕೊಂಡಿದ್ದು, ಇದೊಂದು ಆಲ್ಕೋಹಾಲ್ ರಹಿತವಾದ, ಕಾರ್ಬೋನೇಟೆಡ್ ಅಲ್ಲದ ತಣ್ಣನೆಯ ಹಾಲಿನಿಂದ ತಯಾರಿಸಿದ ಟೀ ಇದಾಗಿದೆ. ಟಾಪಿಯೋಕ ಪರ್ಲ್ ಡ್ರಿಂಕ್, ಬಿಗ್ ಪರ್ಲ್, ಬೊಬಾ ನೈ ಚಾಯ್ ಮುಂತಾದ ಹೆಸರುಗಳು ಬಬಲ್ ಟೀಗಿದೆ.

ಇನ್ನೂ ಈ ಟೀನಲ್ಲಿ ವಿಶೆಷವಾಗಿ ಜೆಲ್ಲಿಗಳಂತಿರುವ ‘ಟ್ಯಾಪಿಕೊ ಪರ್ಲ್‌’ ಹಾಕಿರುವುದರಿಂದ ಈ ಜ್ಯೂಸ್‌ಗೆ ‘ಬಬಲ್‌ ಟೀ’ ಎಂಬ ವಿಶೇಷ ಹೆಸರು ಬಂದಿದೆ. ಪೇಯದ ಬುಡದಲ್ಲಿ ಕಾಮಕಸ್ತೂರಿ ಬೀಜದಂತೆ ಕಾಣುತ್ತಿರುತ್ತದೆ. ಅಲ್ಲದೆ ಬಬಲ್ ಟೀ ಫೇಮಸ್ ಆಗುತ್ತಿದ್ದಂತೆಯೇ ಇದರಲ್ಲಿ ಹತ್ತು ಹಲವು ರೀತಿಯ ಫ್ಲೇವರ್‌ಗಳು, ವಿಧಗಳು ಹುಟ್ಟಿಕೊಂಡಿದೆ. 1980ರಲ್ಲಿ ತೈವಾನ್‌ನ ಟೀ ಅಂಗಡಿ ಮಾಲೀಕ ಲಿಯು ಹನ್‌-ಚೀ ಎಂಬಾತ ತನ್ನ ಅಂಗಡಿಯತ್ತಾ ಜನರನ್ನು ಸೆಳೆಯಲು ಏನಾದರೂ ಹೊಸತನ್ನು ಕಂಡು ಹಿಡಿಯಬೇಕೆಂದು ಕೋಲ್ಡ್‌ ಮಿಲ್ಕ್‌ ಟೀಗೆ ಯಮ್‌, ಹಣ್ಣುಗಳು, ಸಿರಪ್‌ಗಳು ಹಾಗೂ ಟ್ಯಾಪಿಕೊ ಬಾಲ್‌ಗಳನ್ನು ಹಾಕಿ ಮೊದಲು ಈ ಪಾನೀಯವನ್ನು ತಯಾರಿಸಿದ.

ತದನಂತರ ಹತ್ತು ವರ್ಷದಲ್ಲಿ ಇದು ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಜನಪ್ರಿಯಗೊಂಡಿತು. ಸದ್ಯ ಥೈವಾನ್‌ನ ಪ್ರತೀ ಟೀ ಅಂಗಡಿಗಳೂ ಇದು ತಮ್ಮ ಹೆಗ್ಗುರುತು ಎಂಬಂತೆ ಬಬಲ್ ಟೀ ತಯಾರಿಸುತ್ತವೆ. ಇದರ ಬೇಡಿಕೆ ಹೆಚ್ಚಾಗುತ್ತಿದಂತೆಯೇ ಮತ್ತಷ್ಟು ಹೊಸ ಹೊಸ ರುಚಿಗಳನ್ನು ಕಂಡು ಹಿಡಿದು ಮಾರಲು ಆರಂಭಿಸಿದರು. ಈಗಾಗಲೇ ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್, ದಕ್ಷಿಣ ಆಫ್ರಿಕಾ ಅಷ್ಟೇ ಏಕೆ, ಬೆಂಗಳೂರಿನ ಮಾಲ್‌ಗಳಲ್ಲಿ ಕೂಡಾ ಈ ಬಬಲ್ ಟೀ ಎಲ್ಲರನ್ನು ಆಕರ್ಷಿಸುತ್ತಾ. ಜನಪ್ರೀತಿ ಗಳಿಸಿದೆ.

ಇನ್ನೂ ಈ ತಂಪಾದ ಪಾನೀಯದ ರುಚಿ ಹಣ್ಣು, ಅದಕ್ಕೆ ಸೇರಿಸುವ ಬೇಸ್‌ ಮತ್ತು ಸಿರಪ್‌ಗಳ ಮೇಲೆ ಆಧರಿಸಿದ್ದು, ಬಳಸುವ ಸಾಮಗ್ರಿಗಳಿಗೆ ಅನುಗುಣವಾಗಿ ಈ ಪೇಯ ಕೆಲವೊಮ್ಮೆ ಸಿಹಿ ಅಥವಾ ಕಹಿಯಾಗಿರಬಹುದು. ಅಧ್ಯಯನಗಳ ಪ್ರಕಾರ, ಒಂದು ಬಾರಿಯ ಸರ್ವಿಂಗ್‌ನ ಈ ಪೇಯದಲ್ಲಿ 38 ಗ್ರಾಂನಷ್ಟು ಸಕ್ಕರೆ ಇದ್ದು, 300ರಿಂದ 400 ಕ್ಯಾಲೊರಿ ಇರುತ್ತದೆ. ನಿಮ್ಮ ದೇಹಾರೋಗ್ಯಕ್ಕೆ ಬಬಲ್‌ ಟೀಯಲ್ಲಿ ನೀವು ಯಾವ ಹಣ್ಣು ಬಳಸುತ್ತೀರಾ? ಮತ್ತು ಎಷ್ಟು ಸಕ್ಕರೆ ಹಾಕುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಬೇಕಾದರೆ ನೀವು ಇದಕ್ಕೆ ಆಯಾ ಸೀಸನ್‌ಗೆ ತಕ್ಕಂತೆ ಮಾವು, ಬಾಳೆಹಣ್ಣು, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಇದಕ್ಕಾಗಿ ಬಳಸಬಹುದು. ಟ್ಯಾಪಿಕೋ ಪರ್ಲ್‌ಗಳಲ್ಲಿ ಪ್ರೋಟೀನ್, ವಿಟಮಿನ್ ಕೆ, ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂ ಅಧಿಕವಾಗಿದ್ದು, ಹಾಗಾಗಿ ಈ ಬಬಲ್‌ಗಳು ಟೀಗೆ ಹೆಚ್ಚಿನ ಪೋಷಕಾಂಶ ಒದಗಿಸುತ್ತವೆ

ಅಲ್ಲದೆ ಬಬಲ್‌ ಟೀ ತಯಾರಿಸುವಾಗ ಅತಿಯಾಗಿ ಸಕ್ಕರೆ ಹಾಗೂ ಫ್ಲೇವರ್ ಬಳಸಿದರೆ ಖಂಡಿತಾ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಅವಾಯ್ಡ್ ಮಾಡಿ ಹಣ್ಣುಗಳನ್ನು ಬಳಸಿ ತಯಾರಿಸಿದರೆ ಪೇಯವು ಸಹಜವಾಗಿಯೇ ಸಿಹಿಯಾಗುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಸದ್ಯ ಭಾರತದಲ್ಲಿ ಫೇಮಸ್ಆಗಿರುವ ಈ ಟೀನಲ್ಲಿ ಹಲವು ವೆರೈಟಿಗಳಿದ್ದು, ಕಾಫಿ ಬಬಲ್ ಟೀ, ಕೋಕೋನಟ್ ಬಬಲ್ ಟೀ, ಮ್ಯಾಂಗೋ ಬಬಲ್ ಟೀ, ಕ್ಲಾಸಿಕ್ ಬಬಲ್ ಟೀ ಹಾಗೂ ಸ್ಟ್ರಾಬೆರಿ ಆಲ್ಮಂಡ್ ಮಿಲ್ಕ್ ಬಬಲ್ ಟೀ ಎಂಬುವುದು ಎಲ್ಲೆಡೆ ದೊರೆಯುತ್ತಿದೆ. ಹಾಗದರೆ ಇನ್ನೂ ಯಾಕ್ ಯೋಚನೆ ಮಾಡುತ್ತಿದ್ದೀರಾ? ನೀವು ಟೆಸ್ಟ್ ಮಾಡಿಲ್ಲವಾದಲ್ಲಿ ಒಮ್ಮೆ ಹೋಗಿ ಬಬಲ್ ಟೀಯನ್ನು ಟ್ರೈ ಮಾಡಿ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಪೂಜೆಗೆ ತೆಂಗಿನಕಾಯಿಯನ್ನೇ ಏಕೆ ಅರ್ಪಿಸುತ್ತಾರೆ?ಅದರ ಹಿಂದಿನ ಉದ್ದೇಶ ಏನು ಗೊತ್ತಾ ನಿಮ್ಗೆ?

    ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯು ಸನಾತನವಾಗಿದ್ದು, ನಮ್ಮ ಈ ಹಿಂದೂ ಸಂಸ್ಕೃತಿಯಲ್ಲಿ ತೆಂಗಿನ ಕಾಯಿಗೆ ವಿಶೇಷವಾದ ಮಹತ್ವವಿದೆ. ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಅವಶ್ಯಕತೆಗೆ ತಕ್ಕಂತೆ ಪ್ರಕ್ಷೇಪಿಸುವ ಸಾಮರ್ಥ್ಯವಿದೆ. ಈ ಕಾರಣದಿಂದ ತೆಂಗಿನ ಕಾಯಿಗೆ ವಿಶೇಷ ಮಾಹತ್ವ, ಮಹಿಮೆ ಇದೆ.

  • ಆರೋಗ್ಯ

    ಹಲವು ಸಮಸ್ಯೆಗಳಿಗೆ ರಾಮಭಾಣ ಖರಬೂಜ ಹಣ್ಣು. ಈ ಹಣ್ಣಿನ

    ಈ ಕೆಳಕಂಡ ಸಮಸ್ಯೆಯಿಂದ ಬಳಲುತ್ತಿರುವವರು ಕರಬೂಜ ಸೇವನೆ ಮಾಡುವುದು ಉತ್ತಮ. ಕರಬೂಜ ಹಲವು ಸಮಸ್ಯೆಗಳಿಗೆ ನಿವಾರಣಾ ಗುಣ ಹೊಂದಿದೆ. ನಾವು ಇದರ ಸೇವನೆಯನ್ನು ಮಾಡುವುದು ಉತ್ತಮ ಇದರಿಂದ ದೇಹಕ್ಕೆ ಹಲವು ಲಾಭಗಳು ಲಭಿಸಲಿವೆ. ಕರಬೂಜದಲ್ಲಿ ಪಿಟೋಕೆಮಿಕಲ್ಸ್ ಎನ್ನುವ ಪದಾರ್ಥ ಇದೆ. ಈ ಪದಾರ್ಥಕ್ಕೆ ಉರಿಯೂತದ ವಿರುದ್ಧ ಹೊರಡುವ ಹೂನವಿದೆ. ಇದನ್ನ ತಿನ್ನುವುದರಿಂದ ಮೊಣಕೈ, ಮೊಣಕಾಲು ದೇಹದಲ್ಲಿರೋ ಸಂದಿಗಳಲ್ಲಿ ಬರುವ ನೋವು ಕಡಿಮೆಯಾಗುತ್ತದೆ. ಕರಬೂಜ ಹಣ್ಣು ತಿನ್ನುವುದರಿಂದ ಸಂದಿವಾತ ಬರುವುದನ್ನ ಸಹ ತಡೆಯಬಹುದು. ಕರಬೂಜದಲ್ಲಿ ರೋಗ ನೀರೋದಕ ಶಕ್ತಿ…

  • ವಿಸ್ಮಯ ಜಗತ್ತು

    21ನೇ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!ತಿಳಿಯಲು ಮುಂದೆ ನೋಡಿ…

    ಯುಕೆ ನಿವಾಸಿಯೊಬ್ಬಳು ಕೆಲ ದಿನಗಳ ಹಿಂದಷ್ಟೆ 21ನೇ ಮಗುವಿಗೆ ಜನ್ಮ ನೀಡಿದ್ದಾಳೆ.ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಈ ಮಹಾತಾಯಿ ಹೆಸರು ಶು ರೆಡ್ಪೋರ್ಡ್. ಪತಿ ನಿವೋಲ್. ವರದಿ ಪ್ರಕಾರ ಹಿಂದಿನ ವಾರ 12 ನಿಮಿಷದ ಹೆರಿಗೆ ನೋವು ಅನುಭವಿಸಿ ಶು 21ನೇ ಮಗು ಬೋನಿ ರಾಯೈಗೆ ಜನ್ಮ ನೀಡಿದ್ದಾಳೆ. 21 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ ಅತಿ ದೊಡ್ಡದಾದ…

  • ಸುದ್ದಿ

    ಸೆಕೆಯನ್ನು ತಡೆಯಲಾಗದೆ ಬೆತ್ತಲೆಯಾಗಿ Scooty ಓಡಿಸಿಕೊಂಡು ರಸ್ತೆಗಿಳಿದ…!

    ಇದು ಜರ್ಮನಿಯಲ್ಲಿ ಕಂಡು ಬಂದಂತಹ ಒಂದು ಪ್ರಸಂಗ. ವ್ಯಕ್ತಿಯೊಬ್ಬ ಕೆಲಸದ ನಿಮಿತ್ತ ಹೊರ ಹೊರಟಿದ್ದ. ಆದರೆ ಅವನಿಗೆ ಸೆಕೆ ತಡೆಯಲಾಗಲಿಲ್ಲ. ಹೀಗಾಗಿ ಉಟ್ಟ ಬಟ್ಟೆ ಕಿತ್ತೆಸೆದು ಹೆಲ್ಮೆಟ್ ಮತ್ತು ಚಪ್ಪಲಿಯನ್ನು ಧರಿಸಿ ಬೆತ್ತಲೆಯಾಗಿ ಸ್ಕೂಟಿ ಚಲಾಯಿಸಿಕೊಂಡು ರಸ್ತೆಗಿಳಿದ. ಇದೇನು ನಡೆಯುತ್ತಿದೆ ಎಂದು ಜನ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಂತೆ, ಆತನ ಮುಂದೆ ಪೊಲೀಸರು ಪ್ರತ್ಯಕ್ಷರಾದರು. ನನಗೆ ಸೆಕೆ ತಡೆಯಲಾಗಲಿಲ್ಲ, ಹೀಗಾಗಿ ಬಟ್ಟೆ ಕಿತ್ತೆಸೆದು ಬಂದೆ ಎಂದಾತ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಹೀಗಾಗಿ ಪೊಲೀಸರು ಸಹ ಆತನನ್ನು ತಡೆಯದಾದರು. ಬಳಿಕ…

  • ಉಪಯುಕ್ತ ಮಾಹಿತಿ

    ನೀವು ರಾತ್ರಿ ಮಲಗುವ ಮುಂಚೆ ಇದನ್ನ ಮಾಡಿದ್ರೆ ಹಾರ್ಟ್ ಅಟ್ಯಾಕ್ ಆಗೋದು ತುಂಬಾ ಕಡಿಮೆ!

    ಮಲಗುವುದಕ್ಕೂ ಮುನ್ನ ಹಿತವಾದ, ಧ್ಯಾನ, ಯೋಗ ಸಂಗೀತವನ್ನು ಆಲಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಭಾರತೀಯ ಸಂಶೋಧಕರು ಹೇಳಿದ್ದಾರೆ. ಈ ರೀತಿಯ ಮ್ಯೂಸಿಕ್ ಥೆರೆಪಿಯನ್ನು ಆಸ್ಪತ್ರೆಗಳಲ್ಲಿ ಪ್ರಯೋಗಿಸಲಾಗುತ್ತಿದ್ದು, ಯೋಗ ಸಂಗೀತವನ್ನು ಮಲಗುವುದಕ್ಕೂ ಮುನ್ನ ಆಲಿಸುವುದು ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ. ಈ ಅಧ್ಯಯನವನ್ನು ಜರ್ಮನಿಯಲ್ಲಿರುವ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ಕಾಂಗ್ರೆಸ್ 2018 ರಲ್ಲಿ ಮಂಡಿಸಲಾಗಿದೆ. ಆರೋಗ್ಯಕರವಾಗಿದ್ದ ಸುಮಾರು 149…