ಸುದ್ದಿ

ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತ್ನಿಯನ್ನು ಕೊಂದ ಪತಿ…….!

68

ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.ನಂದಿನಿ(28) ಕೊಲೆಯಾದ ದುರ್ದೈವಿ. ನಂದಿನಿ ಪ್ರೈವೇಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆ ಕಟ್ಟಡ ನಿರ್ಮಾಣ ಕಾರ್ಮಿಕ ಕನಕ ರಾಜುನನ್ನು ಮದುವೆ ಆಗಿದ್ದಳು. ಈ ದಂಪತಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಕೂಡ ಇದ್ದಾರೆ. ನಂದಿನಿ ಹಾಗೂ ಕನಕ ರಾಜು ಎರಡು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ನಂದಿನಿ ತನ್ನ ಪತಿ ಕನಕ ರಾಜುನಿಂದ ದೂರ ಆಗಿ ಟಿಕ್‍ಟಾಕ್‍ಗೆ ಅಡಿಕ್ಟ್ ಆಗಿ ಅದನ್ನು ಅಪ್ಲೋಡ್ ಮಾಡುತ್ತಿದ್ದಳು. ಇದನ್ನು ನೋಡಿದ ಆಕೆಯ ಪತಿ ಕನಕ ರಾಜು, ಟಿಕ್‍ಟಾಕ್ ವಿಡಿಯೋ ಅಪ್ಲೋಡ್ ಮಾಡದಂತೆ ಎಚ್ಚರಿಸಿದ್ದನು. ಅಲ್ಲದೆ ತನ್ನ ಮನೆಗೆ ಹಿಂದಿರುಗಿ ಕುಟುಂಬದ ಜೊತೆ ವಾಸಿಸಲು ಹೇಳಿದ್ದನು.

ಆದರೆ ನಂದಿನಿ ತನ್ನ ಪತಿಯ ಮಾತನ್ನು ಕೇಳಲಿಲ್ಲ. ನಂದಿನಿಗೆ ಕನಕ ರಾಜು ಸಾಕಷ್ಟು ಬಾರಿ ಕರೆ ಮಾಡಿದ್ದನು. ಆದರೆ ಆಕೆಯ ಮೊಬೈಲ್ ಬ್ಯುಸಿ ಬರುತ್ತಿತ್ತು. ಇದರಿಂದ ಕೋಪಗೊಂಡ ಕನಕ ರಾಜು ಕುಡಿದು ಪತ್ನಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಗಲಾಟೆ ಮಾಡಿದ್ದಾನೆ.ಈ ವೇಳೆ ನಂದಿನಿ ಹಾಗೂ ಕನಕ ರಾಜು ನಡುವಿನ ಜಗಳ ವಿಕೋಪಕ್ಕೆ ತಲುಪುತ್ತಿದ್ದಂತೆ ಕನಕ ರಾಜು ಪತ್ನಿ ನಂದಿನಿಯನ್ನು ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ನಂದಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ದೇಹದಿಂದ ತೀವ್ರ ರಕ್ತಸ್ತ್ರಾವ ಆಗುತ್ತಿತ್ತು.

ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತಲುಪಿ ನಂದಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಅಲ್ಲದೆ ಆರೋಪಿ ಕನಕ ರಾಜುನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಚಂದನ್ ಶೆಟ್ಟಿ ನಿವೇದಿತಾ ಗೌಡ ನಿಶ್ಚಿತಾರ್ಥ ಹೇಗಿದೆ ಗೊತ್ತ…?

    ಮೈಸೂರಿನಲ್ಲಿ ನಿವೇದಿತಾ ಗೌಡ, ಚಂದನ್ ಶೆಟ್ಟಿ ನಿಶ್ವಿತಾರ್ಥ ನಡೆಯುತ್ತಿದ್ದು, ಗ್ರೀನ್ ಸ್ಯಾರಿ ತೊಟ್ಟು ಹೋಟೆಲ್ ಗೆ ಬಂದ ಬೇಬಿ ಡಾಲ್. ಹೋಟೆಲ್​ಗೆ ಎಂಟ್ರಿಯಾಗೊ ಮುನ್ನ ಆವರಣದಲ್ಲಿಯೇ  ಫೋಟೋ ಶೂಟ್ ಮಾಡಿಸಿದ್ದಾರೆ. ಇನ್ನೂ  ಕೆಲವೇ ನಿಮಿಷಗಳಲ್ಲಿ ಚೆಂದನ್ ಶೆಟ್ಟಿ ಹೋಟೆಲ್ ಗೆ ಆಗಮಿಸಲಿದ್ದಾರೆ. ಈಗಾಗಲೇ ಹೋಟೆಲ್ ಗೆ ಚಂದನ್ ಶೆಟ್ಟಿ ಕುಟುಂಬ ಹಾಗು ನಿವೇದಿತಾ ಕುಟುಂಬಸ್ಥರು ಮತ್ತು ಸಂಬಂಧಿಕರು, ಸ್ನೇಹಿತರು ಆಗಮಿಸಿದ್ದಾರೆ.  ಸದ್ಯ ಕಲರ್​ ಫುಲ್​ ಫ್ಲವರ್​ ಮೂಲಕ  ಎಂಗೆಜ್ಮೆಂಟ್ ಹಾಲ್ ಡೆಕೋರೆಟ್ ಮಾಡಲಾಗಿದೆ.  ಮಧ್ಯಾಹ್ನ 12.30ಕ್ಕೆ ಪರಸ್ಪರ…

  • ರಾಜಕೀಯ

    ಮಣ್ಣಿನ ಮಗ ಮಾಜಿ ಪ್ರಧಾನಿ “ಹೆಚ್.ಡಿ.ದೇವೇಗೌಡ”ರಿಗೆ “ರಾಷ್ಟ್ರಪತಿ” ಸ್ಥಾನಕ್ಕೆ ಸ್ಪರ್ಧಿಸುವಂತೆ ಆಹ್ವಾನ

    ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದಾರೆ.

  • ಸಾಧನೆ

    ತಂದೆ ಒಂದು ಸಹಿ ಗೋಸ್ಕರ ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ನೋಡಿ. ಛಲದಿಂದ ಐಎಎಸ್ ಅಧಿಕಾರಿಯಾದ ಮಗಳು!

    ತನ್ನ ತಂದೆ ಒಬ್ಬ ಸಾಮಾನ್ಯ ರೈತ ಹೊಲದ ದಾಖಲೆಗಳನ್ನು ಸಹಿ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದರು, ಬಿಸಿಲು ಗಾಳಿ ಮಳೆ ಎನ್ನದೆ ಪ್ರತಿದಿನ ತಮ್ಮ ಕೆಲಸ ಆಗಲಿ ಅನ್ನೋ ಕಾರಣಕ್ಕೆ ಓಡಾಡುತ್ತಿದ್ದರು, ಆದ್ರು ಕೆಲಸ ಆಗದೆ ಮರಳಿ ಮನೆಗೆ ಬರುತ್ತಿದ್ದರು ಇದೆಲ್ಲ ಗಮನಿಸಿದ ಈ ಬಾಲಕಿ ಅಂದ್ರೆ ಈಗ ಐಎಎಸ್ ಅಧಿಕಾರಿ ಆಗಿರುವಂತ ರೋಹಿಣಿಯವರು ಆಗ 9ನೇ ವಯಸ್ಸಿನ ಬಾಲಕಿಯಾಗಿದ್ದರು. ಒಂದು ದಿನ ಈ ಬಾಲಕಿ ತಮ್ಮ ತಂದೆಯನ್ನು ಕೇಳುತ್ತಾರೆ ಅಪ್ಪ ನೀವು ಪ್ರತಿದಿನ ಬಿಸಿಲು…

  • ಸಿನಿಮಾ

    ಮದುವೆ ಆಗುತ್ತಿರುವ ತನ್ನ ಮಗಳಿಗಾಗಿ ರವಿಮಾಮನಿಂದ ಸಿಗಲಿದೆ ಭರ್ಜರಿ ಸ್ಪೆಷಲ್ ಗಿಫ್ಟ್..!

    ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಪುತ್ರಿ ಗೀತಾಂಜಲಿಯವರ ಮದುವೆಗೆ ವಿಶೇಷ ಉಡುಗೊರೆಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿದ್ದು, ಮೇ 29ರಂದು ನಡೆಯುವ ಮದುವೆಯಲ್ಲಿ ಅದನ್ನು ನೀಡಲಿದ್ದಾರೆ. ಹೌದು…ಮದುವೆಯಾಗಲಿರುವ ಮಗಳಿಗಾಗಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ಹಾಡೊಂದನ್ನು ಬರೆದು ಸಂಗೀತ ಸಂಯೋಜಿಸಿದ್ದಾರೆ. “ಬೆಳೆದ ಮೇಲೆ ನೀನು ನಾನು ಮಗುವಾದೆ, ಯಾಕೋ ಏನೋ ತಿಳಿಯದೇನೇ ಚಡಪಡಿಸಿದೆ ಮನಸು, ನೋವು-ನಲಿವು ಜೊತೆಗೆ ಸಂಭ್ರಮ ಅಡಗಿದೆ, ಓ ನನ್ನ ಮಗಳೇ…..” ಎಂಬ ಸಾಹಿತ್ಯ ಇರುವ ಈ ಗೀತೆಯನ್ನು ಗೌತಮ್ ಶ್ರೀವತ್ಸ ಹಾಡಿದ್ದಾರೆ. ಉದ್ಯಮಿ ಅಜಯ್ ಜೊತೆ ಗೀತಾಂಜಲಿಯ ನಿಶ್ಚಿತಾರ್ಥ…

  • ಇತಿಹಾಸ

    ʼಮೈಸೂರು ದಸರಾʼ ಶುರುವಾಗಿದ್ದೇಗೆ ಗೊತ್ತಾ?,ಅದರ ಹಿನ್ನೆಲೆ ಏನೆಂದು ತಿಳಿಹಿರಿ…!

    ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಆರಂಭವಾಗುವ ನವರಾತ್ರಿ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಇನ್ನೂ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು. ಆಗ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ…

  • ಸುದ್ದಿ

    ವಿಶೇಷ ರೀತಿಯಲ್ಲಿ ಗಣೇಶನ ವಿಸರ್ಜನೆ ಮಾಡಿದ ಕೋಲಾರದ ಜನ..ಕಣ್ಮನ ಸೆಳೆದ ಆ ಮೆರವಣಿಗೆ ಹೇಗಿತ್ತು ಗೊತ್ತ.?

    ನಗರದ ಪ್ರವಾಸಿ ಮಂದಿರದ ಮುಂಭಾಗ ಅಖಂಡ ಭಾರತ ವಿನಾಯಕ ಮಹಾಸಭಾ ಪ್ರತಿಷ್ಠಾಪಿಸಿದ್ದ ವಿನಾಯಕ ಮೂರ್ತಿಗಳನ್ನು ಭಾನುವಾರ ಅದ್ದೂರಿ ಮೆರವಣಿಗೆಯೊಂದಿಗೆ ವಿಸರ್ಜಿಸಲಾಯಿತು. ಬೃಹತ್ ವೇದಿಕೆಯಲ್ಲಿ ವೆಂಕಟರಮಣಸ್ವಾಮಿ ರೂಪಿ ಸಿದ್ಧಿ-ಬುದ್ಧಿ ಸಮೇತ ಗಣಪನ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ಮಹಾಸಭಾ ಒಂದು ವಾರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಭಾನುವಾರ ಮಧ್ಯಾಹ್ನ ಬೃಹತ್ ಕೇಸರಿ ಧ್ವಜ ಹಾರಾಡಿಸುವ ಮೂಲಕ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.ಕೇರಳದ ಚಂಡೆ ವಾದನ, ಷಣ್ಮುಖ, ಉಗ್ರನರಸಿಂಹ, ಕಾಳಿ, ವಿಷ್ಣು, ಈಶ್ವರ, ಶ್ರೀಕೃಷ್ಣ, ತಿರುಪತಿ ತಿರುಮಲ ವೆಂಕಟೇಶ್ವರ ಸೇರಿ…