ಸುದ್ದಿ

ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು?..ಮಾನವನ ಆಯಸ್ಸು ಎಷ್ಟು ಗೊತ್ತಾ….?

71

ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ.

ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ.

ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120 ವರ್ಷಕ್ಕಿಂತ್ಲೂ ಅಧಿಕ ಸಮಯ ಬದುಕಿರಬಲ್ಲ. ಹಾಗಾಗಿ ಮನುಷ್ಯನ ಆಯುಷ್ಯಕ್ಕೆ ಯಾವುದೇ ಮಿತಿ ಇಲ್ಲ ಅಂತಾ ಕೆಲವು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ವ್ಯಕ್ತಿಯೊಬ್ಬ ಬಹು ಕಾಲ ಬದುಕಿದ್ರೆ ಅವರ ವಯಸ್ಸು 150 ವರ್ಷಗಳನ್ನೂ ದಾಟಿ ಬಿಡುತ್ತದೆ. ಹಾಗಾಗಿ ಮನುಷ್ಯನ ಆಯಸ್ಸು ಕೇವಲ 115 ವರ್ಷ ಎಂದು ಹೇಳಲು ಸಾಧ್ಯವೇ ಇಲ್ಲ. ಮನುಷ್ಯದ ದೀರ್ಘಾಯುಷ್ಯದ ರಹಸ್ಯಕ್ಕೆ ಉತ್ತರ ಇದಲ್ಲ ಎನ್ನುತ್ತಿದ್ದಾರೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ