ಜ್ಯೋತಿಷ್ಯ

ಗುರುವಾರದ ನಿಮ್ಮ ರಾಶಿ ಭವಿಷ್ಯ ಶುಭವೋ,ಅಶುಭವೋ ತಿಳಿಯಲು ಈ ಲೇಖನ ಓದಿ ತಿಳಿಯಿರಿ…

407

ಇಂದು ಗುರುವಾರ, 15/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಉದ್ಯೋಗಿಗಳು ನೂತನ ವೃತ್ತಿಯನ್ನು ಕೈಗೊಳ್ಳಬಹುದು.ನಿಧಾನವಾಗಿ ಇತರರ ಹೃದಯವನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಕೆಲಸದಿಂದ ಆಗಾಗ್ಗೆ ಮನಸು ದೂರವಾಗುವ ಸಾಧ್ಯತೆಯಿರುತ್ತದೆ.ಹೊಸ ಮನೆಗೆ ಹೋಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗ ಬಹುದು. ಜಾಗ್ರತೆ ವಹಿಸಬೇಕು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆ ಜತೆ ಸಮಾಲೋಚಿಸಿ ತೀರ್ಮಾನ ಸಾಧ್ಯತೆ. ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ ಮಕ್ಕಳು ನಿಮಗೆ ನೆರವಾಗಲಿದ್ದಾರೆ. ಮಾನಸಿಕ ದುಗುಡ ಉಂಟಾದೀತು

ವೃಷಭ:-

ಮುಖ್ಯವಾದ ಕೆಲಸವೊಂದಕ್ಕೆ ಸಲಹೆ ಪಡೆಯಲು ಪ್ರಸಿದ್ಧ ವ್ಯಕ್ತಿಯೊಬ್ಬರನ್ನು ಸಂದರ್ಶಿಸಬೇಕಾದೀತು. ರಾಜಕೀಯ ಸ್ಥಿತ್ಯಂತರ ಸಾಧ್ಯತೆ. ಕಾರ್ಯನಿಮಿತ್ತವಾಗಿ ಸಂಚಾರವಿರುತ್ತದೆ. ವೈವಾಹಿಕ ಜೀವನದಲ್ಲಿ ನೀವು ಹೆಚ್ಚು ಸಮಯ ಮೀಸಲಿಡಬೇಕಾಗಬಹುದು ಮತ್ತು ಹೆಚ್ಚು ಬದ್ಧತೆ ಪ್ರದರ್ಶಿಸಬೇಕಾಗಬಹುದು. ಆರ್ಥಿಕವಾಗಿ ಹೆಚ್ಚಿನ ಅಭಿವೃದ್ಧಿ ಗೋಚರಕ್ಕೆ ಬರುತ್ತದೆ. ಪತ್ನಿಗೆ ಮಾತ್ರ ಉತ್ತಮವಲ್ಲ. ದಂಪತಿಗಳಿಗೆ ಸಂತಾನಭಾಗ್ಯಕ್ಕೆ ಸಕಾಲ..

ಮಿಥುನ:

ಸಾಮಾಜಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರಕವಾದ ವಾತಾವರಣವಿದೆ. ಸಾಂಸಾರಿಕ ಹೊಂದಾಣಿಕೆಯಿಂದ ಶಾಂತಿ ಸಮಾಧಾನ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಅನುಕೂಲವಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಕೆಲಸ ಕಾರ್ಯಗಳನ್ನು ಸುಲಭವಾಗಿ ಪೂರ್ತಿಗೊಳಿಸುವಿರಿ. ಇಷ್ಟದೇವರ ಸೇವೆಯಿಂದ ಕಷ್ಟಗಳೆಲ್ಲವೂ ಪರಿಹಾರ. ಬಂಧುಗಳಿಂದ ಸಹಾಯ ದೊರಕಲಿವೆ. ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಅಗತ್ಯ.

 

ಕಟಕ :-

ಆದಾಯ ಹೆಚ್ಚುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ಏಳ್ಗೆ ಕಾಣುತ್ತದೆ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ ಮತ್ತು ಉತ್ತಮ ಫಲಿತಾಂಶಗಳನ್ನು ಒದಗಿಸುತ್ತದೆ. ಶಾರೀರಿಕ ಆರೋಗ್ಯ ಸುಧಾರಿಸಲಿದೆ. ಆರ್ಥಿಕ ಅಭಿವೃದ್ಧಿ ಹಂತ ಹಂತವಾಗಿ ಗೋಚರಕ್ಕೆ ಬರುತ್ತದೆ. ವಿರೋಧಿಗಳನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗುತ್ತದೆ. ಜಾಗ್ರತೆ ಇರಲಿ. ಶುಭ ಸುದ್ದಿ ಕೇಳುವ ಭಾಗ್ಯ. ಮನಸ್ಸಿಗೆ ಮುದ ನೀಡುವ ಘಟನಾವಳಿಗಳು ಸಂಭವಿಸುವವು.

 ಸಿಂಹ:

ವೃತ್ತಿ ಜೀವನಕ್ಕೆ ಬಹಳ ಅವಶ್ಯಕವಾದ ನಿರ್ಧಾರವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ನಿಲುವುಗಳನ್ನು ಬದಲಾಯಿಸದೇ ಸಮರ್ಥಿಸಿಕೊಳ್ಳುವುದು ಉತ್ತಮ. ಮಹಿಳೆಯರಿಗೆ ಮಾನಸಿಕ ಕಿರಿಕಿರಿ. ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗಳಿಂದ ಆತಂಕ ಪಡುವಂತಾದೀತು. ಆಗಾಗ ವೃತ್ತಿರಂಗದಲ್ಲಿ ಅವಮಾನ ಅಪಮಾನವನ್ನು ಎದುರಿಸಬೇಕಾಗುತ್ತದೆ. ದಿನಾಂತ್ಯ ಶುಭ ವಾರ್ತೆ.

ಕನ್ಯಾ :-

ನೀವು ಆರೋಗ್ಯದ ಮೇಲೆ ಗಮನ ಹರಿಸಬೇಕು. ನಿಧಾನವಾಗಿ ನೀವು ಆತ್ಮವಿಶ್ವಾಸವನ್ನು ಗಳಿಸುತ್ತೀರಿ ಮತ್ತು ಏನನ್ನಾದರೂ ಸಾಧಿಸಲು ಬಯಸುತ್ತೀರಿ. ಹೊಸ ಕಾರ್ಯ, ಹೊಸ ಪರಿಸರಕ್ಕೆ ಅನುಕೂಲವಾದೀತು. ನಿಮ್ಮ ಪ್ರೀತಿ ಪಾತ್ರರ ಸಹಕಾರದಿಂದ ಕಾರ್ಯಸಿದ್ಧಿಯಾಗಲಿದೆ. ದೈವಾನುಗ್ರಹ ಉತ್ತಮವಿದ್ದು ಇಷ್ಠಾರ್ಥ ಸಿದ್ಧಿಯಾಗಲಿದೆ‌. ನಿಮ್ಮ ಕೆಲಸಗಳ ಬಗೆಗೆ ಹೆಚ್ಚಿನ ಆದ್ಯತೆಯೊಂದಿಗೆ ನಿಗಾವಹಿಸುವುದು ಒಳಿತು. ಕುಟುಂಬದವರೊಂದಿಗೆ ಆರಾಮದಾಯಕ ದಿನವನ್ನಾಗಿ ಕಳೆಯುವಿರಿ. ಆಯಾಸದಿಂದ ಮುಕ್ತಿ.

ತುಲಾ:

ಸಮಸ್ಯೆಗಳು ಹಂತ ಹಂತವಾಗಿ ಉಪಶಮನ ವಾಗಲಿವೆ. ಶುಭಾಶುಭ ಮಿಶ್ರ ಫ‌ಲವಿರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಶೀಲತೆಗೆ ಅಭಿವೃದ್ಧಿ. ಅತಿಥಿಗಳ ಆಗಮನವಿರುತ್ತದೆ. ಕೆಲಸದಲ್ಲಿ ಕೆಲವು ನಿರಾಸೆಗಳೂ ಇರಬಹುದು. ಅಕ್ಟೋಬರ್ ನಂತರ, ನಿಮ್ಮ ಹಣಕಾಸು ಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ವೈವಾಹಿಕ ಜೀವನ ಬೆಳಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಂತಸದಿಂದ ಕಾಲಕಳೆಯುವಿರಿ. ಕೂಡಿಟ್ಟ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವ್ಯಯಿಸಬೇಕಾದೀತು. ಚಿಂತಿಸಬೇಕಾದ ಅಗತ್ಯವಿಲ್ಲ.

ವೃಶ್ಚಿಕ :-

ಆಯಾಸ ಕಡಿಮೆಯಾಗುವ ಜೊತೆಗೆ ಆಸ್ಪತ್ರೆಯ ಅಲೆದಾಟ ಮುಕ್ತಾಯವಾಗುವ ಸಾಧ್ಯತೆ. ಮಕ್ಕಳ ಒತ್ತಾಸೆಯ ಮೇರೆಗೆ ವಾಹನ ಖರೀದಿ ಮಾಡಲಿದ್ದೀರಿ. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಲಾಭ. ಅಸಹನೆ ದುರಾಸೆಗೆ ಬಲಿಯಾಗದಿರಿ. ವೃತ್ತಿರಂಗದಲ್ಲಿ ಸ್ಥಾನಮಾನಗಳಿಗೆ ಹಾನಿಯಾಗಬಹುದು ಜಾಗ್ರತೆ ವಹಿಸಿರಿ. ದೇವತಾ ದರ್ಶನ ಭಾಗ್ಯಕ್ಕಾಗಿ ಸಂಚಾರವಿದೆ. ದಿನಾಂತ್ಯ ಶುಭವಾರ್ತೆ.

ಧನಸ್ಸು:

ಉದರಬಾಧೆ ಶೀತಬಾಧೆಗಳು ತೋರಿಬಂದೀತು. ಆದರೂ ವೃತ್ತಿರಂಗದಲ್ಲಿ ಅಡಚಣೆಗಳಿಂದ ಕಿರಿಕಿರಿ ತಂದರೂ ಮುನ್ನಡೆ ಇದ್ದೇ ಇರುತ್ತದೆ. ಶುಭಮಂಗಲ ಕಾರ್ಯಗಳಿಗೆ ಅನುಕೂಲ ಸಮಯ. ಆರೋಗ್ಯ ಸಮಸ್ಯೆಯ ಸಾಧ್ಯತೆಯಿದೆ. ಆದಾಯ ಹೆಚ್ಚಿಸಿಕೊಳ್ಳುವ ಮೂಲವೊಂದನ್ನು ಕಂಡುಕೊಳ್ಳಲಿದ್ದೀರಿ. ಹಿರಿಯರ ಮಧ್ಯಸ್ಥಿಕೆಯಿಂದಾಗಿ ಮನೆಯ ವಿಚಾರಗಳನ್ನು ಬಗೆಹರಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.

ಮಕರ :-

ಸಗಟು ವ್ಯಾಪಾರಿಗಳಿಗೆ ಲಾಭದ ದಿನ. ಮನೆಯಲ್ಲಿ ವಿವಾಹ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾದ ಸಾಧ್ಯತೆ ಕಂಡುಬರುತ್ತಿದೆ. ಬಂಧುಗಳ ಜತೆ ತೀರ್ಥಯಾತ್ರೆ ಪ್ರಸ್ತಾಪ ಮಾಡಲಿದ್ದೀರಿ ಇತರರೊಂದಿಗೆ ಸಹಕಾರ ಸಿಗಲಿದೆ. ಆದರೂ ಪ್ರಯತ್ನ ಬಲಕ್ಕೆ ಒತ್ತು ನೀಡಬೇಕಾಗುತ್ತದೆ. ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗಲಾಭ ನಿರುದ್ಯೋಗಿಗಳಿಗೆ ಸಿಗಲಿದೆ. ಆರ್ಥಿಕವಾಗಿ ಉನ್ನತಿ ಸಿಗಲಿದೆ.

ಕುಂಭ:-

ರೋಗ ಶಮನವಾಗಿ ಸಮಾಧಾನ ತಂದೀತು. ಯೋಗ್ಯ ವಯಸ್ಕರು ವೈವಾಹಿಕ ಭಾಗ್ಯವನ್ನು ಪಡೆಯಲಿದ್ದಾರೆ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ನಿಮ್ಮ ಕೆಲಸವನ್ನು ವಿಸ್ತರಿಸುವುದಕ್ಕೆ ನೀವು ಮನೆಯಿಂದ ಹೊರಗೆ ಹೋಗಬಹುದು ಮತ್ತು ನೀವು ಅಲ್ಲಿ ಉತ್ತಮವಾಗಿ ಗಳಿಸಬಹುದು. ಹಣಕಾಸು ಸಂಸ್ಥೆಗಳ ನೆರವಿನಿಂದ ಸ್ವಂತ ಉದ್ದಿಮೆ ಪ್ರಾರಂಭಿಸುವ ಯೋಜನೆ ಕೈಗೂಡುವುದು. ಹೆತ್ತವರ ಹಾರೈಕೆ, ಆಶೀರ್ವಾದ ಪಡೆಯಲಿದ್ದೀರಿ. ಸಂಗಾತಿ ಜತೆ ಸಂತೋಷದಿಂದ ಕಾಲಕಳೆಯಲಿದ್ದೀರಿ.

ಮೀನ:-

ಖರ್ಚು ವೆಚ್ಚಗಳ ಮೇಲೆ ಬಿಗಿ ಹಿಡಿತ ಅನಿವಾರ್ಯ. ಮಹಿಳೆಯರ ಆಶೋತ್ತರಗಳು ಈಡೇರಲಿವೆ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ ತೀರ್ಮಾನ ಕೈಗೊಳ್ಳುವಿರಿ. ಅನ್ಯ ವ್ಯಕ್ತಿಗಳಿಂದ ಮನಸ್ಸಿಗೆ ಬೇಸರವಾಗಲಿದೆ. ಮನೆಯಲ್ಲಿ ಶಾಂತಿ ಸಮಾಧಾನದ ವಾತಾವರಣದಿಂದ ಚೇತರಿಕೆ ತೋರಿಬಂದೀತು. ಅಗ್ನಿಭಯ, ಪ್ರಯಾಣದಿಂದ ನಷ್ಟ ಕಷ್ಟಗಳು ಇರುತ್ತವೆ. ನಿಮ್ಮ ಹಿಂದಿನ ಕಠಿಣ ಪರಿಶ್ರಮವು ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಅಡಿಪಾಯವಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಹಳ್ಳಿ ಹೈದ ಹನುಮಂತನಿಗೆ ಹೊಸ ವರ್ಷಕ್ಕೆ ಸಿಕ್ತು ಬಂಪರ್ ಆಫರ್..!

    ಸರಿಗಮಪ ಸಂಗೀತ ಕಾರ್ಯಕ್ರಮದ ಮೂಲಕ ಕರುನಾಡಿನಲ್ಲಿ ಗಾಯಕ ಹನುಮಂತ ಚಿರಪರಿಚಿತರಾಗಿದ್ದಾರೆ. ಹಾವೇರಿ ಜಿಲ್ಲೆಯ ಗ್ರಾಮದಲ್ಲಿ ಕುರಿ ಕಾಯುತ್ತಿದ್ದ ಹನುಮಂತ ಅವರು ‘ಸರಿಗಮಪ’ ವೇದಿಕೆಯಲ್ಲಿ ಹಾಡುವ ಮೂಲಕ ನಾಡಿನಲ್ಲಿ ಮನೆ ಮಾತಾಗಿದ್ದಾರೆ. ಮೊದಲ ಹಾಡಿನಿಂದ ಈವರೆಗೂ ಹನುಮಂತ ಹಾಡುವ ಪರಿ ನೋಡಿದರೆ ಸಾಕಷ್ಟು ಬದಲಾಗಿರುವುದು ಗಮನಕ್ಕೆ ಬರುತ್ತದೆ. ಹೊಸ ವರ್ಷ ಆರಂಭವಾಗುವ ಹೊಸ್ತಿಲಲ್ಲಿ ಹನುಮಂತನ ಪಾಲಿನ ಅದೃಷ್ಟದ ಬಾಗಿಲು ತೆರೆದಿದೆ. ಸಿನಿಮಾ ಸಂಗೀತಕ್ಕೆ ಹಿನ್ನೆಲೆ ಗಾಯಕನಾಗುವ ಅವಕಾಶ ಸಿಕ್ಕಿದೆ. ಇದುವರೆಗೆ ಸರಿಗಮಪ ವೇದಿಕೆಯಲ್ಲಿ ಹಾಡುತ್ತಿದ್ದ ಹನುಮಂತನ ಬಗ್ಗೆ ನಿರ್ದೇಶಕ…

  • ಸುದ್ದಿ

    18ನೇ ವೆಡ್ಡಿಂಗ್ ಡೇ ವಾರ್ಷಿಕೋತ್ಸವದಲ್ಲಿ ಸುದೀಪ್ ದಂಪತಿಯ ಸಂಭ್ರಮ…!

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು ತಮ್ಮ 18ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸುದೀಪ್ ಹಾಗೂ ಪ್ರಿಯಾ ಅಕ್ಟೋಬರ್ 18, 2001ರಲ್ಲಿ ಮದುವೆಯಾಗಿದ್ದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 18 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಇಬ್ಬರಿಗೂ ಶುಭಾಶಯ ತಿಳಿಸುತ್ತಿದ್ದಾರೆ. ನೆಚ್ಚಿನ ನಟ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಸುದೀಪ್ ಅಭಿಮಾನಿಗಳ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧವಾದ ಪೋಸ್ಟರ್ ಗಳನ್ನು ಪೋಸ್ಟ್…

  • ಜೀವನಶೈಲಿ

    ಸುಲಭವಾಗಿ ನಿಮ್ಮ ಜೀನ್ಸ್ ಪ್ಯಾಂಟ್ ವಾಶ್ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ..ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಅನೇಕ ಜನರಿಗೆ ಜೀನ್ಸ್ ಅಂದ್ರೆ ಇಷ್ಟ. ಅವರ ಕಪಾಟಿನಲ್ಲಿ ಜೀನ್ಸ್ ಸಂಖ್ಯೆಯೇ ಜಾಸ್ತಿ ಇರುತ್ತೆ. ಜೀನ್ಸ್ ಆರಾಮದಾಯಕ ಹಾಗೂ ಅದು ಅಷ್ಟು ಬೇಗ ಕೊಳಕಾಗುವುದಿಲ್ಲ. ಹಾಗಾಗಿ ಒಂದೇ ಜೀನ್ಸ್ ಪ್ಯಾಂಟನ್ನು ತೊಳೆಯದೆ ಪದೇ ಪದೇ ಧರಿಸಬಹುದು. ಆದ್ರೆ ಈ ಜೀನ್ಸ್ ತೊಳೆಯೋದು ಮಾತ್ರ ಕಷ್ಟದ ಕೆಲಸ. ಕೆಲಮೊಮ್ಮೆ ನಾವು ಮಾಡುವ ತಪ್ಪಿನಿಂದ ಜೀನ್ಸ್ ಬಣ್ಣ ಬೇಗ ಮಾಸುತ್ತದೆ. ಹರಿದು ಹೋಗುವ ಛಾನ್ಸ್ ಕೂಡ ಇದೆ. ನಾವು ಹೇಳುವ ಉಪಾಯ ಅನುಸರಿಸಿದ್ರೆ ಜೀನ್ಸ್ ಬಣ್ಣವನ್ನು ಹಾಗೇ ಉಳಿಸಿಕೊಂಡು ಹೋಗಬಹುದು.ನೀವು…

  • ಕಾನೂನು

    ನಿಮ್ಮ ಜಮೀನು ವ್ಯವಹಾರಕ್ಕೆ ಇದು ಕಡ್ಡಾಯವಲ್ಲ..?ಇದು ಕೇವಲ ವದಂತಿ ಎಂದ ಕೇಂದ್ರ ಸರ್ಕಾರ..!

    ಆಸ್ತಿ ವಹಿವಾಟಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವೂ ಸದ್ಯಕ್ಕೆ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

  • ಕರ್ನಾಟಕ

    ನಿಮ್ಮ ಬೆರಳ ತುದಿಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳು ಲಭ್ಯ!ಹೇಗೆ ಅಂತೀರಾ?ಈ ಲೇಖನಿ ಓದಿ….

    ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.

  • ಸುದ್ದಿ

    ಅಂಬರೀಷ್ ಹುಟ್ಟುಹಬ್ಬಕ್ಕೆ ಅಭಿಮಾನಿಯಿಂದ 500 ಕೆ ಜಿ ಧಾರವಾಡ ಪೇಡಾ!

    ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ, ಅಂಬರೀಷ್ ಅಭಿಮಾನಿಯೊಬ್ಬರು ಧಾರವಾಡದಿಂದ ಬರೋಬ್ಬರಿ 500 ಕೆಜಿ ಪೇಡಾವನ್ನು ಮಂಡ್ಯಕ್ಕೆ ಕಳುಹಿಸುತ್ತಿದ್ದಾರೆ.ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಅಲ್ಲಿ ನಡೆದ ಜಿದ್ದಾಜಿದ್ದಿಯಲ್ಲಿ ಸುಮಲತಾ ಗೆಲುವು ಸಾಧಿಸಿದ್ದರು. ಮಂಡ್ಯದಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಸ್ವಾಭಿಮಾನ ಸಮಾವೇಶವನ್ನು ಹಮ್ಮಿಕೊಂಡಿದ್ದು, ಈ ಸಮಾವೇಶಕ್ಕೆ ಧಾರವಾಡದಿಂದ ಮಂಡ್ಯ ಜನತೆಗೆ ಪೇಡಾ ಬಂದಿದೆ….