ಉಪಯುಕ್ತ ಮಾಹಿತಿ

ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

By admin

April 24, 2018

ಈಗಂತೂ ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಆವಳಿ ತುಂಬಾ ಜೋರಾಗಿದ್ದು, ಅವರಿಗೆ ಲಗಾಮು ಹಾಕುವವರೇ ಇಲ್ಲದಂತಾಗಿತ್ತು.ಪೋಷಕರು ಸಹ ತಮ್ಮ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಕಷ್ಟವಾದರೂ ಸರಿಯೇ, ಬೇರೆ ದಾರಿಯಿಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅತೀ ಹೆಚ್ಚು ಶುಲ್ಕ ಕೊಡುತ್ತಾ ಬಂದಿದ್ದಾರೆ.

ಇದರ ಬಗ್ಗೆ ಸರಕಾರಕ್ಕೆ ಹಲವು ದೂರುಗಳು ಸಹ ಬಂದಿವೆ.ಇದಕ್ಕೆ ಸ್ಪಂದಿಸಿರುವ ಸರ್ಕಾರ ಹೊಸದಾದ ಕಾಯಿದೆಯನ್ನು ತಂದಿದ್ದಾರೆ.ಅದೆಂದರೆ ಪೋಷಕರು ಅತೀ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ ಎಂದು.

ಹೌದು,ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಶುಲ್ಕಾ ಪಟ್ಟಿಯನ್ನು ನಿಗದಿ ಮಾಡಿದ್ದು, ಈ ವರ್ಷದಿಂದಲೇ ಜಾರಿಗೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.

ಈಗಾಗಲೇ ಈ ಶುಲ್ಕದ ಪಟ್ಟಿ ನಿಗದಿಯಾಗಿದ್ದು,ಮುಂಬರುವ ಶಾಲಾ ಮಕ್ಕಳ ಪ್ರವೇಶದ ವೇಳೆ ಈ ಕಾನೂನಿನ ಅನ್ವಯ ಶಾಲೆಯ ಸಮವಸ್ತ್ರ ಹಾಗೂ ಪುಸ್ತಕಗಳನ್ನು ಕೊಡುವುದು ಶಾಲಾ ಮಂಡಳಿಯ ಜವಾಬ್ದಾರಿಯೇ ಆಗಿರುತ್ತದೆ ಹಾಗೂ ಶಾಲಾ ಮಂಡಳಿಗಳು ಇದಕ್ಕಾಗಿ ಪೋಷಕರ ಹತ್ತಿರ ಹೆಚು ಶುಲ್ಕ ಪಡೆಯುವ ಹಾಗಿಲ್ಲ ಎಂದು ಹೇಳಿದ್ದಾರೆ.

ಆದೇಶದ ಪ್ರತಿಯಲ್ಲಿರುವಂತೆ ಖಾಸಗಿ ಶಾಲೆಗಳು ಪಡೆಯಬೇಕಾದ ಶುಲ್ಕಗಳ ವಿವರ…

ಎಲ್ಕೆಜಿ ಯುಕೆಜಿ ಶಾಲೆಗಳು ಪಡೆಯಬೇಕಾದ ವಾರ್ಷಿಕ ಶುಲ್ಕ..

ಬೆಂಗಳೂರು,ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳು ವಾರ್ಷಿಕವಾಗಿ 11,500ರೂ ಪಡೆಯಬೇಕು.

ಜಿಲ್ಲಾ ವ್ಯಾಪ್ತಿ-5600ರೂ

ತಾಲ್ಲೂಕು ವ್ಯಾಪ್ತಿ -3750ರೂ

ಗ್ರಾಮೀಣ ಪ್ರದೇಶಗಳು-1872ರೂ

1 ರಿಂದ 5ನೇ ತರಗತಿ ಮತ್ತು 6 ರಿಂದ 8ನೇ ತರಗತಿ:-

ಬೆಂಗಳೂರು,ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಗಳು : 6400ರಿಂದ 6800ರೂಗಳು

ಜಿಲ್ಲಾ ವ್ಯಾಪ್ತಿ-4600 ರಿಂದ 4900ರೂ

ತಾಲ್ಲೂಕು ವ್ಯಾಪ್ತಿ -2800 ರಿಂದ 3000ರೂ

ಗ್ರಾಮೀಣ ಪ್ರದೇಶಗಳು-1800 ರಿಂದ 2000ರೂ

ಪ್ರೌಡಶಾಲೆಗಳು

ಬೆಂಗಳೂರು,ಮೈಸೂರು, ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳು ವಾರ್ಷಿಕವಾಗಿ 13,130ರೂ

ಜಿಲ್ಲಾ ವ್ಯಾಪ್ತಿ-600೦ರೂ

ತಾಲ್ಲೂಕು ವ್ಯಾಪ್ತಿ -5200ರೂ

ಗ್ರಾಮೀಣ ಪ್ರದೇಶಗಳು-4160ರೂ

ಪ್ರಿಯ ಓದುಗರೇ ಇದೊಂದು ಉಪಯುಕ್ತ ಮಾಹಿತಿ ಎಲ್ಲರಿಗೂ ಶೇರ್ ಮಾಡಿ ಉಪಯೋಗವಾಗಲಿ…