ಆರೋಗ್ಯ

ಕೋಳಿಯನ್ನು ತಿನ್ನುವುದರಿಂದ ಆಗುವ ಪರಿಣಾಮಗಳ ಬಗ್ಗೆ ನಿಮಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ …

By admin

November 11, 2017

ದೇಹವು ಹೊಸ ಪ್ರೋಟೀನ್‌ನ್ನು ಉತ್ಪತ್ತಿ ಮಾಡಲು(ಪ್ರೋಟೀನ್ ಪ್ರತಿಧಾರಣ) ಮತ್ತು ಹಾನಿಗೊಂಡ ಪ್ರೋಟೀನ್‌ಗಳನ್ನು ಮರುಪೂರಣ ಮಾಡಲು(ನಿರ್ವಹಣೆ) ಅಮೈನೋ ಆಮ್ಲದ ಅಗತ್ಯವಿದೆv ಆಹಾರದಲ್ಲಿನ ಪ್ರೋಟೀನ್ ಮೂಲಗಳೆಂದರೆ ಮಾಂಸ, ತೋಫು ಮತ್ತು ಇತರ ಸೋಯಾ ಪದಾರ್ಥಗಳು.

ಪ್ರೋಟೀನ್‌ನಲ್ಲಿನ ಕೆಲವು ಅಮೈನೋ ಆಮ್ಲಗಳನ್ನು ಗ್ಲೂಕೋಸ್ ಆಗಿ ಪರಿವರ್ತಿಸಿ ಗ್ಲುಕೊನಿಯೊಜೆನೆಸಿಸ್ ಎಂಬ ಪ್ರಕ್ರಿಯೆಯಾದ್ಯಂತ ಇಂಧನವಾಗಿ ಬಳಸಬಹುದು. ಇದು ಉಪವಾಸದ ಸಂದರ್ಭಗಳಲ್ಲಿ ಮಾಡಲ್ಪಡುತ್ತದೆ. ಇಂಥ ಪರಿವರ್ತನೆ ಪ್ರಕ್ರಿಯೆಯ ಬಳಿಕ ಉಳಿದ ಅಮೈನೋ ಆಮ್ಲಗಳು ಹೊರಹಾಕಲ್ಪಡುತ್ತವೆ.

ನಾನ್’ವೆಜ್ ಇಲ್ಲ ಅಂದರೆ ಒಂದು ತುತ್ತು ಅನ್ನ ಕೂಡ ತಿನ್ನಲಾಗದ ಜನರಿದ್ದಾರೆ. ಅಂತಹ ಜನರು ಈ ವಿಷಯವನ್ನು ತಿಳಿದುಕೊಳ್ಳದಿದ್ದರೆ ಅವರ ಆರೋಗ್ಯ ಕೈ ಕೊಡುವುದು ಗ್ಯಾರಂಟಿ. ಇದರಿಂದ ತಮ್ಮ ದೇಹವನ್ನು ಅಪಾಯಕ್ಕೆ ದೂಡಿದ ಹಾಗೆ… ಇತ್ತೀಚಿಗೆ ಕಡಿಮೆ ಸಮಯದಲ್ಲಿ ಕೋಳಿಯನ್ನು ಬೆಳೆಸಿ ಅತೀ ಲಾಭವನ್ನು ಪಡೆಯುವುದಕ್ಕಾಗಿ ಕೋಳಿಗಳಿಗೆ ಇಂಜೆಕ್ಷನ್ ಕೊಡುವುದು ತಿಳಿದಿದ್ದೆ.

ಕೋಳಿಯ ತೂಕ, ಬೆಳವಣಿಗಾಗಿ ಉಪಯೋಗಿಸುವ ಸ್ಟೆರಾಯಿಡ್ ನಮ್ಮ ಆರೋಗ್ಯವನ್ನು ತೀವ್ರವಾಗಿ ಹಾಳು ಮಾಡುತ್ತದೆ. ತಕ್ಷಣ ಅದರ ಪರಿಣಾಮ ತಿಳಿಯದಿದ್ದರೂ, ದೀರ್ಘಕಾಲದಲ್ಲಿ ಆರೋಗ್ಯವನ್ನು ತೀವ್ರವಾದ ಅಪಾಯಕ್ಕೆ ಒಡ್ಡಿದ ಹಾಗೆಯೇ…! ಕೋಳಿಯ ತೂಕ ಹಾಗೂ ಬೆಳವಣಿಗೆಗಾಗಿ ಸ್ಟೆರಾಯಿಡ್ಸ್ ಅನ್ನು ಕೋಳಿಯ ಕುತ್ತಿಗೆಗೆ ಹಾಗೂ ರೆಕ್ಕೆಗಳಿಗೆ ಕೊಡುತ್ತಾರೆ. ಕೋಳಿಯ ಶರೀರದ ಉಳಿದ ಭಾಗಗಳಿಗಿಂತ ಈ ಎರಡು ಭಾಗಗಳು ಅತ್ಯಂತ ಅಪಾಯಕಾರಿಯಾಗಿದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ಸಂಶೋಧನೆ ನಡೆಸಿರುವ ತಜ್ಞರ ಪ್ರಕಾರ ಕೊನೆಯಪಕ್ಷ ಕೋಳಿಯ ಆ ಎರಡು ಭಾಗವನ್ನಾದರೂ ತಿನ್ನದಿರುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಸ್ಟೆರಾಯಿಡ್ಪ್ರಭಾವ ಜಾಸ್ತಿ ಇರುವ ಚಿಕೆನ್ ತಿಂದರೆ ಆಗುವ ನಷ್ಟಗಳು ಈ ಕೆಳಗಿನಂತಿವೆ…..