ಆಟೋಮೊಬೈಲ್ಸ್

ಕೈಗಾರಿಕೆಗಳಿಂದಾಗಿ ಈ ಹಳ್ಳಿಯಲ್ಲಿ ಶವ ಸಂಸ್ಕಾರವನ್ನು ಮಾಡುವುದಕ್ಕು ಜಾಗವಿಲ್ಲ…..! ತಿಳಿಯಲು ಈ ಲೇಖನವನ್ನು ಓದಿ..

By admin

October 16, 2017

ಇದು ಒಂದೆಡೆ ಕೆಐಡಿಬಿ ಹುಚ್ಚಾಟಕ್ಕೆ ಹಿಡಿದ ಕೈಗನ್ನಡಿಯಾದರೆ ಮತ್ತೊಂದೆಡೆ ಇದು ಮನಬಂದಂತೆ ಭೂಮಿ ಕೊಟ್ಟವರು ಈಗ ಕೈ ಕೈ ಹಿಸುಕಿಕೊಳ್ಳುವಂತ ಪರಿಸ್ಥಿತಿ. ನಂಜನಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಒಂದು ಕಾಲದಲ್ಲಿ ಜಮೀನ್ದಾರರೆನಿಸಿಕೊಂಡವರಿಗೆ ಇಂದು ತಮ್ಮ ಕುಟುಂಬದವರ ಶವಸಂಸ್ಕಾರ ಮಾಡಲು ಯೋಚಿಸಬೇಕಾದ ದುರ್ಗತಿ ಒದಗಿಬಂದಿದೆ.

ಕೈಗಾರಿಕಾ ಅಭಿವೃಧ್ದಿಗೆ ಜಮೀನು ವಶಪಡಿಸಿಕೊಳ್ಳುವಾಗ ಸಾಮಾಜಿಕ ಅವಶ್ಯಕತೆಗಳಿಗೆ ಹಾಗೂ ಕನಿಷ್ಠ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡದಿದ್ದರೆ ಸಾಮಾನ್ಯ ಜನತೆ ಮೇಲೆ ಯಾವ ರೀತಿ ಆಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕಲ್ಲಹಳ್ಳಿ ಇದೀಗ ಇಂತಹ ಸಮಸ್ಯೆಗೆ ಸಿಲುಕಿ ನರಳುತ್ತಿದಾರೆ.

ಈ ಭಾಗದಲ್ಲಿ ಕಾರ್ಖಾನೆಗಳು ಪ್ರಾರಂಭವಾದಗಿನಿಂದಲು ಗ್ರಾಮಸ್ಥರು ಹಾಗೂ ಕಾರ್ಖಾನೆಗಳ ಆಡಳಿತ ವರ್ಗದ ನಡುವೆ ಗಲಾಟೆಗಳು ನಡೆಯುತ್ತಲೇ ಇರುತ್ತದೆ. ತಮ್ಮ ಊರಿಗೆ ಕಂಪನಿ ಬರುವುದರಿಂದ ಅನುಕೂಲವಾಗುತ್ತದೆ ಎಂದು ಕಾದಿದ್ದ ಜನತೆ ಈಗ ನಿರಾಸೆಯಿಂದಿದ್ದಾರೆ.

ಅಂತಹ ಹಳ್ಳಿಗಳಲ್ಲಿ ಕಲ್ಲಹಳ್ಳಿಯೂ ಒಂದಾಗಿದ್ದು, ಕೇವಲ 250 ಕುಟುಂಬವಿರುವ ಗ್ರಾಮದಲ್ಲಿ ಹಿಂದುಳಿದ ವರ್ಗದ ಜನರೇ ಹೆಚ್ಚು. ಈ ಹಳ್ಳಿ ಇಂದು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಇದ್ದ ಭೂಮಿಯನ್ನು ಕೆಐಎಡಿಬಿ ವಶಕ್ಕೆ ತೆಗೆದುಕೊಂಡ ಪರಿಣಾಮ ಸ್ಮಶಾನ ಜಾಗಕ್ಕೂ ಪರದಾಡುವಂತಾಗಿದೆ. ಇರುವ 20 ಗುಂಟೆ ಜಾಗದಲ್ಲೇ ಶವಸಂಸ್ಕಾರ ಮಾಡಲಾಗುತ್ತಿದೆಯಾದರೂ, ಮಳೆಗಾಲದಲ್ಲಿ ಸ್ಮಶಾನಕ್ಕೆ ಹೋಗಲು ಸಮಸ್ಯೆಯಾಗುತ್ತಿದೆ.

ಈಗ ಇರುವ ಜಾಗ ಕಪಿಲಾ ನದಿ ದಡದಲ್ಲಿದ್ದು ಕೇವಲ 20 ಗುಂಟೆಯಷ್ಟಿದೆ. ಗ್ರಾಮದ ಎಲ್ಲ ಜನಾಂಗದವರು ಇಲ್ಲಿಯೇ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ ನದಿ ನೀರು ಹೆಚ್ಚಾದಾಗ ಶವ ಸಂಸ್ಕಾರಕ್ಕೆ ತಡೆಯಾಗುತ್ತದೆ. ಆದ್ದರಿಂದ ನಾವು ನೀಡಿರುವ ಭೂಮಿಯಲ್ಲಿ ಸರಕಾರಿ ಖರಾಬ್ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡುವಂತೆ ಈವರೆಗೆ ಮಾಡಿದ್ದ ಮನವಿಗೆ ಯಾರೂ ಕೂಡ ಸ್ಪಂಧಿಸಿಲ್ಲ.

ಇದರ ನಡುವೆ ಈ ಭಾಗದಲ್ಲಿರುವ ಸುಮಾರು 50ಕ್ಕೂ ಹೆಚ್ಚು ವಿವಿಧ ಕಾರ್ಖಾನೆಗಳು ಸುತ್ತಲಿನ ಪರಿಸರವನ್ನು ಸಂಪೂರ್ಣ ಹಾಳುಮಾಡಿದೆ. ಕೆಲವರು ಕಾರ್ಖಾನೆಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ನೇಗಿಲು ಬಿಟ್ಟು ಯಂತ್ರಗಳ ಹಿಂದೆ ಸಾಗಿದ್ದಾರೆ. ಇನ್ನೂ ಕೆಲವರು ಅಂಗೈಯಗಲದ ಜಾಗದಲ್ಲೇ ಜೀವನ ನಡೆಸುತ್ತಿದ್ದಾರೆ. ಕಾರ್ಖಾನೆಗಳಿಂದ ನಿತ್ಯ ರಾಸಾಯನಿಕ ಮಿಶ್ರಿತ ನೀರು ಸಣ್ಣ ಕಾಲುವೆಯಲ್ಲಿ ಬಿಡುವುದರಿಂದ ಜಾನುವಾರು ಗಳು ಕುಡಿದು ಸಾವನ್ನಪ್ಪಿವೆ. ಆದರೆ, ಈವರೆಗೆ ಇದಕ್ಕೆ ಪರಿಹಾರವೇ ದೊರೆತಿಲ್ಲ ಎಂಬುದು ಗ್ರಾಮಸ್ಥರ ಅಳಲು.ಹೀಗೆ ಖಾರ್ಕನೆಗಳು ಹಲ್ಲಿಗಲ್ಲನ್ನು ನಾಶ ಮಾಡುತ್ತಿದ್ದರೆ.