ಆರೋಗ್ಯ

ಕಾಲುಗಳ ಸೆಳೆತದಿಂದ ನಿಮ್ಮ ನಿದ್ದೆ ಹಾಳಾಗಿದೆಯೇ..? ಪರಿಹಾರ ತಿಳಿಯಲು ಈ ಲೇಖನ ಓದಿ ..

966

ರಾತ್ರಿ ಹೊತ್ತು ಕಾಲುಸೆಳೆತವುಂಟಾಗಿ ನಿಮಗೆ ಮಧ್ಯೆ ಮಧ್ಯೆ ಎಚ್ಚರವಾಗುತ್ತಿದೆಯೇ..? ಹೀಗೆ ಸೆಳೆತ ಉಂಟಾಗಲು ಹಲವಾರು ಕಾರಣಗಳಿವೆ. ಮಧುಮೇಹ, ನರಗಳ ಬಲಹೀನತೆ, ಗರ್ಭಧಾರಣೆ ಹಾಗೂ ಡೀಹೈಡ್ರೇಶನ್(ನಿರ್ಜಲೀಕರಣ) ಮುಂತಾದ ಕಾರಣಗಳಿಂದ ಕಾಲುಗಳ ಸೆಳೆತ ಉಂಟಾಗಬಹುದು. ಇದರಿಂದ ನಿಮ್ಮ ರಾತ್ರಿಯ ನಿದ್ದೆ ಹಾಳಾಗುತ್ತಿದೆಯೇ…? ಹಾಗಾದರೆ, ಇಲ್ಲಿದೆ ನೋಡಿ ಸುಲಭ ಪರಿಹಾರ.

ವಿಂಟರ್ ಗ್ರೀನ್ ಆಯಿಲ್ :-
ಮೀಥೈಲ್ ಸಿಲಿಕೇಟ್ ಹೊಂದಿರುವ ವಿಂಟರ್ ಗ್ರೀನ್ ಆಯಿಲ್ ನೋವು ನಿವಾರಕವಾಗಿ ಕೆಲಸಮಾಡುತ್ತದೆ. ಮೀಥೈಲ್ ಸಿಲಿಕೇಟ್ ರಕ್ತ ಪ್ರಸರಣವನ್ನು ಉತ್ತೇಜಿಸುತ್ತದೆ.

ಈ ಎಣ್ಣೆಯೊಂದಿಗೆ ಸ್ವಲ್ಪ ಆಲೀವ್ ಅಯಿಲ್ ಅಥವಾ ಬಾದಾಮಿ ಎಣ್ಣೆ ಬೆರೆಸಿ ಕಾಲುಗಳನ್ನು ಮಸಾಜ್ ಮಾಡುವುದರಿಂದ ಸೆಳೆತ ಕಡಿಮೆಯಾಗುತ್ತದೆ.

ವಿಟಮಿನ್-ಇ :-

ಮುಚ್ಚಿಕೊಂಡಿರುವ ನರಗಳಲ್ಲಿ ರಕ್ತ ಪ್ರಸರಣ ಸರಿಯಾಗಿ ಆಗದೆ, ರಾತ್ರಿವೇಳೆ ಕಾಲುಗಳ ಸೆಳೆತ ಉಂಟಾಗುತ್ತದೆ. ವಿಟಮಿನ್ -ಇ ಅಧಿಕವಾಗಿರುವ ಬಾದಾಮಿ, ಸ್ಪಿನಾಚ್ ಹಾಗೂ ಅವಕಾಡೋ ಗಳನ್ನು ತಿನ್ನುವುದರಿಂದ , ನರಗಳಲ್ಲಿ ರಕ್ತ ಪ್ರಸಾರ ಸುಗಮವಾಗುತ್ತದೆ. ವಿಟಮಿನ್-ಇ ಸಪ್ಲಿಮೆಂಟ್ ಗಳನ್ನೂ ಉಪಯೋಗಿಸಬಹುದು.

ನೀರು :- ಪ್ರತೀದಿನ 8 ಲೋಟ ಶುದ್ಧನೀರಿನೊಂದಿಗೆ ನಿಂಬೆ ರಸ ಬೆರೆಸಿ ಕುಡಿಯಬೇಕು. ಒಂದು ಲೋಟದಲ್ಲಿ ನಿಂಬೆ ರಸ ಬೆರೆಸಿರುವ ನೀರನ್ನು ನಿಮ್ಮ ಬಳಿ ಇಟ್ಟುಕೊಂಡು ಬಾಯರಿಕೆ ಆದಾಗಲೆಲ್ಲಾ ಸ್ವಲ್ಪ ಸ್ವಲ್ಪ ಕುಡಿಯಬೇಕು

ಶಾಖ : –ಕಾಲು ಸೆಳೆತದಿಂದ ನೋವು ಕಡಿಮೆಯಾಗಲು ವಿದ್ಯುತ್ ಪ್ಯಾಡ್ ಗಳನ್ನು ಉಪಯೋಗಿಸಿ. ಇದರಿಂದ ರಕ್ತ ಪ್ರಸಾರ ಹೆಚ್ಚಾಗುತ್ತದೆ.

15-20 ನಿಮಿಷಗಳ ಕಾಲ ಉಪಯೋಗಿಸಿದರೆ ಸಾಕು. ಬಿಸಿ ನೀರಿಗೆ ಸ್ವಲ್ಪ ಎಪ್ಸಮ್ ಸಾಲ್ಟ್ ಬೆರೆಸಿ ಶಾಖ ನೀಡುವುದರಿಂದಲೂ ನೋವು ಕಡಿಮೆಯಾಗುತ್ತದೆ.

ಎಲೆಕ್ಟ್ರೋಲೈಟ್ :-

ದೇಹಕ್ಕೆ ಎಲೆಕ್ಟ್ರೋಲೈಟ್ ಗಳು ಅತ್ಯವಶ್ಯಕ. ಸೋಡಿಯಮ್, ಪೊಟಾಶಿಯಮ್,ಕ್ಯಾಲ್ಶಿಯಮ್ ಹಾಗೂ ಮೆಗ್ನೀಶಿಯಮ್ ಮುಂತಾದ ಖನಿಜಗಳ ಕೊರತೆಯಿಂದಾಗಿ ಕಾಲುಗಳ ಸೆಳೆತ ಉಂಟಾಗುತ್ತದೆ. ಈ ಎಲ್ಲಾ ಎಲೆಕ್ಟ್ರೋಲೈಟ್ ಗಳನ್ನು ಒಳಗೊಂಡಿರುವ ಆಹಾರ ಸೇವಿಸುವುದು ಉತ್ತಮ.

ಸ್ಟ್ರೆಚಿಂಗ್ : –ಒಂದು ವೇಳೆ ನಿಮಗೆ ಕಾಲಿನ ಸೆಳೆತವುಂಟಾಗಿ ರಾತ್ರಿಯಲ್ಲಿ ಎಚ್ಚರವಾದರೆ, ಕಾಲುಗಳನ್ನು ಸ್ಟ್ರೆಚ್ ಮಾಡಬೇಕು. ಇದು ಸ್ವಲ್ಪ ನೋವನ್ನು ಉಂಟುಮಾಡುತ್ತದೆ. ಪಾದಗಳನ್ನು ಹಿಂದೆ,ಮುಂದೆ ಆಡಿಸಬೇಕು. ಹೀಗೆ ಮಾಡುವುದರಿಂದ ಕಾಲುಗಳ ಸೆಳೆತ ಕಡಿಮೆಯಾಗುತ್ತದೆ.

ಕಾಲುಗಳ ಸೆಳೆತ ನಿಮ್ಮ ರಾತ್ರಿ ನಿದ್ದೆಯನ್ನು ಹಾಳುಗೆಡವುತ್ತದೆ. ಸಾಕಷ್ಟು ಶುದ್ದನೀರು, ಸತ್ವಯುತ ಆಹಾರ ಸೇವನೆ, ಸ್ಟ್ರೆಚ್ಚಿಂಗ್, ಮಸಾಜು ಮಾಡುವುದು ಮುಂತಾದುವುಗಳಿಂದ ಸೆಳೆತವನ್ನು ಕಡಿಮೆ ಮಾಡಿಕೊಂಡು ಆರಾಮವಾಗಿರಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • inspirational

    ಮಗನ ಟಿಕ್‌ಟಾಕ್ ಹುಚ್ಚು – ಸಾಸ್ ಚೆಲ್ಲಿ ಅಮ್ಮನಿಗೆ ಕಣ್ಣೀರು ಬರುವಂತೆ ಮಾಡಿದ ಪುತ್ರ..!

    ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…

  • ಸುದ್ದಿ

    ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕಾಗಿ ಬೈಕ್​ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರು…!

    ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ಧಾರೆ. ಜೊತೆಗೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದಾರೆ. 6 ಬಾರಿ ಶಾಸಕರಾಗಿರುವ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆ ಅವರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಬೈಕ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ತಿಪ್ಪಾರೆಡ್ಡಿ ಅಭಿಮಾನಿ ಮಧು ಎಂಬುವವರ ಸ್ಕೂಟಿ ಟೈಯರ್​ಗೆ ಬೆಂಕಿ ಹಚ್ಚಲು ಪೊಲೀಸರು ಬಿಡದ ಕಾರಣ,…

  • ಸುದ್ದಿ

    ಗಣಪತಿಗೆ ಮಾನವ ಮುಖ ಇರುವ ಜಗತ್ತಿನ ಏಕೈಕ ದೇವಾಲಯ! ಇಲ್ಲಿ ಗಜಮುಖನಿಗಲ್ಲ ನರ ಮುಖದ ಗಣಪತಿಗೆ ನಡೆಸಲಾಗುತ್ತದೆ ಪೂಜೆ…!!

    ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….

  • ಸುದ್ದಿ

    ಎರಡಕ್ಕಿಂತ ಹೆಚ್ಚು ಮದ್ವೆ ಆಗಿಲ್ಲ ಅಂದ್ರೆ, ಜೈಲಿಗೆ ಹೋಗಲು ರೆಡಿಯಾಗಿ!ಎಲ್ಲಿ ಗೊತ್ತಾ?ಮುಂದೆ ಓದಿ…

    ಒಂದು ಮದುವೆಯಾಗಿ ಸಂಸಾರ ಹೇಗಪ್ಪಾ ಮಾಡೋದು ಅನ್ನುತ್ತಿರುವ ಈ ದೇಶದ ಪುರುಷರಿಗೆ ಈ ದೇಶದ ಒಂದು ಕಾನೂನು ಬಿಸಿ ತುಪ್ಪದಂತಾಗಿದೆ.

  • ಮನರಂಜನೆ

    ಮಜಾಭಾರತಕ್ಕೆ ಬಂದ ಜೂನಿಯರ್ ದರ್ಶನ್ ನೋಡಿ ಶಾಕ್ ಆದ ರಚಿತಾ ರಾಮ್!ಜೂನಿಯರ್ ದರ್ಶನ್ ನಲ್ಲಿ ಇಟ್ಟ ಬೇಡಿಕೆ ಏನು ಗೊತ್ತಾ..?

    ಪ್ರತಿಯೊಬ್ಬ ಸ್ಟಾರ್ ನಟರಂತೆ ಕಾಣುವ ಒಬ್ಬೊಬ್ಬ ಜೂನಿಯರ್ ನಟ ಇರುತ್ತಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಹಾವ-ಭಾವ ನೋಡಿ ಅವರಂತಯೇ ಮಾತನಾಡುವುದು, ಲುಕ್ ಹಾಗೂ ವಾಕಿಂಗ್ ಸ್ಟೈಲ್ ಅನ್ನು ಅನುಸರಿಸುತ್ತಾರೆ. ಈಗ ಅದೇ ರೀತಿ ಜೂನಿಯರ್ ದರ್ಶನ್ ನೋಡಿ ನಟಿ ರಚಿತಾ ರಾಮ್ ಶಾಕ್ ಆಗಿದ್ದರು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಮುಗಿದ ನಂತರ ಇದೀಗ ಮಜಾಭಾರತ ಸೀಸನ್ ಮೂರು ಶುರುವಾಗಿದೆ.. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರಂತೆಯೇ ಕಾಣುವ ಜೂನಿಯರ್ ದರ್ಶನ್ ಬಂದಿದ್ದರು. ಅಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 1 ಫೆಬ್ರವರಿ, 2019 ನೀವು ಇಂದು ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು…