ಸುದ್ದಿ

ಕರ್ನಾಟಕಕ್ಕೆ ಮೊಟ್ಟ ಮೊದಲ ಬಾರಿಗೆ ಸಿಗಲಿದೆ ಎಲೆಕ್ಟ್ರಿಕ್ ಲೋಕೋ ಶೆಡ್: ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ….!

By admin

May 21, 2019

ಸೌತ್ ವೆಸ್ಟ್ರನ್ ರೈಲ್ವೆ ವಲಯದಲ್ಲಿ ರೈಲು ಹಳಿಗಳ ವಿದ್ಯುತೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಇಂಜಿನ್ ಗಳನ್ನು ನಿರ್ವಹಣೆ ಮಾಡುವ ವ್ಯವಸ್ಥೆ ಪ್ರಾಮುಖ್ಯತೆ ಪಡೆಯಲಿದೆ.

ಪ್ರಸ್ತುತ ಕೆ.ಆರ್ ಪುರಂ ನಲ್ಲಿರುವ ಡೀಸೆಲ್ ಲೋಕೋ ಶೆಡ್ ನ್ನು ಎಲೆಕ್ಟ್ರಿಕ್ ಲೋಕೋ ಶೆಡ್ ನ್ನಾಗಿ ಮಾರ್ಪಾಡು ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಲೋಕೋ ಶೆಡ್ ಸ್ಥಾಪನೆಯಾಗಲಿದೆ. ಬೆಂಗಳೂರು ಮೂಲದ ಬಾಲಾಜಿ ಬಿಲ್ಡರ್ಸ್ ಗೆ ಈ ಗುತ್ತಿಗೆ ಲಭ್ಯವಾಗಿದ್ದು, ವರ್ಷಾಂತ್ಯ ಅಥವಾ 2020 ರ ಜನವರಿಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

1983 ರಲ್ಲಿ ಜಾಫರ್ ಶರೀಫ್ ರೈಲ್ವೆ ಸಚಿವರಾಗಿದ್ದಾಗ ಕೆಆರ್ ಪುರಂ ಗೆ ಡೀಸೆಲ್ ಲೊಕೋ ಶೆಡ್ ಸ್ಥಾಪನೆಯಾಗಿತ್ತು. ಡಿಸೆಲ್ ಶೆಡ್ ಗೆ ಲಭ್ಯವಿರುವ ಮೂಲಸೌಕರ್ಯದ ಶೇ.80 ರಷ್ಟನ್ನು ಎಲೆಕ್ಟ್ರಿಕ್ ಶೆಡ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಬಿ.ಮುರಳಿ ಕೃಷ್ಣ ಅವರು ಡಿಸೆಲ್ ಲೋಕೋ ಶೆಡ್ ಗೆ ಭೇಟಿ ನೀಡಿದ್ದ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಎಲೆಟ್ರಿಕ್ ಲೋಕೋ ಶೆಡ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಶೇ.20 ರಷ್ಟು ಮೂಲಸೌಲರ್ಯವನ್ನು ಹೊಸದಾಗಿ ನಿರ್ಮಿಸಬೇಕಿದ್ದು, ಇದಕ್ಕಾಗಿ ಒಟ್ತಾರೆ 10 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಮುರಳಿ ಕೃಷ್ಣ ಹೇಳಿದ್ದಾರೆ. ಎರಡು ಹೊಸ ಶೆಡ್ ಗಳು ನಿರ್ಮಾಣವಾಗಲಿದೆ. ಓವರ್ ಹೆಡ್ ಲೈಟ್, ಓವರ್ ಹೆಡ್ ಲೈನ್, ಟ್ರಾಕ್ಷನ್ ಮೋಟಾರ್, ಟ್ರಾನ್ಸ್ಫಾರ್ಮರ್, ಇಂಜಿನ್ ಗಳನ್ನು ಮೇಲೆತ್ತುವ 5 ಟನ್ ಕ್ರೇನ್ ವಿಭಾಗಗಳು ಸ್ಥಾಪನೆಯಾಗಲಿವೆ.