ಸುದ್ದಿ

ಕಣ್ಣಲ್ಲಿ ನೀರು ತುಂಬುತ್ತೆ ಆ ಪುಟ್ಟ ಬಾಲಕನ ಮನಕಲಕುವ ಕಥೆ…..!

By admin

September 12, 2019

ಅನಾಥಶ್ರಮಗಳಲ್ಲಿ ಆಗುತ್ತಿರುವ ಅನಾಚಾರವನ್ನು ಬಯಲಿಗೆಳೆದ ಹಾಗೂ ಭಾರಿ ಹೋರಾಟದ ಬಳಿಕ ಡೌನ್ ಸಿಂಡ್ರೋಮ್ ಇರುವ ಬಾಲಕನನ್ನು ದತ್ತು ಪಡೆದ ಯುವಕನ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಹ್ಯೂಮನ್ಸ್ ಆಫ್ ಮುಂಬೈ 26 ವರ್ಷದ ಆದಿತ್ಯ ತಿವಾರಿ‌ ಅವರ ಬಗ್ಗೆ ಪೋಸ್ಟ್ ಮಾಡಿದೆ. 2016ರಲ್ಲಿ ತಿವಾರಿ‌ 26ನೇ ವಯಸ್ಸಿಗೆ ಮಗುವನ್ನು ದತ್ತು ಪಡೆಯುವ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದಲ್ಲಿ ದತ್ತು ಪಡೆದ ವ್ಯಕ್ತಿಯಾಗಿ ದಾಖಲೆ ನಿರ್ಮಿಸಿದರು.

ಅಷ್ಟಕ್ಕೂ ಆದಿತ್ಯ ದತ್ತು ಪಡೆದ ಬಾಲಕ ಡೌನ್ ಸಿಂಡ್ರೋಮ್ ಎಂಬ ಅನುವಂಶೀಯ ಖಾಯಿಲೆಯಿಂದ ಬಳಲುತ್ತಿದ್ದ. ಒಮ್ಮೆ ಆದಿತ್ಯ ತಮ್ಮ ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಅನಾಥಾಶ್ರಮಕ್ಕೆ ಹೋಗಿದ್ದಾಗ ಈ ಬಾಲಕನನ್ನು ನೋಡಿದ್ದಾರೆ. ಆದರೆ ಈ ಬಾಲಕನೊಂದಿಗೆ ಯಾರೊಬ್ಬರೂ ಸಮಯ ಕಳೆಯುತ್ತಿರಲಿಲ್ಲ.

ಆದ್ದರಿಂದ ಆದಿತ್ಯ ದತ್ತು ಪಡೆಯಲು ಮುಂದಾದರು. ಆದರೆ ದತ್ತು ಪಡೆಯಲು 30 ವರ್ಷ ಆಗದೇ ಇರುವುದರಿಂದ ಕಾನೂನು ಸಮಸ್ಯೆ ಎದುರಾಯಿತು.

ದತ್ತು ಪಡೆಯುವ ಪ್ರಕ್ರಿಯೆಯಲ್ಲಿ ಹಲವು ಬಾರಿ ಅನಾಥಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿ ಮಕ್ಕಳ ಸಾಕಾಣಿಕೆ ಹಾಗೂ ಅಂಗಗಳನ್ನು ಕದಿಯುತ್ತಿರುವ‌ ಬಗ್ಗೆ ಅನುಮಾನ ಬಂದಿದೆ.

ಹಲವು ಸಂಘ-ಸಂಘಟನೆ ಹಾಗೂ ಸರಕಾರಕ್ಕೆ ಪತ್ರ ಬರೆದ ಪರಿಣಾಮ ಇದೀಗ ಆದಿತ್ಯ, ಬಾಲಕನನ್ನು ದತ್ತು ಪಡೆಯಲು ಅವಕಾಶ ಸಿಕ್ಕಿದೆ. ಇದರೊಂದಿಗೆ ಅನಾಥಾಶ್ರಮಗಳಲ್ಲಿ ನಡೆಯುವ ಅನಾಚಾರದ ಬಗ್ಗೆ ತನಿಖೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.