ಸುದ್ದಿ

ಔಟ್ ಡೇಟೆಡ್ ನೂಡಲ್ಸ್ ನಿಂದ ಮನೆ ಕಟ್ಟಿ ಮಲಗಿದ ಭೂಪ..!

By admin

September 18, 2019

ನೂಡಲ್ಸ್ ಎಲ್ಲರಿಗೂ ಇಷ್ಟ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ನೂಡಲ್ಸ್ ತಿನ್ನಲು ಇಷ್ಟಪಡ್ತಾರೆ. ತಿನ್ನುವ ಈ ನೂಡಲ್ಸನ್ನು ವ್ಯಕ್ತಿಯೊಬ್ಬ ಮನೆ ಕಟ್ಟಲು ಬಳಸಿದ್ದಾನೆ. ಯಸ್, ಇದು ಸತ್ಯ.

ಚೀನಾದ ಜಾಂಗ್ ಎಂಬ ವ್ಯಕ್ತಿ ನೂಡಲ್ಸ್ ನಿಂದ ಮನೆ ನಿರ್ಮಾಣ ಮಾಡಿದ್ದಾನೆ. ಶೀಘ್ರವೇ ತಂದೆಯಾಗಲಿರುವ ಜಾಂಗ್, ಹುಟ್ಟುವ ಮಗುವಿಗಾಗಿ ಈ ಮನೆ ನಿರ್ಮಾಣ ಮಾಡಿದ್ದಾನೆ.

ಅವಧಿ ಮೀರಿದ 2000 ನೂಡಲ್ಸ್ ಪ್ಯಾಕ್ ನಿಂದ ಈ ಮನೆ ನಿರ್ಮಾಣವಾಗಿದೆಯಂತೆ. ಜಾಂಗ್, ಮನೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ನಾಲ್ಕು ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಮನೆಯೊಳಗೆ ಹಾಸಿಗೆ ಹಾಸಿ ಒಬ್ಬ ವ್ಯಕ್ತಿ ಆರಾಮವಾಗಿ ಮಲಗಬಹುದು. ಮನೆಗೆ ಕರೆಂಟ್ ಕೂಡ ಹಾಕಲಾಗಿದೆ. ಕಿಟಕಿ ಕೂಡ ಮನೆಗಿದೆ. ಜಾಂಗ್ ಸ್ನೇಹಿತ ನೂಡಲ್ಸ್ ಮಾರಾಟ ಮಾಡ್ತಾನಂತೆ. ಆತನ ಬಳಿ ಅವಧಿ ಮೀರಿದ್ದ ನೂಡಲ್ಸ್ ಪ್ಯಾಕ್ ಗಳಿತ್ತಂತೆ. ಅದನ್ನು ತೆಗೆದುಕೊಂಡು ಜಾಂಗ್ ಮನೆ ನಿರ್ಮಾಣ ಮಾಡಿದ್ದಾನೆ.