ಸ್ಪೂರ್ತಿ

ಓದಿಲ್ಲ,ಬರೆದಿಲ್ಲ ಈ ಅಜ್ಜಿಗೆ ಸಿಕ್ಕಿದೆ ರಾಷ್ಟ್ರ ಪ್ರಶಸ್ತಿ ಗರಿಮೆ..!ಎಲ್ಲರಿಗೂ ಸ್ಪೂರ್ತಿ ಈ ಅಜ್ಜಿ…ತಿಳಿಯಲು ಈ ಲೇಖನ ಓದಿ…

376

ಈ ಅಜ್ಜಿಗೆ ಬರೋಬ್ಬರಿ 80 ವರ್ಷ ವಯಸ್ಸು ಆದ್ರೂ ಇವರು ಛಲ ಬಿಡದೆ ಕೃಷಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇವರ ಒಂದು ಸಾಧನೆಯು ಪ್ರತಿಯೊಬ್ಬ ರೈತನಿಗೆ ಸ್ಫೂರ್ತಿ ಅನ್ನಬಹುದು .ಈ ಅಜ್ಜಿಯ ಹೆಸರು ಲಕ್ಷ್ಮೀಬಾಯಿ ಮಲ್ಲಪ್ಪ ಜುಲ್ಪಿ ಎಂಬುದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದವರು ಇವರಿಗೆ 80 ವರ್ಷ ವಯಸ್ಸು. ಮತ್ತೆ ಇವರಿಗೆ ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳಿದ್ದಾರೆ. ಈ ವಯಸ್ಸಿನಲ್ಲೂ ಕೂಡ ಇವರ ಕಾರ್ಯ ವೈಖರಿಯನ್ನು ನೋಡಿದರೆ ಎಂತವರಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಆ ರೀತಿಯಲ್ಲಿ ಕೃಷಿ ಚಟುವಟಿಕೆಯ ಕೆಲಸವನ್ನು ಮಾಡುತ್ತಾರೆ ಈ ಲಕ್ಶ್ಮಿಬಾಯಿ.

ಲಕ್ಶ್ಮಿಬಾಯಿಯವರು ತಮ್ಮ ತವರುಮನೆಯ ಸೋರಗಾಂವಿ ಗ್ರಾಮದಿಂದ ದೇಶೀಯ ಬದನೆ ತಳಿಗಳನ್ನ ತಂದು ತಮ್ಮ ಗಂಡನ ಮನೆಯಲ್ಲಿ ಬೆಳೆಯುವ ಮೂಲಕ ಅದ್ಭುತ ಸಾಧನೆಯನ್ನ ಮಾಡಿದ್ದಾರೆ. ಇವರು ಬೆಳೆಯುವಂತ ದೇಶಿಯ ಬದನಕಾಯಿಗೆ ಉತ್ತಮ ಮಾರ್ಕೆಟಿಂಗ್ ಇದ್ದು ಸುತ್ತ ಮುತ್ತಲಿನ ರೈತರೆಲ್ಲರೂ ಇವರನ್ನು ನೋಡಿ ಪ್ರೇರೇಪಿತರಾಗಿದ್ದರೆ ಎನ್ನಲಾಗುತ್ತದೆ.

ಲಕ್ಷ್ಮೀಬಾಯಿಯವರ ನಿತ್ಯದ ಕಾಯಕ:-

ದಿನಾ ಬೆಳಗಾದರೆ ಸಾಕು ಎದ್ದು ದನಕರುಗಳಿಗೆ ನೀರು ಹಾಕೋದು, ಹೊಲಗದ್ದೆಗಳಲ್ಲಿ ಬದನೆಕಾಯಿಗಳ ಬೆಳೆ ನೋಡಿಕೊಳ್ಳೋದು ಮತ್ತು ದೇಶಿಯ ಬೀಜಗಳನ್ನ ಸಂರಕ್ಷಣೆ ಮಾಡೋದು ಹಾಗು ನಿತ್ಯವೂ ಕೃಷಿ ಕಾರ್ಯದಲ್ಲಿ ತೊಡಗುವಂತ ಕೆಲಸವನ್ನು ಮಾಡುತ್ತಾರೆ.

ಹೊಲದಲ್ಲಿ ಬದನೆಕಾಯಿ ಹೆಚ್ಚೋದು, ಬೆಳೆಗೆ ನೀರುಣಿಸೋದು, ಕಸ ಕೀಳೋದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅಲ್ಲದೆ ಹೊಲದಲ್ಲಿ ಕೆಲ್ಸ ಮಾಡೋರನ್ನ ತಮ್ಮ ಮಕ್ಕಳಂತೆ ನೋಡಿಕೊಳ್ತಾರೆ.

ವಿಶೇಷ ಕಾಯಕ:-

ಲಕ್ಷ್ಮೀಬಾಯಿಯವರು ಬೀಜ ಬ್ಯಾಂಕ​ನ್ನು ತಮ್ಮ ಮನೆಯಲ್ಲಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಜಾತಿಯ ದೇಶಿಯ ತಳಿಗಳ ಬೀಜಗಳನ್ನ ಮಣ್ಣಿನ ಮಡಿಕೆಗಳಲ್ಲಿಟ್ಟು ಸಂರಕ್ಷಿಸಿ ಇತರರಿಗೆ ಮಾದರಿಯಾಗಿದ್ದಾರೆ. ಇನ್ನು ಕೃಷಿ ಸಾಧನೆ ಮಾಡಿರೋ ಕುಟುಂಬದಲ್ಲಿ ಪತಿ ಮಲ್ಲಪ್ಪಗೆ ರಾಜ್ಯ ಪ್ರಶಸ್ತಿ, ಪುತ್ರ ರುದ್ರಪ್ಪಗೆ ಮಹಿಂದ್ರಾ ನ್ಯಾಷನಲ್ ಅವಾರ್ಡ, ಐಎಆರ್ಐ ಪ್ರಶಸ್ತಿಗಳು ಬಂದಿದ್ದು, ಇಡಿ ಕುಟುಂಬ ಕೃಷಿ ಸಾಧಕ ಕುಟುಂಬವಾಗಿ ಹೆಸರುವಾಸಿಯಾಗಿದೆ.

ಕಳೆದ ಹಲವು ವರ್ಷಗಳ ಸಾಧನೆ ಮತ್ತು ಬದನೆ ಸಂಶೋಧನೆಗಾಗಿ ನ್ಯೂ ದೆಹಲಿಯ ನ್ಯಾಷನಲ್​ ಇನೋವೇಷನ್​ ಪೌಂಡೇಶನ್ ವತಿಯಿಂದ ಪ್ರಶಸ್ತಿಗೂ ಭಾಜನರಾಗಿದ್ದು, ದೇಶಿಯ ತಳಿ ಸಂರಕ್ಷಣೆಗಾಗಿ 2015ನೇ ಸಾಲಿನ ರಾಷ್ಟ್ರಪ್ರಶಸ್ತಿಯನ್ನ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರಿಂದ ಪಡೆದು ಗೌರವಕ್ಕೆ ಪಾತ್ರರಾಗಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ATM ನಿಂದ ಬರಲಿದೆ ಕರೋನ ವೈರಸ್, ಹೇಗೆ ಮತ್ತು WHO ಹೇಳಿದ್ದೇನು ನೋಡಿ.

    ದೇಶದಲ್ಲಿ ಕಳೆದ ಒಂದು ವಾರದಲ್ಲಿ ಭಾರಿ ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಆಗಿದೆ, ಹೌದು ದೂರದ ಚೀನಾ ದೇಶದಲ್ಲಿ ಹುಟ್ಟಿ ಇಡೀ ಪ್ರಪಂಚಕ್ಕೆ ಆತಂಕವನ್ನ ಉಂಟುಮಾಡಿರುವ ಈ ಕರೋನ ಈಗ ನಮ್ಮ ದೇಶದಲ್ಲಿ ಕೂಡ ಕಾಣಿಸಿಕೊಂಡಿದ್ದು ಜನರು ಭಯಭಿತರಾಗಿದ್ದಾರೆ. ಹೌದು ದೆಹಲಿಯಲ್ಲಿ ಇಬ್ಬರಿಗೆ ಈ ಕರೋನ ವೈರಸ್ ಪತ್ತೆಯಾಗಿದ್ದು ನಿನ್ನೆ ನಮ್ಮ ಕರ್ನಾಟಕದಲ್ಲಿ ದುಬೈನಿಂದ ಬಂದ ಒಬ್ಬ ವ್ಯಕ್ತಿಗೆ ಕರೋನ ವೈರಸ್ ಇರಿವುದು ತಿಳಿದು ಬಂದಿದ್ದು ಆತನಿಗೆ ಬೆಂಗಳೂರಿನಲ್ಲಿ ಚಿಕಿತ್ಸೆಯನ್ನ ನೀಡಲಾಗುತ್ತಿದೆ. ಇನ್ನು…

  • ದೇವರು-ಧರ್ಮ

    ಈ ದೇವಸ್ಥಾನದಲ್ಲಿ ದೇವರಿಗೆ ಕೊಡೋ ಕಾಣಿಕೆ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ..?ಏನದು..?ಮುಂದೆ ಓದಿ…

    ಹಿಂದೂ ರಾಷ್ರ ಭಾರತದಲ್ಲಿ ದೇವಾಲಯಗಳು, ಭಾರತದ ಜನರ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿವೆ.ಭಾರತದಲ್ಲಿ ಎಲ್ಲಿ ಹೋದರು ದೇವಾಲಯಗಳ ಕಾಣಸಿಗುತ್ತವೆ. ಜನ ಎಷ್ಟೇ ಕಷ್ಟ ಸುಖಗಳಿದ್ದರೂ ಮನಸ್ಸಿನ ನೆಮ್ಮದಿಗಾಗಿ ದೇವಾಲಯಗಳಿಗೆ ಹೋಗುತ್ತಾರೆ.

  • ಜ್ಯೋತಿಷ್ಯ

    ಮೀನ ರಾಶಿ ಜಾತಕರಿಗೆ ಸಮಸ್ಯೆಗಳಿಗೆ ಪರಿಹಾರಗಳು.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what 1. ಯಾರೇ ಕೊಟ್ಟಿರುವ…

  • ಸುದ್ದಿ

    ನವ ವಧು ವರರ ಮೇಲೆ ಲಕ್ಷಾಂತರ ರೂ ನೋಟುಗಳ ಸುರಿಮಳೆ ಮಾಡಿದ್ರು!ಈ ಸುದ್ದಿ ನೋಡಿ…

    ಮದುವೆಯಾದ ನವಜೋಡಿ ಮೇಲೆ ಪೋಷಕರು ಲಕ್ಷಾಂತರ ರೂ. ಹಣವನ್ನು ಸುರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಶಾಂತ್ ಕೋಟಾ ಹಾಗೂ ಮೇಘನಾ ಗೌಡ್ ಮಾರ್ಚ್ 17ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುಶಾಂತ್ ಕೋಟಾ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಹೈದರಾಬಾದ್‍ನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಈ ಮದುವೆಯ ವಿಡಿಯೋ ವೈರಲ್ ಆಗಿದೆ. ವರ ಹಾಗೂ ವಧುವಿನ ಪೋಷಕರು ನವಜೋಡಿ ಮೇಲೆ ಹಣದ ಹೊಳೆಯನ್ನೇ ಹರಿಸಲು ಒಂದು ದೊಡ್ಡ ಬಾಸ್ಕೆಟ್‍ನಲ್ಲಿ ನೋಟುಗಳನ್ನು ತೆಗೆದುಕೊಂಡು…

  • ಉಪಯುಕ್ತ ಮಾಹಿತಿ

    ಬ್ಯಾಂಕ್’ಗಳಿಂದ ಸಾಲ ಪಡೆದುಕೊಂಡ ಗ್ರಾಹಕರಿಗೆ ಸಿಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ..

    ಸಾಲಗಳಿಗೆ ವಿಧಿಸುವ ಬಡ್ಡಿ ದರವನ್ನು ನಿಗದಿಪಡಿಸಲು ವಾಣಿಜ್ಯ ಬ್ಯಾಂಕ್ ಗಳು ಏಪ್ರಿಲ್ 1 ರಿಂದ ಹೊಸ ವಿಧಾನ ಅಳವಡಿಸಿಕೊಂಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಅಲ್ಪಾವಧಿ ಬಡ್ಡಿ ದರಗಳನ್ನು ಕಡಿತ ಮಾಡಿದ ಸಂದರ್ಭದಲ್ಲಿ ಬ್ಯಾಂಕ್ ಗಳು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರಣದಿಂದ ಆರ್.ಬಿ.ಐ. ಸೂಚನೆಯಂತೆ ಏಪ್ರಿಲ್ 1, 2016 ರಿಂದ ಎಂ.ಸಿ.ಎಲ್.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಆಧಾರದ ಮೇಲೆ ಬದಲಾಗುವ ಬಡ್ಡಿದರದ ಸಾಲಗಳನ್ನು ನಿಧಿಗಳ ಮೇಲಿನ ಹೆಚ್ಚುವರಿ ವೆಚ್ಚವನ್ನಾಧರಿಸಿದ ಬಡ್ಡಿದರಕ್ಕೆ(MCLR) ಜೋಡಿಸಲಾಗುತ್ತದೆ. ಮೂಲ ದರ ಆಧರಿಸಿ…

  • ಸುದ್ದಿ, ಸ್ಪೂರ್ತಿ

    ಪ್ರಧಾನಮಂತ್ರಿ ಯೋಜನೆಯ ಲಾಭ ಪಡೆದು ಈ ಮಹಿಳೆ ಆಗಿದ್ದೇನು ಗೊತ್ತಾ?ಮರೆಯದೇ ಈ ಸುದ್ದಿ ನೋಡಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಯೋಜನೆಯೊಂದರ ಲಾಭ ಪಡೆದು ಮಧುರೈ ಮಹಿಳೆಯೊಬ್ಬಳು ಕೋಟ್ಯಾಧಿಪತಿಯಾಗಿದ್ದಾರೆ. ಅರುಲ್ಮೋಜಿ ಸರ್ವ್ನಾನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುದ್ರಾ ಯೋಜನೆ ಲಾಭ ಪಡೆದು ತನ್ನದೇ ಸ್ವಂತ ವ್ಯಾಪಾರ ಶುರು ಮಾಡಿದ್ದಾರೆ. ಅರುಲ್ಮೋಜಿ ಕೇವಲ 234 ರೂಪಾಯಿಗೆ ವ್ಯಾಪಾರ ಶುರು ಮಾಡಿದ್ದರು. ಈಗ ಕಂಪನಿ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ. ಪ್ರಧಾನ ಮಂತ್ರಿ ಕಚೇರಿಗೆ ಥರ್ಮೋಪ್ಲೆಕ್ಸ್  ಅವಶ್ಯಕತೆಯಿದೆ ಎಂಬುದು ಸರ್ಕಾರಿ ಇ-ಮಾರ್ಕೆಟ್ಪ್ಲೇಸ್ ನಿಂದ ಅರುಲ್ಮೋಜಿಗೆ ಗೊತ್ತಾಗಿದೆ. ತಕ್ಷಣ ಅರುಲ್ಮೋಜಿ ಈ ಬಗ್ಗೆ…