ಆರೋಗ್ಯ

ಏನಿದು ಗೋವುಗಳ ಹೊಟ್ಟೆಯ ಮೇಲೆ ದೊಡ್ಡದಾದ ರಂಧ್ರಗಳು..!ನಂಬೋದಿಲ್ಲ ಅಲ್ವಾ?ಈ ಲೇಖನಿ ಓದಿ ತಿಳಿಯುತ್ತೆ…

By admin

September 11, 2017

ಸ್ವಿಟ್ಜರ್ಲೆಂಡ್ನಲ್ಲಿರುವ ರೈತರು ತಮ್ಮ ಕೃಷಿ ಮೂಲ ಪದ್ದತಿಯನ್ನು ಉತ್ತಮಗೊಳಿಸಲು ಒಂದು ಹೊಸ ವಿಧಾನವೊಂದನ್ನು ಕಂಡುಕೊಂಡಿದ್ದಾರೆ. ಹೌದು, ನೀವು ಈ ವಿಷಯ ಕೇಳಿದ್ರೆ ಶಾಕ್ ಆಗ್ತೀರಾ!

ಏಕೆಂದ್ರೆ ಅವರು ಹೈನುಗಾರಿಕೆಯ ಭಾಗವಾಗಿ, ಹಸುಗಳ ಹೊಟ್ಟೆಯಲ್ಲಿ ದೊಡ್ಡ ಹೋಲ್ಗಳನ್ನು ಮಾಡಿದ್ದಾರೆ.ಸ್ವಿಟ್ಜರ್ಲೆಂಡ್ನಲ್ಲಿರುವ ಕೆಲವು ರೈತರು ಹೀಗೆ ಮಾಡುತ್ತಿರುವುದು ಏಕೆ ಎಂದು ಹಲವು ಜನರಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ವಿಜ್ಞಾನಿಗಳು ಈ ಹೋಲ್’ಗಳನ್ನು ಕ್ಯಾನುಲಾಗಳೆಂದು ಕರೆಯುತ್ತಾರೆ. ಕೆಲವು ಹಸುಗಳಿಗೆ ಈ ಕ್ಯಾನುಲಾಗಳನ್ನು ಅಳವಡಿಸಿ ಸಂಶೋಧನೆ ನಡೆಸಲಾಯಿತು. ಇದು ಗೋವಿನ ಆಯುಷ್ಯ ಹೆಚ್ಚಿಸಲು ಮಾಡಲಾಗುತ್ತದೆ.

ವಿಜ್ಞಾನಿಗಳಿಗೆ ಗೋವಿನ  ಒಳಭಾಗವನ್ನು ತಪಾಸಿಸಲು ಬಹಳ ಕಷ್ಟ ಆಗುತ್ತದೆ. ಅಂತಹ ವೇಳೆ ಗೊವಿನ ಶರೀರದಲ್ಲಿ ತೂತು ಮಾಡಲಾಗುತ್ತದೆ. ಗೋವಿನ ಹೊಟ್ಟೆ ಹೊರ ಜಗತ್ತಿನೊಂದಿಗೆ ಸಂಬಂಧ ಹೊಂದಿರುತ್ತದೆ. ಈ ತೂತನ್ನು ಒಂದು ಪ್ಲಾಸ್ಟಿಕ್ ರಿಂಗ್‍ನಿಂದ ಮುಚ್ಚಲಾಗುತ್ತದೆ.  ಈ ಸರ್ಜರಿ ನಡೆದು ಒಂದು ತಿಂಗಳಲ್ಲಿ ಗೋವು ಪೂರ್ಣ ಚೇತರಿಸಿಕೊಳ್ಳುತ್ತದೆ.

ಕೆಲವು ಹಸುಗಳಿಗೆ ಈ ಕ್ಯಾನುಲಾಗಳನ್ನು ಅಳವಡಿಸಿ ಸಂಶೋಧನೆ ಮಾಡಲಾಯಿತು. ಇದನ್ನು ಮಾಡುವ ಉದ್ದೇಶ ಏನೆಂದರೆ, ಹಸುವಿನ ಪೌಷ್ಠಿಕಾಂಶದ ಮತ್ತು ಪ್ರಾಣಿಗಳಿಗೆ ಆಹಾರವನ್ನು ಹೇಗೆ ಪ್ರಕ್ರಿಯೆಗೊಳಿಸಲು ರೈತರಿಗೆ ಸಾಧ್ಯವಾಗುತ್ತದೆ.

ಈ ಕ್ಯಾನುಲಾಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹಸುವಿನ ಹೊಟ್ಟೆಯ ಭಾಗದಲ್ಲಿ ಮಾಡಲಾಗುತ್ತದೆ. ಹಾಗೂ ಶಸ್ತ್ರ ಚಿಕಿತ್ಸೆ ನಂತರ ಹಸುಗಳಿಗೆ ಕೆಲವು ದಿನಗಳು ರೆಸ್ಟ್ ನೀಡಲಾಗುತ್ತದೆ. ರೆಸ್ಟ್ ಅವಧಿ ಮುಗಿದ ನಂತರ ಇಂತಹ ಹಸುಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

1920 ರ ದಶಕದಲ್ಲಿ ಈ ವಿಧಾನವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಯಿತು ಮತ್ತು ಇದು ಜಾನುವಾರಗಳ ತಳಿಗಳನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಈ ದೊಡ್ಡದಾದ ರಂಧ್ರ ತೆರೆದಂತೆ ಇಡಲು ರಬ್ಬರ್ ಗ್ಯಾಸ್ಕೆಟ್ ಅನ್ನು ಉಪಯೋಗಿಸುತ್ತಾರೆ. ಇದನ್ನು ವಿಶೇಷ ಕ್ಯಾಪ್ನೊಂದಿಗೆ ಮುಚ್ಚಲಾಗುತ್ತದೆ.

ಈ ಕಾರ್ಯವಿಧಾನಗಳಿಂದ ಹಸು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ರೈತರು ಸುಲಭವಾಗಿ ಹಸುಗಳಿಗೆ ಯಾವ ತರವಾದ ಆಹಾರ ಕೊಡಬೇಕು, ಎಷ್ಟು ಮಟ್ಟದಲ್ಲಿ ಕೊಡಬೇಕು ಮತ್ತು ಯಾವ ಆಹಾರ ಕೊಟ್ಟರೆ ಜೀರ್ಣವಾಗುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಈ ಈ ರಂಧ್ರಗಳಿಂದ ಹಸುಗಳ ಆಹಾರದ ಬಗ್ಗೆ ಅರಿಯಲು  ಮತ್ತು ಯಾವ ಆಹಾರ ಕೊಡಬೇಕೆಂದು ತಿಳಿಯಲು ಇದು ರೈತರಿಗೆ ತುಂಬಾ ಸಹಾವಾಗಿದೆ.

ಆದರೆ ಗೋವಿನ ಹೊಟ್ಟೆ ತೂತುಮಾಡುವ ಪ್ರಕ್ರಿಯೆಯನ್ನು PETA ವಿರೋಧಿಸುತ್ತದೆ ಕೂಡಾ. ಆದರೆ ಹೀಗೆ ತೂತು ಮಾಡುವ ಕಾರ್ಯ ಕೆಲವು ವರ್ಷಗಳಿಂದ ಪ್ರಚಲಿತದಲ್ಲಿದೆ. ಕೆಲವರು ಇಂತಹ ಸರ್ಜರಿಯಿಂದ ಗೋವಿಗೆ ಯಾವ ಹಾನಿಯಾಗುವುದಿಲ್ಲ ಎಂದು ಹೇಳುತ್ತಾರೆ.