ಸ್ಪೂರ್ತಿ

ಎಸ್ಸೆಸ್ಸೆಲ್ಸಿ ಓದಿದ್ದ ಭೂಪ… 7 ಸರಕಾರಿ ಹುದ್ದೆಗಳ ಕೆಲಸಕ್ಕೆ ಸೇರಿದ್ದು ಹೇಗೆ ಗೊತ್ತಾ…?ತಿಳಿಯಲು ಈ ಲೇಖನ ಓದಿ….

536

ಓದಿದ್ದು ಎಸ್ಸೆಸ್ಸೆಲ್ಸಿವರೆಗೆ. ಆದರೂ ಒಂದೇ ವರ್ಷದಲ್ಲಿ 7 ನೌಕರಿಗೆ ಅರ್ಹತೆ ಲಭಿಸಿತು. ಆಯ್ಕೆ ಮಾಡಿಕೊಂಡಿದ್ದು ಮಾತ್ರ ಪಿಎಸ್‌ಐ ಹುದ್ದೆ! ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಮುದೂರ ಗ್ರಾಮದ ಕಾನ ಗೌಡ ಪಾಟೀಲ ಎಂಬುವರ ಪುತ್ರ ಪ್ರಶಾಂತ ಪಾಟೀಲ (38) ಎಂಬುವರು 15 ದಿನಗಳ ಹಿಂದಷ್ಟೇ ಪ್ರೊಬೇಷನರಿ ಅವಧಿ ಪೂರೈಸಿ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಎಸ್‌ಐ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಪ್ರಶಾಂತ 1985ರಿಂದ 1996ರವರೆಗೆ ಮುದ್ದೇಬಿ ಹಾಳದ ಎಂಜಿಎಂಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ ಮೈಸೂರಿನ ಎನ್‌ಟಿಟಿಎಫ್‌ನಲ್ಲಿ ಪಿಯುಸಿಗೆ ಪ್ರವೇಶ ಪಡೆದು 3ನೇ ಸೆಮ್‌ನಲ್ಲಿದ್ದಾಗ ಭಾರತೀಯ ನೌಕಾ ಸೇನೆಯ ಟೆಕ್ನಿಕಲ್ ವಿಭಾಗಕ್ಕೆ 1999ರಲ್ಲಿ ಸೇರಿದರು. 15 ವರ್ಷ ಕಾಲ ನೌಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಸೇನೆಯು ಅವರಿಗೆ  ಬಿಎ ಆನರ್ಸ್ ಗೌರವ ಪದವಿ ದಯಪಾಲಿಸಿತು.

ಪಿಎಸ್‌ಐ ಹುದ್ದೆಗೆ ನಿಗದಿಪಡಿಸಿದ್ದ ಪದವಿ ದೊರಕಿದ್ದರಿಂದ 2014ರಲ್ಲಿ ನಿವೃತ್ತಿ ನಂತರ ಒಂದು ವರ್ಷ ನಿರಂತರ ಅಧ್ಯಯನ ನಡೆಸಿ, ಸಿಂಡಿ ಕೇಟ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್, ಇಸ್ರೋ, ಜೀವವಿಮಾ ಅಧಿಕಾರಿ, ಪಿಎಸ್‌ಐ ನೌಕರಿಗೆ ಅರ್ಹತೆ ಗಳಿಸಿದರು. ಕೊನೆಗೆ ತಮ್ಮ ಬಾಲ್ಯದ ಕನಸಿನಂತೆ ಪಿಎಸ್‌ಐ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು.

ಬಾಲ್ಯದಿಂದಲೂ ಪೊಲೀಸ್ ಅಧಿಕಾರಿ ಯಾಗುವ ಆಸೆ ಇತ್ತು. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನೇ ಮಾಡುತ್ತಿದ್ದೆ. 2015ರಲ್ಲಿ 7 ಪರೀಕ್ಷೆ ಎದುರಿಸಿ ಎಲ್ಲದರಲ್ಲೂ ಅರ್ಹತೆ ಗಳಿಸಿದೆ. ಆದರೆ ಕಠಿಣ ಎನ್ನಿಸಿದರೂ ಪಿಎಸ್‌ಐ ಹುದ್ದೆಯನ್ನೇ ಆಯ್ಕೆ ಮಾಡಿಕೊಂಡೆ. ಇದು ಹುದ್ದೆ ಅಥವಾ ನೌಕರಿ ಅಲ್ಲ, ಸೇವೆ. ಶೋಷಣೆಗೊಳಗಾದ ಬಡವರಿಗೆ ನ್ಯಾಯ ಒದಗಿಸಲು ಪಿಎಸ್‌ಐ ಆದೆ ಎಂದು ಹೇಳುತ್ತಾರೆ ಪ್ರಶಾಂತ ಪಾಟೀಲ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ