ಶಿಕ್ಷಣ

ಎಸೆಸೆಲ್ಸಿ ಮುಗಿಯಿತು. ಮುಂದೇನು ಎನ್ನುವ ಯೋಚನೆಯೇ ???

879

ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ.  ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.

ಶೈಕ್ಷಣಿಕ ಕ್ಷೇತ್ರ ಎನ್ನವುದು ದಿನೇ ದಿನೇ ಬೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‌ಗಳಿಗೆ ವಿಪುಲ ಆಯ್ಕೆಗಳಿದ್ದು, ಔದ್ಯೋಗಿಕ ಅವಕಾಶಗಳಿಗೂ ಕೊರತೆ ಇಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಕೋರ್ಸ್‌ ಮುಗಿದ ಬಳಿಕ ಉದ್ಯೋಗವಿಲ್ಲ ಎಂದು ಕೊರಗುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಎಂದಿಗೂ ಕ್ರೇಝ್ನ ಹಿಂದೆ ಹೋಗದೆ ಅವಕಾಶಗಳ ಕುಳಿತು ತಿಳಿದುಕೊಳ್ಳುವುದು ಅಗತ್ಯ .

 

ಪಿಯುಸಿ :- 
ಹಿಂದೆ ಒಂದು ಕಾಲವಿತ್ತು. ಎಸೆಸೆಲ್ಸಿ ಬಳಿಕ ನೇರವಾಗಿ ಪಿಯುಸಿಗೆ ಹೋಗುತ್ತಿದ್ದರು. ಆಗ ಆಯ್ಕೆಗಳು ಕಡಿಮೆ ಇತ್ತು. ಯಾವುದಾದರೊಂದು ಕೋರ್ಸ್‌ ಮುಗಿಸಿ ಶಿಕ್ಷಣ ಮುಂದುವರಿಸುತ್ತಿದ್ದರು. ಆದರೆ ಇಂದು ಹಾಗಿಲ್ಲ. ಪಿಯುಸಿಯಲ್ಲಿ ಲಭ್ಯವಿರುವ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲೇ ಹಲವು ಆಯ್ಕೆಗಳಿವೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ಅಗತ್ಯ.

ವಿದ್ಯಾರ್ಥಿಗಳಿಗೆ ಪಿಯುಸಿಯ ಆಯ್ಕೆ ಎನ್ನುವುದು ಕ್ರೇಝ್ ಆಗಿಬಿಟ್ಟಿದೆ. ಪಿಯುಸಿ ಸೈನ್ಸ್‌ ಎಂದು ಹೆಮ್ಮೆಯಿಂದ ತಿರುಗುತ್ತಿದ್ದಾರೆ. ಆದರೆ ಸೈನ್ಸ್‌ ತೆಗೆದುಕೊಂಡವರಿಗೆ ಎಲ್ಲರಿಗೂ ಉದ್ಯೋಗ ದೊರಕುತ್ತದೆ ಎಂದು ಹೇಳುವಂತಿಲ್ಲ. ಕೆಲವೊಂದು ಸಂದರ್ಭದಲ್ಲಿ ನಮ್ಮ ಆರ್ಥಿಕ ಸ್ಥಿತಿಯೂ ನಮ್ಮ ಓದನ್ನು ಮುಂದುವರಿಸಲು ಬಿಡುವುದಿಲ್ಲ. ಈ ಎಲ್ಲ ಬೆಳವಣಿಗೆಗಳ ಕುರಿತು ಆಲೋಚನೆ ಮಾಡಿಯೇ ನಮ್ಮ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಧ್ಯಾಪಕ ವೃತ್ತಿಗೆ ತೆರಳುವವರಿಗೆ ಪಿಯುಸಿ ಉತ್ತಮ ಆಯ್ಕೆಯಾಗುತ್ತದೆ. ಜತೆಗೆ ವೈದ್ಯಕೀಯ, ಎಂಜಿನಿಯರಿಂಗ್‌ ಕ್ಷೇತ್ರಕ್ಕೂ ಅದು ಬೇಕಾಗುತ್ತದೆ. ಪಿಯುಸಿಯಲ್ಲಿ  ವಾಣಿಜ್ಯವನ್ನು ಆಯ್ಕೆ ಮಾಡಿಕೊಂಡರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ. ಈ ರೀತಿಯ ಆಲೋಚನೆ ಅಗತ್ಯವಾಗಿದೆ.

ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಿ :-
ಇಂದು ತಾಂತ್ರಿಕ ಶಿಕ್ಷಣ ಎನ್ನುವುದು ವಿಪುಲ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿದೆ. ಹೀಗಾಗಿ ಐಟಿಐ ಹಾಗೂ ಡಿಪ್ಲೊಮಾ ಕೋರ್ಸ್‌ಗಳ ಕುರಿತು ಹೆಚ್ಚಿನ ಒಲವು ತೋರಬೇಕಿದೆ. ಈ ಕೋರ್ಸ್‌ಗಳಿಗೆ ಎಂಜಿನಿಯರಿಂಗ್‌ ಕೋರ್ಸ್‌ನಷ್ಟೇ ಮಹತ್ವವಿದೆ. ಜತೆಗೆ ಉದ್ಯೋಗವೂ ಅಷ್ಟೇ ಶೀಘ್ರದಲ್ಲಿ ಸಿಗುತ್ತದೆ. ಡಿಪ್ಲೊಮಾದಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಪ್ಲಂಬಿಂಗ್‌, ಇಲೆಕ್ಟ್ರಿಕಲ್‌ ಹೀಗೆ ಅನೇಕ ಆಯ್ಕೆಗಳಿವೆ. ಜತೆಗೆ ಅತಿ ಕಡಿಮೆ ವೆಚ್ಚದಲ್ಲಿ ಈ ಕೋರ್ಸ್‌ಗಳನ್ನು ಪೂರ್ತಿಗೊಳಿಸಬಹುದಾಗಿದೆ. ಸರಕಾರಿ ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಉಚಿತವಾಗಿಯೂ ಸಿಗುತ್ತವೆ. ಹೀಗಾಗಿ ಯಾವ್ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸಮಯ ಹಾಳು ಮಾಡುವುದಕ್ಕಿಂತ ಇಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ.

ಔದ್ಯೋಗಿಕ ಕೋರ್ಸ್‌ಗಳು :-

ಇದರ ಜತೆಗೆ ಹಲವಾರು ಔದ್ಯೋಗಿಕ ಕೋರ್ಸ್‌ಗಳಿವೆ. ಅವರ ಬೇಡಿಕೆಗಳಿಗ ನುಗುಣವಾಗಿ ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನರ್ಸಿಂಗ್‌ ಕೋರ್ಸ್‌ಗಳು, ಪ್ಲಂಬಿಂಗ್‌, ಟೈಲರಿಂಗ್‌, ಹೊಟೇಲ್‌ ಮ್ಯಾನೇಜ್‌ಮೆಂಟ್‌, ಟೆಲಿಕಮ್ಯೂನಿಕೇಶನ್‌, ಹೀಗೆ ವಿವಿಧ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಕಂಪ್ಯೂಟರ್‌ ಶಿಕ್ಷಣ :-
ಇಂದು ಪ್ರತಿಯೊಂದು ಕ್ಷೇತ್ರಕ್ಕೂ ಕಂಪ್ಯೂಟರ್‌ ಶಿಕ್ಷಣ ಅಗತ್ಯವಾಗಿದೆ. ಕಂಪ್ಯೂಟರ್‌ನ ಕುರಿತು ಕನಿಷ್ಠ ಜ್ಞಾನವಾದರೂ ಅತಿ ಅಗತ್ಯವಾಗಿದೆ. ಹೀಗಾಗಿ ಕಂಪ್ಯೂಟರನ್ನು ಪೂರ್ಣಾವಧಿ ಕಲಿಯುವುದು ಅಸಾಧ್ಯವಾದರೂ ರಜೆಯ ವೇಳೆ ಬೇಸಿಕ್‌ ಕಂಪ್ಯೂಟರ್‌ ಶಿಕ್ಷಣ ಪಡೆಯಬಹುದಾಗಿದೆ. ನಮ್ಮ ಎಲ್ಲ ಕೋರ್ಸ್‌ಗಳಿಗೂ ಕಂಪ್ಯೂಟರ್‌ ನಿಕಟ ಸಂಪರ್ಕವನ್ನು ಹೊಂದಿದೆ. ಹೀಗಾಗಿ ಕಂಪ್ಯೂಟರ್‌ ಶಿಕ್ಷಣವನ್ನು ಆದ್ಯತೆಯ ಮೇಲೆ ಕಲಿತರೆ ಉತ್ತಮ. ಪೂರ್ಣಾವಧಿಯ ಕಂಪ್ಯೂಟರ್‌ ಶಿಕ್ಷಣಕ್ಕೂ ಉತ್ತಮ ಬೇಡಿಕೆ ಇದೆ. ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್‌ ಅಪ್ಲಿಕೇಶನ್‌ ಬಹುಬೇಡಿಕೆಯ ಕೋರ್ಸ್‌ಗಳಾಗಿವೆ.

ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಿ
ವಿದ್ಯಾರ್ಥಿಗಳು ಯಾವುದೋ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸಮಯ ಹಾಗೂ ದುಡ್ಡನ್ನು ಹಾಳು ಮಾಡುವುದಕ್ಕಿಂತಲೂ ಕೋರ್ಸ್‌ನ ಕುರಿತು ತಿಳಿದುಕೊಂಡು ಮುಂದುವರಿದರೆ ಉತ್ತಮ. ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಿದರೆ ಉದ್ಯೋಗಕ್ಕೆ ಉತ್ತಮ ಅವಕಾಶಗಳಿವೆ. ಒಮ್ಮೆ ಕೆಲಸ ಸಿಕ್ಕರೆ ಮುಂದೆ ಕೆಲಸ ಮಾಡಿಕೊಂಡು ಓದುವುದಕ್ಕೂ ಅವಕಾಶಗಳಿವೆ. ಹೀಗಾಗಿ ನಿಮ್ಮ ಭವಿಷ್ಯ ರೂಪಿಸಲು ಈಗಿನಿಂದಲೇ ತಯಾರಿ ನಡೆಸಬೇಕಿರುವುದು ಅತಿ ಅಗತ್ಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಸಿಕ್ಕಿಬಿದ್ದ ವಿನೋದ್ ರಾಜ್ ರವರ ಹಣವನ್ನು ಲಪಟಾಯಿಸಿದ್ದ ಕಳ್ಳ..!

    ನೆಲಮಂಗಲದಲ್ಲಿ ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.ಕಳೆದ ತಿಂಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್ ಅವರನ್ನು ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿದ್ದರು, ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು. ಈ ಗ್ಯಾಂಗ್‍ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್‍ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ. ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ಐಷಾರಾಮಿ ಜೀವನ ಮಾಡುತ್ತಿದ್ದ.ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು…

  • ಸುದ್ದಿ

    ನಿಮ್ಮ ಅಂಗೈನಲ್ಲಿ M ರೀತಿಯ ಚಿಹ್ನೆ ಇದ್ದರೆ ನೀಮ್ಮ ವ್ಯಕ್ತಿತ್ವ ಎಂತಹದ್ದು ಗೊತ್ತಾ? ಹೇಗಿರುತ್ತೆ ಜೀವನ ನೋಡಿ…!

    ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು…

  • inspirational

    ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?

    ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ ಕಳೆದಿವೆ. ವಾಸ್ಕೋಡಿಗಾಮ ಭಾತರಕ್ಕೆ ಬಂದು 523 ವರ್ಷಗಳು ಸಂದಿವೆ. 1460ರ ಸುಮಾರಿಗೆ ಜನಿಸಿದ ಪೋರ್ಚುಗೀಸ್​ ಕುಲೀನ ವಾಸ್ಕೋಡಿಗಾಮ 1497ರ ಜುಲೈ 8ರಂದು ಲಿಸ್ಬನ್​ನಿಂದ ಪ್ರಯಾಣ ಕೈಗೊಂಡು 1498 ಮೇ 20ರಂದು ಕ್ಯಾಲಿಕಟ್​ಗೆ ತಲುಪಿದನು. ಯುರೋಪ್​ನಿಂದ ಭಾರತಕ್ಕೆ ಮೊದಲ ಬಾರಿಗೆ ಸಮುದ್ರಯಾನ ಕೈಗೊಂಡ ಯುರೋಪ್​ ನಾವಿಕ ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 523 ವರ್ಷ ಕಳೆದಿವೆ. ಭಾರತವನ್ನು ವಾಸ್ಕೋಡಿಗಾಮನಿಗಿಂತ…

  • ಸಿನಿಮಾ

    ಕನ್ನಡ ಚಿತ್ರಗಳ ಹಿಂದಿನ ಎಲ್ಲಾ ದಾಖಲೆಗಳು ದೂಳಿಪಟ!ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

    ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಶುಕ್ರವಾರದಂದು ವಿಶ್ವದಾದ್ಯಂತ ತೆರೆಕಂಡಿದ್ದು, ಸಿನಿ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿದೆ. ಕನ್ನಡ ಚಿತ್ರವೊಂದು ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 25 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಕೆಜಿಎಫ್ ಚಿತ್ರ 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಚಿತ್ರ…