ಹಣ ಕಾಸು

‘ಎಟಿಎಂ’ಗಳಲ್ಲಿ ‘2000ರೂ’ ನೋಟು ಸಿಗೋದು ಕಡಿಮೆಯಾಗಿದೆ! ಏನಾಗುತ್ತೆ ಅಂತ ನಿಮಗೇನಾದ್ರು ಗೊತ್ತಾ???

1188

ನೋಟ್ ಬ್ಯಾನ್ ಬಳಿಕ ಬಿಡುಗಡೆಯಾದ 2000 ರೂ ಮುಖಬೆಲೆಯ ನೋಟುಗಳನ್ನು ಸ್ವಲ್ಪ ದಿನಗಳಲ್ಲೇ ಬ್ಯಾನ್ ಮಾಡುತ್ತಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ಆರ್‍ಬಿಐ ಅಲ್ಲಗಳೆದಿತ್ತು. ಆದರೆ ಈದೀಗ ಕೆಲವು ವರದಿಗಳ ಪ್ರಕಾರ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ಆರ್‍ಬಿಐ ನಿಲ್ಲಿಸಿದೆ ಎಂದು ವರದಿಯಾಗಿದೆ.

ಆರ್‍ಬಿಐ ಮೂಲಗಳನ್ನು ಆಧಾರಿಸಿ ವರದಿ ಪ್ರಕಟವಾಗಿದ್ದು, 2000 ರೂ. ನೋಟು ಬದಲಿಗೆ 200 ರೂ. ನೋಟ್ ಗಳನ್ನು ಬಿಡುಗಡೆ ಮಾಡಲು ಆರ್‍ಬಿಐ ಮುಂದಾಗುತ್ತಿದ್ದು, ಈ ನೋಟುಗಳು ಆಗಸ್ಟ್ ತಿಂಗಳಲ್ಲಿ ಚಲಾವಣೆಗೆ ಬರುವ ಸಾಧ್ಯತೆಯಿದೆ.

ಮೈಸೂರಿನಲ್ಲಿರುವ ಆರ್ ಬಿಐ ಮುದ್ರಣ ಸಂಸ್ಥೆಯಲ್ಲಿ ಈಗಾಗಲೇ 200 ರೂ. ನೋಟುಗಳ ಮುದ್ರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಚಲಾವಣೆಗೆ ಬರಬಹುದೆಂದು ಮೂಲಗಳು ಹೇಳಿವೆ.

2 ಸಾವಿರ ರೂ. ನೋಟುಗಳ ಚಲಾವಣೆ ಹಂತ ಹಂತವಾಗಿ ಕಡಿಮೆ ಮಾಡುತ್ತಿರುವುದರಿಂದ ಜನರ ವ್ಯವಹಾರದ ಸಮಸ್ಯೆ ಆಗದೇ ಇರಲು ಮತ್ತು ಚಿಲ್ಲರೆ ಸಮಸ್ಯೆಯನ್ನು ಕಡಿಮೆ ಮಾಡಲು 200 ರೂ. ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

ಇದಕ್ಕೆ ನಿದರ್ಶನ ಎಂಬಂತೆ, ಎಟಿಎಂಗಳಲ್ಲಿ 2000ರೂ ಮುಖಬೆಲೆಯ ನೋಟುಗಳಿಗಿಂತ ಹೆಚ್ಚಾಗಿ, ನಮಗೆ 500ರೂ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಅನುಭವ ನಿಮಗೂ ಆಗಿರಬೇಕು.

ವರದಿಗಳ ಪ್ರಕಾರ ಆರ್‍ಬಿಐ ಈಗ ಹೆಚ್ಚಾಗಿ 500ರೂ ನೋಟುಗಳನ್ನು ಬ್ಯಾಂಕ್ ಗಳಿಗೆ ಪೊರೈಕೆ ಮಾಡುತ್ತಿದ್ದು, 2 ಸಾವಿರ ರೂ. ನೋಟುಗಳನ್ನು ಕೌಂಟರ್ ಗಳಲ್ಲಿ ಮಾತ್ರ ವಿತರಣೆಯಾಗುತ್ತಿವೆ.

ಮೂಲ:

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಮೊಣಕೈ ಮತ್ತು ಮೊಣಕಾಲು ಕಪ್ಪಾಗಿದ್ದರೆ ಹೀಗೆ ಮಾಡಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ನಮ್ಮ ದೇಹದ ಎಲ್ಲಾ ಭಾಗಗಳ ಚರ್ಮ ಬಿಳಿಯಾಗಿದ್ದರೂ ಮೊಣಕಾಲು ಮತ್ತು ಮೊಣಕೈಯ ಭಾಗಗಳು ಕಪ್ಪಾಗಿರುತ್ತವೆ ಹಾಗೂ ಒರಟಾಗಿರುತ್ತವೆ. ನೋಡಲು ಅಷ್ಟೇನು ಅಂದವಾಗಿರುವುದಿಲ್ಲ. ಡೆಡ್‌‌ಸ್ಕಿನ್‌ನ ಕಾರಣದಿಂದಾಗಿ ಆ ಭಾಗದ ಚರ್ಮ ಕಪ್ಪಾಗುತ್ತದೆ. ಪ್ರತಿದಿನ ನಾವು ಬಳಕೆ ಮಾಡುವ ಸೋಪ್‌ನಿಂದ ಈ ಚರ್ಮದ ಬಣ್ಣವನ್ನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದರ ಬದಲಾಗಿ ಇನ್ನೂ ಕೆಲವೊಂದು ಟಿಪ್ಸ್‌‌ಗಳನ್ನು ಬಳಕೆ ಮಾಡಿಕೊಂಡು ನೀವು ಚರ್ಮದ ಬಣ್ಣವನ್ನ ಬದಲಾವಣೆ ಮಾಡಬಹುದು.   ಆದರೆ ನೀವು ಕೆಳಗಿನ ಈ ಕ್ರಮವನ್ನು ಒಂದು ಬಾರಿ ಬಳಸಿ ನೋಡಬಹುದು… ಟೂಥ್‌ಪೇಸ್ಟ್…

  • ಸುದ್ದಿ

    ಅಡಿಕೆ ಮರ ಏರುವ ಯಂತ್ರ ಆವಿಷ್ಕರಿಸಿದ ಬಂಟ್ವಾಳ ರೈತ, ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರ ಪ್ರಶಂಸೆ…!

    ಮಂಗಳೂರು: ರೈತನೊಬ್ಬ ಅಡಕೆ ಮರವನ್ನು ಯಂತ್ರವೊಂದರ ಸಹಾಯದಿಂದ ಹತ್ತುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಡಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಬಂಟ್ವಾಳದ ಪ್ರಗತಿಪರ ಕೃಷಿಕ ಗಣಪತಿ ಭಟ್ ಆವಿಷ್ಕರಿಸಿದ್ದು, ಇದಕ್ಕೀಗ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಂದಲೂ ಮೆಚ್ಚುಗೆಯಿಂದ ಟ್ವೀಟ್ ಮಾಡಿದೆ. ಸಜೀಪಮೂಡ ಗ್ರಾಮದ ಕೋಮಾಲಿ ನಿವಾಸಿ, ಗಣಪತಿ ಭಟ್ ಅವರ ಯಂತ್ರದ ಮೂಲಕ ಮಹಿಳೆಯರೂ ಮರ ಏರಲು ಸಾಧ್ಯವಾಗಿದೆ. ಯುವತಿಯೋರ್ವಳು ಮರ ಏರುತ್ತಿರುವ…

  • ಸಿನಿಮಾ

    ಇವನ ಒಂದು ಸೆಲ್ಪಿ ಫೋಟೋಗಾಗಿ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಿಲ್ತಾರೆ!ಈ ಪುಣ್ಯಾತ್ಮ ಯಾರೂ ಗೊತ್ತಾ?

    ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.

  • ಹಣ ಕಾಸು

    ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

    ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ

  • ಸುದ್ದಿ

    ಪೊಲೀಸ್ ಠಾಣೆಯಲ್ಲಿ ಆರೋಪಿಯ ಬರ್ತ್‌ಡೇ ಸೆಲೆಬ್ರೇಷನ್….!

    ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್‌ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…

  • ಉಪಯುಕ್ತ ಮಾಹಿತಿ

    ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್: ಕೊನೆಯ ದಿನಾಂಕವನ್ನು ವಿಸ್ತರಿಸಿದ ಕೇಂದ್ರ ಸರ್ಕಾರ!

    ಆಧಾರ್ ಕಾರ್ಡ್ ನೊಂದಿಗೆ ಪಾನ್‌ಕಾರ್ಡ್ ಲಿಂಕ್ ಮಾಡುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.(ಶುಲ್ಕಸಹಿತ) ನವದೆಹಲಿ: ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ  ಜೋಡಿಸುವ ವಿಚಾರ ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವಾಗಲೇ, ಪಾನ್ ಆಧಾರ್  ಜೋಡಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಮಂಗಳವಾರ ಆದೇಶಿಸಿದೆ. ಈ ಹಿಂದೆ ಪ್ಯಾನ್ ಆಧಾರ್ ಜೋಡಿಸಲು ಮಾರ್ಚ್ 31 ಕೊನೆನವದೆಹಲಿ: ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ  ಜೋಡಿಸುವ ವಿಚಾರ ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವಾಗಲೇ, ಪಾನ್ ಆಧಾರ್  ಜೋಡಿಸಲು…