ಉಪಯುಕ್ತ ಮಾಹಿತಿ

ಉಪ್ಪಿಂದ ಆಗೋವ ಈ 10 ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

876

ಉಪ್ಪು ತುಂಬಾನೇ ಅಗ್ಗದ ವಸ್ತು ಆದ್ರೂ ಉಪ್ಪಿಗಿಂತ ರುಚಿಯಿಲ್ಲ ಅನ್ನೋದು ತುಂಬಾ ಸತ್ಯ . ಈಗ ನಾವು ಇಲ್ಲಿ ಹೇಳೋ ವಿಷಯಗಳನ್ನ ಕೇಳಿದರೆ ನಿಮಗೆ ಉಪ್ಪನ್ನ ಎಷ್ಟು ಹೊಗಳಿದ್ರೂ ಸಾಲ್ದು ಅನ್ನಿಸೋದ್ರಲ್ಲಿ ಆಶ್ಚರ್ಯ ಇಲ್ಲ.

1.ನಿಮ್ಮ ಕರ್ಟನ್ ಮೇಲೆ ಯಾವತ್ತೂ ಫಂಗಸ್ ಕೂರ್ದೆ ಇರಕ್ಕೆ ಕರ್ಟನ್ ತಂದ ತಕ್ಷಣ ಉಪ್ಪು ನೀರಲ್ಲಿ ಒಗೆದು ನಂತರ ಉಪ್ಯೋಗ್ಸಿ.

2.ಸೊಳ್ಳೆ ಕಚ್ಚಿದ ಜಾಗದಲ್ಲಿ ತುರಿಕೆ ಆಗ್ಬಾರ್ದು ಅಂದ್ರೆ, ಒದ್ದೆ ಬೆರಳನ್ನ ಉಪ್ಪಿಗೆ ಹಚ್ಕೊಂಡು, ತುರಿಕೆ ಆಗ್ತಿರೋ ಜಾಗದಲ್ಲಿ ಹಚ್ಚಿ.

3.ತಾಮ್ರದ ಪಾತ್ರೆ ಫಳಫಳ ಹೊಳೆಯೋಹಾಗೆ ಮಾಡೋಕೆ ಸ್ವಲ್ಪ ವಿನೆಗರ್, ಮೈದಾ ಹಿಟ್ಟು ಹಾಗು ನಿಂಬೆರಸದ ಜೊತೆ ಉಪ್ಪು ಮಿಕ್ಸ್ ಮಾಡಿ ಪಾತ್ರೆ ಉಜ್ಜಿ.

4.ಬಾಣಲೀಲಿ ನೀವು ಹುರಿಯೋ ಪದಾರ್ಥದಿಂದ ಎಣ್ಣೆ ಸಿಡಿಯದ ಹಾಗೆ ನೋಡಿಕೊಳ್ಳೋಕೆ ಮೊದಲು ಒಂದೆರಡು ಚಿಟಿಕೆ ಉಪ್ಪು ಹಾಕಿಡಿ.

5.ಕ್ಯಾಂಡಲ್ಲಿಂದ ಮೇಣ ಸೋರ್ಬಾರ್ದು ಅಂದ್ರೆ, ಕ್ಯಾಂಡಲ್ ಹಚ್ಚೋಕೆ ಮುಂಚೆ ಸಾಕಷ್ಟು ಹೊತ್ತು ಉಪ್ಪು ನೀರಲ್ಲಿ ಅದನ್ನ ನೆನೆಸಿಟ್ಟು ಒಣಗಿಸಿ ನಂತರ ಬಳಸಿ.

6.ನಿಮ್ಮ ಶೂ ವಾಸನೆ ಬರ್ತಿದ್ರೆ, ಒಂದು ಸಣ್ಣ ಬಟ್ಟೇಲಿ ಉಪ್ಪು ತುಂಬಿ ವಾಸನೆ ಇರೋ ಶೂನಲ್ಲಿಟ್ಟು ಸ್ವಲ್ಪ ಹೊತ್ತಿನ ನಂತರ ತೆಗೀರಿ, ವಾಸನೆ ಹೋಗಿರುತ್ತೆ!

7.ನಿಮ್ಮ ಮನೆಯಲ್ಲಿ  ಇರುವೆ ಕಾಟ ಜಾಸ್ತೀನ? ಹಾಗಿದ್ದರೆ ಒಂದು ಭಾಗ ಉಪ್ಪಿಗೆ ನಾಲ್ಕು ಭಾಗ ನೀರನ್ನ ಹಾಕಿ ಮಿಕ್ಸ್ ಮಾಡಿ ಅದನ್ನ ಇರುವೆ ಇರೋ ಜಾಗದಲ್ಲಿ ಚಿಮುಕಿಸಿ.

8.ನಿಮ್ಮ ಮಕ್ಕಳಿಗೆ ಪೈಂಟಿಂಗ್ ಮಾಡೋವಾಗ ಅದು ಬಾಯಿಗೆ ಹೋಗಿ ಏನಾದ್ರೂ ಆಗ್ಬೋದು ಅನ್ನೋ ಭಯ ಇದ್ರೆ, ಒಂದು ಬಟ್ಟಲಲ್ಲಿ ಮೈದಾ ಮತ್ತು ಉಪ್ಪು ನೀರು ಹಾಕಿ ಅದಕ್ಕೆ ಫುಡ್ ಕಲರ್ ಬೆರೆಸಿ ಕೊಡಿ. ಮನೇಲೇ ಪೈಂಟ್ ರೆಡಿ!

9.ಅಪಲ್ ತರದ ಹಣ್ಣು ಮತ್ತು ತರಕಾರಿ ಕತ್ತರಿಸಿದಾಗ ಕಪ್ಪಾಗದ ಹಾಗೆ ನೋಡಿಕೊಳ್ಳೋಕೆ ಅದನ್ನ ಕತ್ತರಿಸಿದ ನಂತರ ಉಪ್ಪು ನೀರಲ್ಲಿ ನೆನೆಸಿಡಿ.

10.ನಿಮ್ಮ ಕೈಯಲ್ಲಿ ಈರುಳ್ಳಿ ಅಥವಾ ಬೆಳ್ಳುಳ್ಳಿ ವಾಸನೆ ಇದ್ರೆ, ಉಪ್ಪಿಂದ ಕೈ ತೊಳ್ಕೊಳಿ. ವಾಸ್ನೆ ಓಡಿ ಹೋಗತ್ತೆ!

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ