ಸಿನಿಮಾ

ಉಪೇಂದ್ರ ಸ್ಥಾಪಿಸಲು ಹೊರಟಿರುವ ಪಕ್ಷ ಪ್ರಜಾಕೀಯ ಅಲ್ವಂತೆ!ಹಾಗಾದ್ರೆ ಉಪ್ಪಿ ಪಕ್ಷದ ಹೆಸರು ಏನು ಗೊತ್ತಾ..?

873

ಕನ್ನಡ ಚಿತ್ರ ರಂಗದ ನಟ ಉಪೇಂದ್ರರವರ ರಾಜಕೀಯ ಸುದ್ದಿಗಳು ದಿನಕ್ಕೊಂದಂತೆ ತಿರುವು ಪಡೆದುಕೊಳ್ಳುತ್ತಿವೆ.ಈಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿಮಗೆಲ್ಲ ಗೊತ್ತಿರುವಂತೆ ಅವರು ಸ್ಥಾಪಸಲು ಹೊರಟಿರುವ ಪಕ್ಷದ ಹೆಸರು ಪ್ರಜಾಕೀಯ ಎಂದು. ಆದ್ರೆ ಮೂಲಗಳ ಪ್ರಕಾರ ಅವರ ಪಕ್ಷದ ಹೆಸರು   ಪ್ರಜಾಕೀಯ ಅಲ್ಲ..!

ಹೌದು, ಚಿತ್ರನಟ ಉಪೇಂದ್ರ ಅವರು ಸ್ಥಾಪಿಸಲು ಉದ್ದೇಶಿಸಿರುವ ಹೊಸ ರಾಜಕೀಯ ಪಕ್ಷದ ಹೆಸರು ಪ್ರಜಾಕೀಯ ಅಲ್ಲ. ‘ ಉತ್ತಮ ಪ್ರಜಾ ಪಾರ್ಟಿ. ಈ ಬಗ್ಗೆ ಉಪೇಂದ್ರ ಅವರು ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಂಡಿದ್ದು, ಮುಂದಿನ ನೋಂದಣಿ ಮತ್ತಿತರ ತಾಂತ್ರಿಕ ಪ್ರಕ್ರಿಯೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ಸದಸ್ಯತ್ವ ನೀವು ಪಡೆದುಕೊಳ್ಳಬಹುದು..!

ಈ ಹೊಸ ಪಕ್ಷದ ಸದಸ್ಯತ್ವ ಪಡೆದುಕೊಳ್ಳಲು ಬಯಸುವವರಿಗೆ ಅರ್ಜಿಯನ್ನೂ ಸಿದ್ಧಪಡಿಸಲಾಗಿದೆ. ಆಸಕ್ತರು ಇತರೆ ಎಲ್ಲ ವೈಯಕ್ತಿಕ ವಿವರಗಳ ಜೊತೆ ತಮ್ಮ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯ ಎರಡು ಪ್ರತಿಗಳನ್ನೂ ಅರ್ಜಿಯೊಂದಿಗೆ ಲಗತ್ತಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಇಲ್ಲಿ ಓದಿ:-ಉಪ್ಪಿಗೆ ಆಟೋ ಚಾಲಕ ಬರೆದ ಪತ್ರದಲ್ಲಿ ಏನಿತ್ತು ಗೊತ್ತಾ..?

ಕೆಲವು ದಿನಗಳ ಹಿಂದಷ್ಟೇ ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿರುವ ಉಪೇಂದ್ರ ಅವರು ಬಿರುಸಿನ ತಯಾರಿ ಆರಂಭಿಸಿದ್ದಾರೆ ಎನ್ನಲಾಗಿದೆ.

ಮೂಲ

ಚಲನಚಿತ್ರಗಳಿಗೆ ಸಂಬಂಧಿಸಿದ ತಮ್ಮ ಎಲ್ಲ ಕೆಲಸಗಳನ್ನೂ ಶೀಘ್ರದಲ್ಲೇ ಮುಗಿಸಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲು ಮುಂದಾಗಿರುವ ಉಪೇಂದ್ರ ಅವರು ಅಗತ್ಯ ಕಂಡು ಬಂದರೆ ರಾಜ್ಯದ ವಿವಿಧ ನಗರಗಳಿಗೂ ತೆರಳಿ ಪಕ್ಷ ಸ್ಥಾಪನೆಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

ಜತೆಗೆ ಸಾಮಾಜಿಕ ಜಾಲತಾಣದ ಮೂಲಕ ಅರ್ಜಿ ಸ್ವೀಕರಿಸುವುದೂ ಸೇರಿದಂತೆ ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪರಿಶೀಲಿಸಿ ಮುಂದಿನ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ