ರಾಜಕೀಯ

ಉತ್ತರ ಪ್ರದೇಶ,ಬಿಹಾರ್ನಲ್ಲಿ ಇವಿಎಂ ಹ್ಯಾಕ್ – ಬೆಂಗ್ಳೂರಲ್ಲಿ ಸ್ಟ್ರಾಂಗ್ ರೂಂಗಳಿಗೆ ಸರ್ಪಗಾವಲು….!

226

ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ಇವಿಎಂ ಹ್ಯಾಕ್ ಸುದ್ದಿ ಪಸರಿಸಿರೋ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತಪೆಟ್ಟಿಗೆ ಇರುವ ಕೇಂದ್ರಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಕೇಂದ್ರ ವಿಭಾಗದ ಮತಪೆಟ್ಟಿಗೆ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ, ದಕ್ಷಿಣ ವಿಭಾಗದ ಜಯನಗರ ಎನ್‍ಎಂಕೆಆರ್ ವಿ ಕಾಲೇಜಿನಲ್ಲಿ ಕಡೆಯದಾಗಿ ಉತ್ತರ ವಿಭಾಗದ ಮತಪೆಟ್ಟಿಗೆ ಮಹಾರಾಣಿ ಕಾಲೇಜಿನಲ್ಲಿ ಭದ್ರವಾಗಿದೆ. ಈ ಮತಪೆಟ್ಟಿಗೆ ಸ್ಟ್ರಾಂಗ್ ರೂಂ ಒಳಗೆ ಓಡಾಡಲು ನಿಯೋಜಿತ ಸಿಬ್ಬಂದಿ, ಗುರುತಿನ ಚೀಟಿ ಇರುವ ಅಭ್ಯರ್ಥಿ, ಅಭ್ಯರ್ಥಿಯ ಏಜೆಂಟ್‍ಗೆ ಮಾತ್ರ ಪ್ರವೇಶವಿದೆ. ಉಳಿದಂತೆ ಯಾರಿಗೂ ಸಹ ಒಳಗೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ಆಯೋಗ ಸೂಚನೆ ನೀಡಿದೆ.


ಬೆಂಗಳೂರಿನ ಲೋಕಸಭಾ ಚುನಾವಣೆಯ ಮತಪೆಟ್ಟಿಗೆ ಭದ್ರವಾಗಿರಿಸಲು ಚುನಾವಣಾ ಆಯೋಗ ತೆಗೆದುಕೊಂಡಿರುವ ಕ್ರಮ ತೆಗೆದುಕೊಂಡಿದೆ. ಇವಿಎಂ ಮಿಷನ್ ಇರುವ ಕೊಠಡಿ ಕರೆಂಟ್ ಕನೆಕ್ಷನ್ ಕಟ್ ಮಾಡಲಾಗಿದೆ. ಶಾರ್ಟ್ ಸಕ್ರ್ಯೂಟ್, ವಿದ್ಯುತ್ ಸಂಬಂಧಿತ ಸಮಸ್ಯೆ ಆಗದಿರಲು ಈ ಕ್ರಮ ಕೈಗೊಳ್ಳಲಾಗಿದೆ. ಕೊಠಡಿ ಬಾಗಿಲು ಮೇ23 ಕ್ಕೆ ಚುನಾವಣಾ ಆಯೋಗ ನೇಮಕ ಮಾಡಿರುವ ಮೇಲ್ವಿಚಾರಕರ ಸಮ್ಮುಖದಲ್ಲೇ ತೆರೆಯಲಾಗುತ್ತದೆ. ಯಾವುದೇ ಆರೋಪ ಬರಬಾರದೆಂದು ರೂಂ ಕಿಟಕಿ, ಬಾಗಿಲು ಸೀಲ್ ಹಾಕಲಾಗಿದ್ದು, ರೂಂನ ಹೊರಭಾಗ ಸಿಸಿಟಿವಿ ಕಡ್ಡಾಯ ಮಾಡಲಾಗಿದೆ.


ಸ್ಟ್ರಾಂಗ್ ರೂಂಗೆ ಸರ್ಪಗಾವಲು:
ಇಡೀ ಕಟ್ಟಡದ ಮೂರು ಸುತ್ತಿನಲ್ಲೂ ಸೆಂಟ್ರಲ್ ಪ್ಯಾರಮಿಲಿಟರಿ ಫೋರ್ಸ್ ಸೆಕ್ಯೂರಿಟಿಯಿಂದ ಭದ್ರತೆ ಒದಗಿಸಲಾಗಿದೆ. ರಾಜ್ಯ ಪೊಲೀಸರಿಂದ ಕಟ್ಟಡ ಹೊರಭಾಗದಲ್ಲಿ, ಜಿಲ್ಲಾ ಪೊಲೀಸರಿಂದ ಕಟ್ಟಡ ಹೊರಗೆ ಭದ್ರತೆ ಒದಗಿಸಲಾಗಿದ್ದು ಇಡೀ ಕಟ್ಟಡ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ. ಸ್ಟ್ರಾಂಗ್ ಒಂದಕ್ಕೆ ಕನಿಷ್ಠ 300 ಜನ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಭ್ಯರ್ಥಿಗಳ ಏಜೆಂಟ್ ಗಳು ಬೇಕಾದ್ರೂ ಸ್ಟ್ರಾಂಗ್ ರೂಂ ಕಾವಲು ಕಾಯಬಹುದು ಎಂದು ಆಯೋಗ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಒಂದು ರಾತ್ರಿ ಅಡ್ಜೆಸ್ಟ್ ಮಾಡ್ಕೋ ಎಂದ ನಿರ್ಮಾಪಕನಿಗೆ ಈ ನಟಿ ಕೊಟ್ಟ ಉತ್ತರ ಏನು ಗೊತ್ತಾ..?

    ಒಂದು ರಾತ್ರಿ ಕಾಂಪ್ರಮೈಸ್ ಮಾಡಿಕೋ ಎಂದು ಹೇಳಿದ ನಿರ್ಮಾಪಕನಿಗೆ ಮರಾಠಿ ಚಿತ್ರದ ನಟಿ ಶ್ರುತಿ ಮರಾಠೆ ಜಾಣತನದ ಉತ್ತರ ನೀಡಿದ್ದು, ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹ್ಯುಮನ್ಸ್ ಆಫ್ ಮುಂಬೈ ಬಗ್ಗೆ ಮಾತನಾಡಿದ ನಟಿ ಶ್ರುತಿ, ಚಿತ್ರಕ್ಕೆ ಆಡಿಶನ್ ಮಾಡುವಾಗ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ನಿರ್ಮಾಪಕ ಮಾಡಿದ ಇಂಟರ್ ವ್ಯೂವ್ ನಲ್ಲಿ ಶ್ರುತಿ ಭಾಗವಹಿಸಿದ್ದರು. ಈ ವೇಳೆ ನಿರ್ಮಾಪಕ, “ಕಾಂಪ್ರಮೈಸ್”, ಹಾಗೂ “ಒಂದು ರಾತ್ರಿ” ಎಂಬ ಪದಗಳನ್ನು ಬಳಸಲು ಶುರು ಮಾಡಿದ್ದರು. ನಿರ್ಮಾಪಕನ ಮಾತನ್ನು…

  • ಆಧ್ಯಾತ್ಮ, ಉಪಯುಕ್ತ ಮಾಹಿತಿ

    ಮೈಸೂರು ಚಾಮುಂಡೇಶ್ವರಿ ದೇವಿಯ, ದೇವಸ್ಥಾನದ ಬಗ್ಗೆ ನಿಮ್ಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು..!

    ನಿಮ್ಮ ಗುಪ್ತ ಸಮಸ್ಯೆ ಗಳಿಗೆ ಒಂದೇ ಕರೆ ಶಾಶ್ವತಪರಿಹಾರರ ರಾಘವೇಂದ್ರಸಾಮ್ವಿಗಳು ಶ್ರೀ ಪಂಡಿತ್ ರಾಘವೇಂದ್ರ ಸಾಮ್ವಿಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772. ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ…

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ಸ್ಪೂರ್ತಿ

    ಬದುಕನ್ನು ವ್ಯರ್ಥ ಮಾಡಬೇಡಿ, ಸಮಯವನ್ನು ಅರ್ಥ ಮಾಡಿಕೊಂಡು ಬದುಕಿ ರವಿ ಚನ್ನಣ್ಣನವರ್.

    ಗವಿಮಠದ ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ರವಿ ಚನ್ನಣ್ಣನವರ್, ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಕೊಪ್ಪಳ ಅಂದು ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಜಾತ್ರೆಯಿಂದ ದಕ್ಷಿಣ ಕಾಶಿ ಎಂದೆನಿಸಿದೆ. ಈ ಹಿಂದೆ ಯಾಗಗಳು ನಡೆಯುತ್ತಿದ್ದವಂತೆ, ಅದರ ಮೂಲ ಉದ್ದೇಶ ಜನರ ಹಿತವಾಗಿತ್ತಂತೆ. ಈಗ ಲಕ್ಷ ದೀಪೋತ್ಸವದ ಮೂಲಕ ದೈವದ ಸಾಕ್ಷಾತ್ಕಾರ, ಲಕ್ಷ ವೃಕ್ಷ ನೆಡುವ ಮೂಲಕ ಪ್ರಕೃತಿ ಸಾಕ್ಷಾತ್ಕಾರವಾಗುತ್ತಿದೆ….

  • Health

    ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಬಳಸುತ್ತೀರಾ?ಹಾಗಾದರೆ ಈ ಅಭ್ಯಾಸದಿಂದ ಅಪಾಯ ತಪ್ಪಿದ್ದಲ್ಲ ಎಚ್ಚರ!

    ಮೊಬೈಲ್‌ ಪರಿಚಯವಾದ ಮೇಲೆ ಜಗತ್ತಿನ ಜನರ ದಿನಚರಿಯೇ ಬದಲಾಗಿದೆ. ಕೆಲವರಿಗಂತೂ ಒಂದು ಅರ್ಧ ತಾಸು ಮೊಬೈಲ್ ಬಿಟ್ಟಿರು ಎಂದರೆ ಬಿಟ್ಟಿರಲು ಸಾಧ್ಯವಾಗುವುದಿಲ್ಲ.  ಯಾರು ಮೆಸೇಜ್‌ ಮಾಡಿರಬಹುದು,ಯಾರು ಕಾಲ್‌ ಮಾಡಿರಬಹುದು ಎಂದು ಮನಸ್ಸು ಆ ಕಡೆ ಸೆಳೆಯುತ್ತಿರುತ್ತದೆ, ಮೊಬೈಲ್‌ ಬಳಸುವುದು ಎಲ್ಲರಲ್ಲಿ ಒಂದು ಚಟವಾಗಿ ಬಿಟ್ಟಿದೆ ಎಂದು ತಪ್ಪಾಗಲಾರದು. ಇನ್ನು ನಮ್ಮ ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳಿಗೆ ಮೊಬೈಲ್‌ ಅನ್ನೇ ಅವಲಂಬಿಸಿದ್ದೇವೆ. ಬ್ಯಾಂಕ್‌ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್‌ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್‌…

  • ಸುದ್ದಿ

    ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆಯನ್ನು ಬಗೆಹರಿಸಿ ಅಂತೀರಾ… ಆಕ್ರೋಶದಿಂದ ಸಿಎಂ !

    ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು…