ವಿಧ್ಯಾಭ್ಯಾಸ

ಈ ಮದುಮಗಳು ಮದುವೆಯಲ್ಲಿ ವರನ ಬಳಿ ಕೇಳಿದ್ದೇನು ಗೊತ್ತಾ..?ತಿಳಿಯಲು ಈ ಲೇಖನ ಓದಿ …

By admin

December 08, 2017

ಚಿನ್ನ ಎಂದರೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ?. ಗಂಡಸರಿಗಿಂತ ಹೆಂಗಸರಿಗೇ ಚಿನ್ನದ ಮೇಲೆ ಹೆಚ್ಚಿನ ಆಸೆ ಇರುತ್ತದೆ. ಸಾಮಾನ್ಯ ದಿನಗಳಲ್ಲೇ ಅಪಾರ ಆಸಕ್ತಿ ತೋರುವ ಹೆಂಗಸರು ಮದುವೆಯಂತಹ ಶುಭಕಾರ್ಯಗಳಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ತೋರುತ್ತಾರೆ. ಎಲ್ಲರಿಗೂ ಆಭರಣಗಳನ್ನು ಧರಿಸಿ ಓಡಾಡಬೇಕೆಂಬ ಆಸೆ ಇದ್ದೇ ಇರುತ್ತದೆ.

ಅದರಲ್ಲೂ ಮದುಮಗಳು ಇನ್ನೂ ಹೆಚ್ಚಿನ ಆಸೆ ಹೊಂದಿರುತ್ತಾಳೆ. ಆಭರಣ ಧರಿಸುವ ಸಮಯಕ್ಕಾಗಿಯೇ ಎದುರು ನೋಡುತ್ತಿರುತ್ತಾಳೆ. ಹೀಗೆ ಆಸೆ ಪಡುವುದು ಹೆಂಗಸರಲ್ಲಿ ಸರ್ವೇಸಾಮಾನ್ಯವಾದದ್ದೇ ಆದರೂ ಈ ಯುವದಿದಕ್ಕೆ ಭಿನ್ನವೆಂದೇ ಹೇಳಬಹುದು. ವರನನ್ನು ಆಕೆ ಚಿನ್ನವೇ ತನಗೆ ಬೇಡ ಎಂದು, ತಾನು ಬಯಸಿದ್ದನ್ನು ನೀಡಿದರೆ ಸಾಕೆಂದು ಹೇಳಿದ್ದಾಳೆ. ಆಕೆ ಬಯಸಿದ್ದಾದರೂ ಏನನ್ನು …?

ಆಕೆಯ ಹೆಸರು ಸಾಹ್ಲಾ ನೆಕ್ಯುಲ್. ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಪೊಲಿಟಿಕಲ್ ಸೈನ್ಸ್ ವಿದ್ಯಾಭ್ಯಾಸ ಮಾಡಿದ್ದಾಳೆ. ಮಲಯಾಳದ ಮುಸ್ಲಿಂ ಕುಟುಂಬದವರಾದರೂ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆಕೆಯ ಮದುವೆಗೆ ನಿಶ್ಚಯವಾಗಿದೆ. ಮುಸ್ಲಿಂ ಸಂಪ್ರದಾಯದಲ್ಲಿ ಮದುಮಗನು ಮದುಮಗಳಿಗೆ ಮೊಹರ್ ರೂಪದಲ್ಲಿ ಆಕೆ ಬಯಸಿದ್ದನ್ನು ಕೊಡುವ ಆಚಾರವಿದೆ.

ಸಾಮಾನ್ಯವಾಗಿ ಯಾವುದೇ ಮುಸ್ಲಿಂ ಮದುವೆ ಸಮಾರಂಭಗಳಲ್ಲಿ ಮದುಮಗಳಿಗೆ ಚಿನ್ನದ ಆಭರಣಗಳನ್ನೇ ಮೊಹರ್ ಆಗಿ ನೀಡುತ್ತಾರೆ. ಮದುಮಗಳು ತನಗೆ ಇಂತಹದ್ದೇ ಬೇಕೆಂದು ಬಯಸಿದ ಸಂದರ್ಭಗಳು ಎಲ್ಲೂ ಕಾಣಿಸಿಕೊಂಡಿಲ್ಲವಂತೆ. ಸಾಹ್ಲಾ ಎಲ್ಲರಿಗೂ ಭಿನ್ನವಾಗಿ ತನಗೆ ಚಿನ್ನದ ಆಭರಣಗಳು ಬೇಡವೆಂದು, ಬದಲಾಗಿ ಅಮೂಲ್ಯವಾದ 50 ಪುಸ್ತಕಗಳು ಬೇಕೆಂದು ಕೋರಿದ್ದಾಳೆ. ಮೊದಲು ಈ ಮಾತಿಗೆ ಎಲ್ಲರೂ ಆಶ್ಚರ್ಯಪಟ್ಟರೂ , ಸಾಹ್ಲಾ ಬಯಸಿದ್ದನ್ನು ಮೆಚ್ಚಿಕೊಂಡಿದ್ದಾರೆ.

ಸಾಧಾರಣವಾಗಿ ಮದುಮಗಳು ಮೊಹರ್ ರೂಪದಲ್ಲಿ ಏನನ್ನೂ ಬಯಸದಿದ್ದರೂ, ಸಂಪ್ರದಾಯದಂತೆ ಆಕೆ ಬಯಸಿದ್ದನ್ನು ನೀಡಲೇಬೇಕು. ಸ್ತ್ರೀಯರಿಗೆ ಸ್ವಂತಃ ಆಲೋಚಿಸುವ, ಸ್ವತಂತ್ರವಾಗಿ ಮಾತಾಡುವ ಹಕ್ಕನ್ನು ಕೊಡದೆ, ಪೂರ್ವ ಕಾಲದಿಂದಲೂ ಕೇವಲ ಚಿನ್ನದ ಆಭರಣಗಳನ್ನು ಕೊಡುತ್ತಾ ಅವರ ಹಕ್ಕನ್ನು ಕಡೆಗೆಣಿಸುತ್ತಾ ಬಂದಿದ್ದಾರೆ. ಆದರೆ ತಾನು ಹಾಗಲ್ಲ ಎಂದು, ಆದ್ದರಿಂದಲೇ ಚಿನ್ನಕ್ಕೆ ಬದಲಾಗಿ ಪುಸ್ತಕಗಳನ್ನು ಕೇಳಿದ್ದೇನೆ ಎನ್ನುತ್ತಾಳೆ.

ಇದರಿಂದ ಚಿನ್ನ ಕೊಳ್ಳಬೇಕೆಂಬ ಆತಂಕ ವರನ ಕಡೆಯವರಿಗೆ ಇರುವುದಿಲ್ಲ ಎಂದು, ಅವರು ಒತ್ತಡಕ್ಕೆ ಗುರಿಯಾಗುವ ಅವಶ್ಯಕತೆಯೂ ಇರುವುದಿಲ್ಲ ಎಂದು ಹೇಳುತ್ತಾಳೆ. ಸಾಹ್ಲಾ ಕೋರಿಕೆಯಂತೆಯೇ ವರನು ಆಕೆ ಕೇಳಿದ 50 ಪುಸ್ತಕಗಳನ್ನು ಕೊಂಡು ತಂದು ಮೆಹರ್ ರೂಪದಲ್ಲಿ ನೀಡಿದ್ದಾನೆ.

ಚಿನ್ನದ ವಿಷಯದಲ್ಲಿ ನಿರಾಸಕ್ತಿಯನ್ನು ತೋರಿರುವುದೇ ಅಲ್ಲದೆ, ಮೊಹರ್ ವಿಷಯದಲ್ಲಿ ಪ್ರತಿಯೊಬ್ಬ ಮುಸ್ಲಿಂ ಯುವತಿ ತಪ್ಪದೆ ತನ್ನ ಹಕ್ಕನ್ನು ತಿಳಿದುಕೊಳ್ಳಬೇಕು