ಉಪಯುಕ್ತ ಮಾಹಿತಿ

ಈಗ ಬಂದಿದೆ ಹೊಸ ಸ್ಫೋಟಗೊಳ್ಳದ ಪಾರದರ್ಶಕ ಗ್ಯಾಸ್ ಸಿಲಿಂಡರ್..!ತಿಲಿಯಲು ಈ ಲೇಖನ ಓದಿ..

By admin

December 29, 2017

ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.

ಗೋ ಗ್ಯಾಸ್‌ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಡಿ. ವೆಂಕಟರಾಮನ್, ಗ್ಯಾಸ್ ಸಿಲಿಂಡರ್ ಸೋರಿಕೆ, ಸ್ಫೋಟದಂತಹ ಹಲವಾರು ಪ್ರಕರಣಗಳಿಂದ ಗ್ರಾಹಕರಿಗೆ ಮುಕ್ತಿ ನೀಡಲು ಗೋ ಗ್ಯಾಸ್ ಬಹಳ ಅನುಕೂಲಕರವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಗೋ ಗ್ಯಾಸ್ ಎಲೈಟ್ ಎಲ್’ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಗೃಹ ಬಳಕೆಗಾಗಿ ಮೊದಲ ಬಾರಿಗೆ ‘ಗೋ ಗ್ಯಾಸ್‌’ ಎಲ್‌ಪಿಜಿ ಸಂಪರ್ಕ ಪಡೆಯಲು ಬಯಸುವವರು ವಿಳಾಸ ದೃಡೀಕರಣ ದಾಖಲೆ ಹಾಗೂ 1,350 ರೂ. ನೀಡಬೇಕು. ವಾಣಿಜ್ಯ ಉದ್ದೇಶಕ್ಕಾಗಿ 1700 ರೂ. ನೀಡಬೇಕು. ಆಮೇಲೆ ಪ್ರತಿ ಸಿಲಿಂಡರ್‌ಗೆ ಗೃಹ ಬಳಕೆದಾರರು 930 ರೂ. ಮತ್ತು ವಾಣಿಜ್ಯ ಬಳಕೆದಾರರು 1,450 ರೂ. ನೀಡಬೇಕು ಎಂದರು.

ಗೋ ಗ್ಯಾಸ್ ಎಲೈಟ್ ಸಿಲಿಂಡರ್‌ಗಳು ಅತ್ಯಂತ ಹಗುರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಇದನ್ನು ಸುಲಭದಲ್ಲಿ ಎತ್ತಬಹುದು. ಸಿಲಿಂಡರ್‌ಗಳು ಪಾರದರ್ಶಕವಾಗಿದ್ದು ಅನಿಲ ಪ್ರಮಾಣ ಕಾಣುತ್ತದೆ. ಇವು ಬಳಕೆಗೆ ಅತ್ಯಂತ ಸುರಕ್ಷಿತವಾಗಿವೆ. ಸಿಲಿಂಡರ್‌ನಲ್ಲಿ ಅನಿಲ ಕದಿಯುವುದು ಮತ್ತು ಕಡಿಮೆ ಅನಿಲ ಪೂರೈಸಲು ಸಾಧ್ಯವಿರುವುದಿಲ್ಲ ಎಂದರು.

ಗೋ ಗ್ಯಾಸ್ ಎಲೈಟ್ ಸಿಲಿಂಡರ್‌ಗಳು ಹೈಡ್ರಾಲಿಕ್ ಫ್ರೂಪ್ ಪ್ರೆಷರ್ ಟೆಸ್ಟ್ ಹೈಡ್ರಾಲಿಕ್ ಎಕ್ಸ್‌ಪ್ಯಾನ್ಷನ್ ಟೆಸ್ಟ್, ಸಿಲಿಂಡರ್ ಸಿಡಿಯುವ ಪರೀಕ್ಷೆ, ಆ್ಯಂಬಿಯೆಂಟ್ ಸೈಕಲ್ ಟೆಸ್ಟ್, ವ್ಯಾಕ್ಯೂಮ್ ಟೆಸ್ಟ್, ಎನ್ವಿರಾನ್‌ಮೆಂಟಲ್ ಸೈಕಲ್ ಟೆಸ್ಟ್, ಹೈ ಟೆಂಪರೇಚರ್ ಕ್ರೀಪ್ ಟೆಸ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದ್ದು ಅವುಗಳಿಂದ ಈ ಸಿಲಿಂಡರ್ ಶೇ.100ರಷ್ಟು ಸುರಕ್ಷಿತವೆಂದು ತಿಳಿದು ಬಂದಿದೆ ಎಂದು ವಿವರಿಸಿದರು.

ನಗರದ ಲಾಲ್‌ಬಾಗ್‌, ಬಿಇಎಲ್‌ನ ಎಂ.ಎಸ್‌.ಪಾಳ್ಯ ಹಾಗೂ ಚಾಮರಾಜಪೇಟೆ ಸೇರಿದಂತೆ ರಾಜ್ಯದಲ್ಲಿ ಒಟ್ಟು 18 ಕಡೆ ಆಟೋ ಎಲ್‌ಪಿಜಿ ಬಂಕ್‌ಗಳಿವೆ. ಇವು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆ.ಇಲ್ಲಿ ಗ್ರಾಹಕರು ಯಾವುದೇ ಸಮಯದಲ್ಲಿ ಎಲ್‌ಪಿಜಿ ಮುಗಿದರೂ ಬಂಕ್‌ಗಳಿಗೆ ಬಂದು, ಭರ್ತಿ ಮಾಡಿರುವ ಸಿಲಿಂಡರ್‌ಗಳನ್ನು ಪಡೆಯಬಹುದು ಎಂದು ವಿವರಿಸಿದರು.