ತಂತ್ರಜ್ಞಾನ

ಇನ್ನು 6 ತಿಂಗಳಲ್ಲಿ ನಿಮ್ಮ ಹಣವನ್ನು ವಾಟ್ಸಪ್ ಮಾಡಬಹುದು..!ತಿಳಿಯಲು ಈ ಲೇಖನ ಓದಿ…

By admin

December 29, 2017

ಪೇಟಿಮ್ ಬಂದ ಮೇಲೆ ಬೇರೆ ಬೇರೆ ಡಿಜಿಟಲ್ ಪೇಮೆಂಟ್ ಆಪ್ ಗಳು ಪ್ರಾರಂಭಿಸಿದವು. ಸಾಮಾಜಿಕ ಜಾಲತಾಣದ ದೈತ್ಯ ವಾಟ್ಸಪ್ ಸದ್ಯದಲ್ಲೇ ಡಿಜಿಟಲ್ ಪೇಮೆಂಟ್ ಶುರು ಮಾಡಲು ಹೊರಟಿದೆ. ಪ್ರಪಂಚದಲ್ಲಿ ಭಾರತದಲ್ಲೇ ಈ ರೀತಿಯ ಮೊದಲ ಹೆಜ್ಜೆ ಇಡುತ್ತಿರುವುದು.

The Ken ಅನ್ನೋ ವೆಬ್ಸೈಟ್ ಪ್ರಕಾರ ಮುಂದಿನ 6 ತಿಂಗಳಲ್ಲೇ ವಾಟ್ಸಪ್ ಪೇಮೆಂಟ್ ಆಪ್ ಆಗುತ್ತದೆ.

ಹೋದ ತಿಂಗಳು ಟ್ರೂಕಾಲರ್ (Truecaller) ಇದೇ ತರಹ ಒಂದು ಮೊಬೈಲ್ ಪೇಮೆಂಟ್ ಸೇವೆ ಶುರು ಮಾಡಿದೆ.

ವಾಟ್ಸಪ್ ಕೂಡಾ ಪೇಮೆಂಟ್ ಆಪ್ ಆದರೆ ಹಣ ಕಳುಹಿಸುವವರಿಗೆ ಹಾಗೂ ತೆಗೆದುಕೊಳ್ಳುವವರಿಗೆ ಅತೀ ಸುಲಭವಾಗುವುದು ಎನ್ನುವುದರಲ್ಲಿ ಎರಡು ಮಾತಿಲ್ಲ..

ವಾಟ್ಸಪ್ ವೆಬ್ ನಲ್ಲಿ ಭಾರತದ UPI ಮತ್ತು BHIM ಆಪ್ ಇವುಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರೋರು ಕೆಲಸಕ್ಕೆ ಬೇಕಾಗಿದ್ದಾರೆ ಎಂದು ಜಾಹೀರಾತು ಹಾಕಿದ್ದಾರೆ.