ಸ್ಪೂರ್ತಿ

ಆಟೋದಲ್ಲಿ ಸಿಕ್ಕ 80,000 ರೂಪಾಯಿಗಳನ್ನು ಮರಳಿಸಿದ್ದ ಡ್ರೈವರ್’ಗೆ ಆಕೆ ನೀಡಿದ್ದು ಏನು ಗೊತ್ತಾ..?ತಿಳಿಯಲು ಇದನ್ನು ಓದಿ…

By admin

March 20, 2018

ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಎಂಬುದು ಎಲ್ಲಿದೆ. ಬಹುತೇಕ ಮಂದಿ ಪ್ರಾಮಾಣಿಕವಾಗಿ ಇರುವುದಿಲ್ಲ. ಆ ರೀತಿ ಇರುವವರು ನೂರಕ್ಕೋ, ಕೋಟಿಗೋ ಒಬ್ಬರಿರುತ್ತಾರೆ. ಅಂತಹವರಲ್ಲಿ ಈಗ ನಾವು ಹೇಳಲಿರುವ ಈತನೂ ಇದ್ದಾನೆ. ಆತನೊಬ್ಬ ಆಟೋಡ್ರೈವರ್. ಆದರೆ ಪ್ರಾಮಾಣಿಕತೆಗೆ ಹೆಸರುವಾಸಿ. ಮಹಿಳೆಯೊಬ್ಬರು ತನ್ನ ಆಟೋದಲ್ಲಿ ತನ್ನ ಬ್ಯಾಗ್ ಮರೆತಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಿದ. ಆತನಿಗೆ ಆ ಮಹಿಳೆ ಊಹಿಸದಂತಹ ಬಹುಮಾನ ನೀಡಿದರು.

ಅದು ಮುಂಬೈನಲ್ಲಿನ ಚೆಂಚೂರ್ ಎಂಬ ಪ್ರದೇಶ. ಅಲ್ಲಿ ಸರಳಾ ನಂಬೂದರಿ (68) ಎಂಬ ಮಹಿಳೆ ಇಂಗ್ಲಿಷ್ ಮೀಡಿಯಂ ಶಾಲೆಯನ್ನು ನಡೆಸುತ್ತಿದ್ದಾರೆ. ಆದರೆ ಕಳೆದ ವರ್ಷ ಡಿಸೆಂಬರ್ 21ರಂದು ಆಕೆ ಮಧ್ಯಾಹ್ನ ಶಾಲೆ ಮುಗಿದ ಕೂಡಲೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಪಾರ್ಕ್ ಮಾಡಿರುವ ತನ್ನ ಕಾರಿನ ಬಳಿಗೆ ಹೋಗಲು ಆಟೋ ಒಂದನ್ನು ಕರೆದರು.

ಅದರಲ್ಲಿ ಆಕೆ ಹೋದರು. ಕಾರು ಬಳಿಗೆ ತಲುಪಿ ಅದನ್ನು ಓಡಿಸುತ್ತಾ ಸ್ವಲ್ಪ ದೂರ ಹೋದಾಗ ಆಗಲೇ ಆಕೆಗೆ ನೆನಪಾಗಿದ್ದು, ಆಟೋದಲ್ಲಿ ತಾನು ಬ್ಯಾಗ್ ಮರೆತಿದ್ದೇನೆಂದು. ಅದರಲ್ಲಿ ರೂ.80 ಸಾವಿರ ನಗದು, ತನ್ನ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು, ಮನೆಯ ಬೀಗ, ಪಾನ್ ಕಾರ್ಡ್ ಇನ್ನಿತರೆ ಮುಖ್ಯವಾದ ಪತ್ರಗಳು, ನಗದು ಇತ್ತು.

ಆ ರೀತಿ ತಾನು ಬ್ಯಾಗ್ ಆಟೋದಲ್ಲಿ ಮರೆತಿದ್ದೇನೆಂದು ಗ್ರಹಿಸಿದ ಸರಳಾ ಕೂಡಲೆ ತನ್ನನ್ನು ಆ ಆಟೋ ಡ್ರೈವರ್ ಇಳಿಸಿದ ಪ್ರದೇಶದ ಬಳಿಗೆ ಹೋದರು. ಅಲ್ಲಿ ಆಟೋ ಇಲ್ಲ. ಪಕ್ಕದಲ್ಲೇ ಇದ್ದ ಪಾನ್ ಶಾಪ್ ಆತನನ್ನು ಕೇಳಿದರು. ಆದರೂ ಆಟೋ ಡ್ರೈವರ್ ವಿವರಗಳು ಗೊತ್ತಾಗಲಿಲ್ಲ. ಇದರಿಂದ ಆಕೆ ವಿಧಿಯಿಲ್ಲದೆ ಪೊಲೀಸರಿಗೆ ದೂರು ನೀಡೋಣ ಎಂದುಕೊಂಡರು. ಆದರೆ ಅಷ್ಟರಲ್ಲೇ ಆ ಆಟೋ ಡ್ರೈವರ್ ಬಂದು ಆಕೆಗೆ ಬ್ಯಾಗ್ ವಾಪಸ್ ಮಾಡಿ ಹೊರಟು ಹೋದರು. ಆರಂಭದಲ್ಲಿ ಶಾಕ್ ಆದರೂ, ಆತನ ವಿವರಗಳನ್ನು ತಿಳಿದುಕೊಳ್ಳಲು ಹೋಗಲಿಲ್ಲ.

ಬಳಿಕ ಆತನ ಬಗ್ಗೆ ತಿಳಿದುಕೊಳ್ಳಲು ತೀವ್ರವಾಗಿ ಪ್ರಯತ್ನಿಸಿದರು. ಕಡೆಗೆ ಹೇಗೋ ತಿಳಿದುಕೊಂಡರು. ಆತನ ಹೆಸರು ಅಮಿತ್ ಗುಪ್ತಾ ಎಂದು ಗೊತ್ತಾಯಿತು. ಇದರಿಂದ ಆತನನ್ನು ಶಾಲೆಗೆ ಕರೆಸಿ ಆತನಿಗೆ ರೂ.10 ಸಾವಿರ ನಗದನ್ನು ಬಹುಮಾನವಾಗಿ ನೀಡಿದರು.